ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿರುವ ಲೈಗರ್ ಸಿನಿಮಾ ಕುರಿತು ಕೇಳಿದಾಗ ನಟಿ ರಿಯಾಕ್ಷನ್ ಹೇಗಿತ್ತು ಗೊತ್ತೇ?? ಮೆರೆಯುತ್ತಿದ್ದವರು ಹೀಗ್ಯಾಕೆ ಆದರು
ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹಳ ಹೈಪ್ ಸೃಷ್ಟಿಸಿದ್ದ ಸಿನಿಮಾ ಲೈಗರ್. ಈ ಸಿನಿಮಾ ಬಗ್ಗೆ ಭಾರಿ ಪ್ರೊಮೋಷನ್ ಗಳನ್ನು ಮಾಡಲಾಗಿತ್ತು. ಲೈಗರ್, ಪ್ಯಾನ್ ಇಂಡಿಯಾ ಸಿನಿಮಾ ಆಗಿ ತೆಲುಗು, ಹಿಂದಿಜ್ ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಕಂಡಿತು. ಈ ಸಿನಿಮಾದಲ್ಲಿ ರೌಡಿ ಹುಡುಗ ವಿಜಯ್ ದೇವರಕೊಂಡ ನಾಯಕನಾಗಿದ್ದು, ಅನನ್ಯ ಪಾಂಡೆ ನಾಯಕಿಯಾಗಿದ್ದಾರೆ. ಅನನ್ಯ ಪಾಂಡೆ ಮತ್ತು ವಿಜಯ್ ದೇವರಕೊಂಡ ಇಬ್ಬರಿಗೂ ಸಹ ಇದು ಮೊದಲ ಪ್ಯಾನ್ ಇಂಡಿಯಾ ಸಿನಿಮಾ.
ತೆಲುಗಿನ ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಧ್ ಅವರು ಈ ಸಿನಿಮಾವನ್ನು ನಿರ್ದೇಶಿಸಿ ನಿರ್ಮಾಣ ಸಹ ಮಾಡಿದ್ದಾರೆ. ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇತ್ತು. 200ಕೋಟಿಗಿಂತ ಹೆಚ್ಚಿನ ಕಲೆಕ್ಷನ್ ಮಾಡುತ್ತದೆ ಎಂದು ನಿರೀಕ್ಷೆ ಇತ್ತು. ಆದರೆ ಎಲ್ಲಾ ನಿರೀಕ್ಷೆಯನ್ನು ಲೈಗರ್ ಸಿನಿಮಾ ಹುಸಿ ಮಾಡಿದೆ, ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನವೇ ಸೋಲು ಕಂಡಿದೆ. ಕೋಟಿ ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿದ್ದು, ಇದೀಗ ಸಿನಿಮಾ ಚೆನ್ನಾಗಿಲ್ಲ ಎಂದು ಪ್ರೇಕ್ಷಕ ಹೇಳಿದ್ದು, ಸಿನಿಮಾಗೆ ಎಲ್ಲೆಡೆ ನೆಗಟಿವ್ ರಿಪೋರ್ಟ್ ಹಾಗೂ ನೆಗಟಿವ್ ರಿವ್ಯೂ ಕೇಳಿ ಬರುತ್ತಿದೆ.
ಸಿನಿಮಾ ಸೋಲನ್ನು ಕಂಡ ಬೆನ್ನಲ್ಲಿ, ಅನನ್ಯ ಪಾಂಡೆ ಅವರು ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಪತ್ರಕರ್ತರು ಅನನ್ಯ ಪಾಂಡೆ ಅವರ ಫೋಟೋಗಳನ್ನು ಕ್ಲಿಕ್ಕಿಸಿದ್ದು, ಹಾಗೆಯೇ ಅನ್ಯನ್ಯ ಪಾಂಡೆ ಅವರಿಗೆ ಲೈಗರ್ ಬಗ್ಗೆ ಕೇಳಿದ್ದು, ಆಗ ಅನನ್ಯ ಪಾಂಡೆ ರಿಯಾಕ್ಷನ್ ಬೇರೆಯೇ ರೀತಿ ಇದೆ. ಪತ್ರಕರ್ತರು ಲೈಗರ್ ಎಂದು ಹೇಳಿದಾಗ, ಅನನ್ಯ ಪಾಂಡೆ ಅವರು yeah ಎಂದು ಹೇಳಿ, ಮುಖವನ್ನು ಒಂದು ರೀತಿ ಮಾಡಿಕೊಂಡು ಹೋಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.