ಅಭ್ಯಾಸ ಮಾಡುವಾಗ ವೀಲ್ ಚೇರ್ ನಲ್ಲಿ ಬಂದ ಪಾಕಿಸ್ತಾನಿ ಮಹಿಳಾ ಅಭಿಮಾನಿ ಕಂಡು ಪ್ರಾಕ್ಟೀಸ್ ಬಿಟ್ಟು ಓಡಿದ ಕೊಹ್ಲಿ.
ವಿರಾಟ್ ಕೋಹ್ಲಿ ಅವರು ಕ್ರಿಕೆಟ್ ಲೋಕದಲ್ಲಿ ಕಿಂಗ್ ಕೋಹ್ಲಿ ಎಂದೇ ಹೆಸರು ಮಾಡಿದ್ದಾರೆ. ವಿರಾಟ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕ್ರಿಕೆಟಿಗ, ವಿಶ್ವವ್ಯಾಪ್ತಿಯಾಗಿ ಇವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ವಿರಾಟ್ ಅವರು ಪ್ರಸ್ತುತ ಭಾರತ ತಂಡದ ಜೊತೆಗೆ ಯುಎಇ ನಲ್ಲಿ ಬೀಡು ಬಿಟ್ಟಿದ್ದಾರೆ. ನಾಳೆಯಿಂದ ಶುರುವಾಗಲಿರುವ ಏಷ್ಯಾಕಪ್ ಪಂದ್ಯಗಳಿಗೆ ಭಾರತ, ಆಫ್ಘಾನಿಸ್ತಾನ್ ಹಾಗೂ ಪಾಕಿಸ್ತಾನ್ ತಂಡಗಳು ಅಭ್ಯಾಸ ನಡೆಸುತ್ತಿದೆ. ವಿರಾಟ್ ಕೋಹ್ಲಿ ಅವರು ಕಳಪೆ ಫಾರ್ಮ್ ಇಂದ ಹೊರಬರಲು, ತಡ ರಾತ್ರಿ ವರೆಗೂ ಅಭ್ಯಾಸ ಮಾಡುತ್ತಿದ್ದಾರೆ.
ಯುಎಇ ಅಂತಾರಾಷ್ಟ್ರೀಯ ಕ್ರಿಕೆಟ್ ಗ್ರೌಂಡ್ ನಲ್ಲಿ ಪಂದ್ಯಗಳು ನಡೆಯಲಿದೆ. ಯುಎಇ ನಲ್ಲೂ ವಿರಾಟ್ ಅವರ ಅಭಿಮಾನಿಗಳ ಸಂಖ್ಯೆ ಏನು ಕಡಿಮೆ ಇಲ್ಲ. ಗ್ರೌಂಡ್ ಬಳಿ ಸಾಕಷ್ಟು ಅಭಿಮಾನಿಗಳು ಬಂದು, ವಿರಾಟ್ ಅವರನ್ನು ನೋಡಿ, ಅವರ ಜೊತೆಗೆ ಸೆಲ್ಫಿ ಮತ್ತು ಆಟೋಗ್ರಾಫ್ ತೆಗೆಸಿಕೊಳ್ಳಲು ಕಾದಿದ್ದಾರೆ. ಅದರಲ್ಲೂ ಪಾಕಿಸ್ತಾನದ ಅಭಿಮಾನಿಗಳೇ ಹೆಚ್ಚು ಎನ್ನಲಾಗುತ್ತಿದೆ. ಹೀಗೆ ಅಭಿಮಾನಿಗಳ ಸಾಲಿನಲ್ಲಿ ಪಾಕಿಸ್ತಾನದ ವಿಶೇಷ ಚೇತನ ಅಭಿಮಾನಿ ಸಹ ಇದ್ದು, ಆಕೆ ವಿರಾಟ್ ಅವರೊಡನೆ ಫೋಟೋ ತೆಗೆಸಿಕೊಳ್ಳಬೇಕು ಎನ್ನುವ ಆಸೆಯಲ್ಲಿದ್ದಳು.
ಎಷ್ಟೇ ಹೇಳಿದರು ಕೇಳದೆ, ವಿರಾಟ್ ಅವರನ್ನು ಭೇಟಿಯಾಗಿಯೇ ತೀರುತ್ತೇನೆ ಎಂದು ಹಠದಲ್ಲಿದ್ದಳು, ಆ ಅಭಿಮಾನಿಯನ್ನು ಭೇಟಿ ಮಾಡಿದ ವಿರಾಟ್, ಆಕೆಯ ಆಸೆ ಈಡೇರಿಸಿದ್ದಾರೆ. ವಿರಾಟ್ ಅವರು ಅಭಿಮಾನಿಯ ಬಳಿ ಬಂದು, ಆಕೆಯನ್ನು ಮಾತನಾಡಿಸಿ, ಫೋಟೋ ಸಹ ತೆಗೆಸಿಕೊಂಡಿದ್ದು, ಆಕೆಯ ಸಂತೋಷಕ್ಕೆ ಪಾರವೇ ಇಲ್ಲ. ವಿರಾಟ್ ಅವರಿಗಾಗಿ ಕಾದು ಕುಳಿತು, ಕೊನೆಗೆ ಅವರೇ ಬಂದು ಮಾತನಾಡಿಸಿರುವುದು ಆಕೆಗೆ ಬಹಳ ಸಂತೋಷ ಆಗಿದ್ದು, ಈ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ವಿಶೇಷ ಚೇತನ ಅಭಿಮಾನಿ ಮಾಧ್ಯಮದ ಮುಂದೆ ಸಹ ಮಾತನಾಡಿದ್ದು, ನೀವು ಸಹ ವಿಡಿಯೋ ನೋಡಿ..