ಹರೀಶ್ ರಾಯ್ ರವರಿಗೆ ಜೊತೆಯಾದ ಕನ್ನಡದ ಖ್ಯಾತ ನಟ ದುನಿಯಾ ವಿಜಯ್: ಕ್ಯಾನ್ಸರ್ ವಿಷಯ ತಿಳಿದ ತಕ್ಷಣ ದುನಿಯಾ ವಿಜಯ್ ಮಾಡಿದ್ದೇನು ಗೊತ್ತೇ??

52

Get real time updates directly on you device, subscribe now.

ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯಾಗಿರುವ ವಿಲ್ಲನ್ ಆರ್ಟಿಸ್ಟ್ ಹರೀಶ್ ರಾಯ್ ಅವರು ಈಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹರೀಶ್ ರಾಯ್ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಆಗಿದೆ. ಇಷ್ಟು ದಿನಗಳ ಕಾಲ ಅವರು ಈ ವಿಚಾರವನ್ನು ಎಲ್ಲಿಯು ಹೇಳಿಕೊಂಡಿರಲಿಲ್ಲ. ಅವರಿಗೆ ಕ್ಯಾನ್ಸರ್ ನಾಲ್ಕನೇ ಸ್ಟೇಜ್ ನಲ್ಲಿದೆ ಎಂದು ಗೊತ್ತಾದ ಬಳಿಕ, ಅವರ ಕುಟುಂಬ ಚಿಕಿತ್ಸೆ ಕೊಡಿಸಲು ಬಹಳ ಕಷ್ಟವಾಗಿತ್ತು ಆ ಸಮಯದಲ್ಲಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡುವಾಗ ಹರೀಶ್ ರಾಯ್ ಅವರು ಈ ವಿಚಾರ ಹೇಳಿಕೊಂಡರು.

ಹರೀಶ್ ರಾಯ್ ಅವರಿಗೆ ಕ್ಯಾನ್ಸರ್ ಇರುವ ವಿಚಾರ ಬಹಿರಂಗವಾದ ಬಳಿಕ ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ ಎಂದು ಸ್ವತಃ ಹರೀಶ್ ರಾಯ್ ಅವರೇ ಹೇಳಿಕೊಂಡಿದ್ದಾರೆ. ಸ್ಟಾರ್ ನಟರೊಬ್ಬರು ಕರೆ ಮಾಡಿ ನಿಮ್ಮ ಚಿಕಿತ್ಸೆಗೆ ಕೋಟಿ ಖರ್ಚಾದರು ನಾನು ನೋಡಿಕೊಳ್ಳುತ್ತೇನೆ ನೀವು ಭಯ ಪಡಬೇಡಿ ಎಂದು ಹೇಳಿರುವುದಾಗಿ ಹರೀಶ್ ರಾಯ್ ಅವರು ಹೇಳಿಕೊಂಡಿದ್ದರು. ಇದೀಗ ಕನ್ನಡದ ಮತ್ತೊಬ್ಬ ಸ್ಟಾರ್ ನಟ ದುನಿಯಾ ವಿಜಯ್ ಅವರು ಹರೀಶ್ ರಾಯ್ ಅವರ ಸಹಾಯಕ್ಕೆ ಬಂದಿದ್ದಾರೆ.

ದುನಿಯಾ ವಿಜಯ್ ಅವರು ಹರೀಶ್ ರಾಯ್ ಅವರಿಗೆ ಕರೆ ಮಾಡಿ, ಮಾತನಾಡಿ, ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ, ಇಷ್ಟು ದಿನ ಈ ವಿಷಯವನ್ನು ಯಾಕೆ ಹೇಳಲಿಲ್ಲ ಎಂದು ಕೇಳಿದ್ದಾರಂತೆ ದುನಿಯಾ ವಿಜಯ್. ಅಷ್ಟೇ ಅಲ್ಲದೆ ಅವರಿಗೆ ಸಹಾಯ ಮಾಡಿದ್ದು, ಹರೀಶ್ ರಾಯ್ ಅವರ ಕುಟುಂಬದ ಬಗ್ಗೆ ಸಹ ವಿಚಾರಿಸಿಕೊಂಡಿದ್ದಾರಂತೆ ನಟ ದುನಿಯಾ ವಿಜಯ್. ಈ ವಿಷಯವನ್ನು ಸ್ವತಃ ಹರೀಶ್ ರಾಯ್ ಅವರು ತಿಳಿಸಿದ್ದಾರೆ. ಜೊತೆಗೆ ಹರೀಶ್ ರಾಯ್ ಅವರಿಗೆ ಕನ್ನಡ ಚಿತ್ರರಂಗದ ಸ್ಟಾರ್ ನಟರು ಕಲಾವಿದರು ಕರೆಮಾಡಿ ಅವರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರಂತೆ.

Get real time updates directly on you device, subscribe now.