ಎಲ್ಲಾ ಸ್ಟಾರ್ ನಂತರ ಕ್ರಶ್ ರಮ್ಯಾ ಕೃಷ್ಣ: ಆದರೆ ರಮ್ಯಾ ಕೃಷ್ಣ ರವರಿಗೆ ಯಾವ ನಟ ಅಂದರೆ ಕ್ರಶ್ ಅಂತೇ ಗೊತ್ತೇ?? ಅಬ್ಬಬ್ಬಾ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

68

Get real time updates directly on you device, subscribe now.

ಸೌತ್ ಸಿನಿಮಾ ರಂಗದ ಎವರ್ ಗ್ರೀನ್ ನಟಿಯರಲ್ಲಿ ಒಬ್ಬರು ರಮ್ಯಾ ಕೃಷ್ಣನ್. 80 ಮತ್ತು 90ರ ದಶಕದ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಇವರು ಒಬ್ಬರು ಎಂದರೆ ತಪ್ಪಾಗುವುದಿಲ್ಲ. ನಟಿ ರಮ್ಯಾ ಕೃಷ್ಣನ್ ತಮ್ಮ ಚೆಲುವು, ಮತ್ತು ಅಭಿನಯದಿಂದ ಎಲ್ಲರ ಮನಗೆದ್ದವರು. ಎಂಥದ್ದೇ ಪಾತ್ರವಾಗಲಿ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿರುವವರು ರಮ್ಯಾ ಕೃಷ್ಣನ್. ಇಂದಿಗೂ ಸಹ ಇವರಿಗೆ ಬಹುದೊಡ್ಡ ಫ್ಯಾನ್ ಬೇಸ್ ಇದೆ.

ಸೌತ್ ಇಂಡಸ್ಟ್ರಿಯಲ್ಲಿ, ಕನ್ನಡ , ತೆಲುಗು, ತಮಿಳು ಮತ್ತು ಮಲಯಾಳಂ ಎಲ್ಲಾ ಭಾಷೆಗಳಲ್ಲೂ ಬಹಳ ಬೇಡಿಕೆ ಹೊಂದಿದ್ದ ನಟಿಯಾಗಿದ್ದರು ರಮ್ಯಾ ಕೃಷ್ಣನ್. ಎಲ್ಲಾ ಭಾಷೆಗಳ ಸೂಪರ್ ಸ್ಟಾರ್ ಗಳ ಜೊತೆ ನಟಿಸಿ ಅವರಿಗೆ ಪೈಪೋಟಿ ಕೊಡುವ ಹಾಗೆ ಅಭಿನಯ ಮಾಡುತ್ತಿದ್ದರು. ತಮಿಳು ಸಿನಿಮಾ ಪಡಯಪ್ಪ ದಲ್ಲಿ ರಜನಿಕಾಂತ್ ಅವರಿಗೆ ಸಮವಾಗಿದ್ದ ರಮ್ಯಾ ಕೃಷ್ಣನ್ ಅವರ ಅಭಿನಯವನ್ನು ಇಂದಿಗು ಯಾರು ಮರೆತಿಲ್ಲ. ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರ ಇವರಿಗೆ ಅತಿ ಹೆಚ್ಚು ಯಶಸ್ಸನ್ನು ತಂದುಕೊಟ್ಟಿತು. ರಮ್ಯಾ ಅವರು ಈಗ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಜೊತೆಗೆ ರಮ್ಯಾ ಕೃಷ್ಣನ್ ಅವರು ವಿಜಯ್ ಟಿವಿಯ ಬಿಗ್ ಬಾಸ್ ಜೋಡಿ ಸೀಸನ್ 2 ನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಶೋಗೆ ಬ್ರಹ್ಮಾಸ್ತ್ರ ತಂಡದಿಂದ ನಟ ರಣಬೀರ್ ಕಪೂರ್, ನಾಗಾರ್ಜುನ ಅವರು ಗೆಸ್ಟ್ ಆಗಿ ಬಂದಿದ್ದರು. ಆಗ ನಿರೂಪಕಿ ಪ್ರಿಯಾಂಕ ಅವರು ನಾಗಾರ್ಜುನ ಅವರಿಗೆ ನಿಮ್ಮ ಕ್ರಶ್ ಯಾರು ಎಂದು ಪ್ರಶ್ನೆ ಕೇಳಿದ್ದು, ಆಗ ರಮ್ಯಾ ಕೃಷ್ಣನ್ ಅವರು, ಅವರ ಕ್ರಶ್ ಯಾರೇ ಆಗಿರಲಿ, ನನ್ನ ಕ್ರಶ್ ಯಾವಾಗಲೂ ನಾಗಾರ್ಜುನ ಅವರೇ ಎಂದು ಹೇಳಿದ್ದಾರೆ. ಆಗ ನಾಗಾರ್ಜುನ ಅವರು ನಕ್ಕಿದ್ದಾರೆ. ನಾಗಾರ್ಜುನ ಅವರ ಜೊತೆಗೂ ಸಹ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ ರಮ್ಯಾ ಕೃಷ್ಣನ್. ಎಲ್ಲರೂ ರಮ್ಯಾ ಕೃಷ್ಣನ್ ಅವರನ್ನು ಇಷ್ಟಪಟ್ಟರೆ, ಅವರ ಕ್ರಶ್ ಯಾರು ಎಂದು ತಿಳಿದು ಅಭಿಮಾನಿಗಳು ಶಾಕ್ ಆಗಿದ್ದಾರೆ.

Get real time updates directly on you device, subscribe now.