ಸತತ ಬೆಲೆ ಏರಿಕೆ ಕಂಡಿದ್ದ ಚಿನ್ನ, ಕುಸಿಯಿತು ಪಾತಾಳಕ್ಕೆ: ಒಂದೇ ದಿನಕ್ಕೆ ಎಷ್ಟು ಕಡಿಮೆ ಯಾಗಿದೆ ಗೊತ್ತೇ??
ನಮ್ಮ ದೇಶದಲ್ಲಿ ಮಾತ್ರವಲ್ಲ ಪ್ರಪಂಚದ ಹಲವೆಡೆ ಜನರಿಗೆ ಚಿನ್ನದ .ಎಲೆ ವಿಶೇಷವಾದ ಪ್ರೀತಿ ಇರುತ್ತದೆ. ಚಿನ್ನದ ಆಭರಣ ಧರಿಸಲು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಚಿನ್ನ ಎಂದರೆ ವಿಶೇಷವಾದ ಒಲವು, ಅದರಲ್ಲೂ ಹೆಣ್ಣುಮಕ್ಕಳಿಗೆ ಚಿನ್ನದ ಬಗ್ಗೆ ವ್ಯಾಮೋಹ ಜಾಸ್ತಿ. ವಿವಿಧ ರೀತಿಯ ಚಿನ್ನದ ಆಭರಣಗಳನ್ನು ಕೊಂಡುಕೊಳ್ಳಲು ಇಷ್ಟಪಡುತ್ತಾರೆ. ಚಿನ್ನ ಧರಿಸಿದರೆ ಇನ್ನು ಸುಂದರವಾಗಿ ಕಾಣಿಸುತ್ತಾರೆ ಎನ್ನುವ ನಂಬಿಕೆ ಸಹ ಅವರಲ್ಲಿರುತ್ತದೆ.
ಆದರೆ ಚಿನ್ನ ಖರೀದಿಯನ್ನು ಯಾವಾಗ ಬೇಕಂದರೆ ಅವಾಗ ಜನರು ಮಾಡುವುದಿಲ್ಲ. ಹಬ್ಬದ ಸಮಯ ಅಥವಾ ಬೇರೆ ವಿಶೇಷತೆ ಇರುವ ಸಮಯದಲ್ಲಿ ಮಾತ್ರ ಚಿನ್ನ ಖರೀದಿ ಮಾಡುವುದು ಹೆಚ್ಚು. ಅದಕ್ಕಿಂತ ಹೆಚ್ಚಾಗಿ ಜನರು ನೋಡುವುದು ಚಿನ್ನದ ಬೆಲೆ, ಚಿನ್ನದ ಬೆಲೆ ಹಲವು ಬಾರಿ ಗಗನಕ್ಕೆ ಏರಿರುವುದನ್ನು ನಾವು ನೋಡಿದ್ದೇವೆ. ಹಾಗಾಗಿ ಚಿನ್ನದ ಬೆಲೆ ಕಡಿಮೆ ಆದ ಕೂಡಲೇ ಜನರು ಚಿನ್ನ ಖರೀದಿ ಮಾಡಲು ಪ್ಲಾನ್ ಮಾಡಿಕೊಳ್ಳುತ್ತಾರೆ ಎನ್ನುವುದು ಸಹ ಒಂದು ಪಾಯಿಂಟ್. ಚಿನ್ನದ ಬೆಲೆಯಲ್ಲಿ ಪ್ರತಿದಿನ ಏರಿಳಿತ ಇದ್ದೇ ಇರುತ್ತದೆ. ಇದೀಗ ಚಿನ್ನದ ಬೆಲೆ ಇಳಿತ ಕಂಡಿದೆ.
ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಬಹಳ ಏರಿಕೆ ಕಂಡುಬಂದಿತ್ತು. ಇದೀಗ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದ್ದು, ನೀವು ಚಿನ್ನ ಖರೀದಿ ಮಾಡಲು ಇದು ಅತ್ಯುತ್ತಮವಾದ ಸಮಯ ಆಗಿದೆ. ನಮ್ಮ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ಈಗ ತಿಳಿಸುತ್ತೇವೆ.. ಭಾರತದ ಎಲ್ಲಾ ದೊಡ್ಡ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಮ್ ಚಿನ್ನದ ಬೆಲೆ 47,350 ರೂಪಾಯಿ ಆಗಿದೆ, ಹಾಗೂ 24ಕ್ಯಾರೆಟ್ ಚಿನ್ನದ ಬೆಲೆ 51,650 ರೂಪಾಯಿ ಆಗಿದೆ. ಚಿನ್ನದ ಬೆಲೆ ಇಷ್ಟು ಇಳಿಕೆ ಕಂಡಿರುವಾಗ ತಪ್ಪದೆ ಚಿನ್ನ ಖರೀದಿಸಿ.