ಸೀಕ್ರೆಟ್ ಆಗಿ ಮದುವೆಯಾಗಿ ಎಲ್ಲರಿಗೂ ಶಾಕ್ ನೀಡಿದ ಟಾಪ್ ಸೆಲೆಬ್ರೆಟಿಗಳು ಯಾರ್ಯಾರು ಗೊತ್ತೇ?

40

Get real time updates directly on you device, subscribe now.

ಸೆಲೆಬ್ರಿಟಿಗಳ ಜೀವನದಲ್ಲಿ ಪ್ರೇಕ್ಷಕರು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ಅದರಲ್ಲೂ ಸೆಲೆಬ್ರಿಟಿಗಳ ಮದುವೆಗಳು ಲವ್ ಸ್ಟೋರಿಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ..ಆದರೆ ಭಾರತ ಚಿತ್ರರಂಗದಲ್ಲಿ ಕೆಲ ಹೀರೋಯಿನ್ ಗಳು ಗುಟ್ಟಾಗಿ ಮದುವೆಯಾಗಿ ಆ ಸುದ್ದಿಯಿಂದ ಹಾಟ್ ಟಾಪಿಕ್ ಆದರು ಆ ನಾಯಕಿಯರು ಯಾರೆಂದು ಈಗ ತಿಳಿಸುತ್ತೇವೆ ನೋಡಿ..

*ಒಂದು ಕಾಲದ ಸ್ಟಾರ್ ಹೀರೋಯಿನ್ ಆಗಿದ್ದ ಮಹಾನಟಿ ಸಾವಿತ್ರಿ ಅವರು ನಟ ಜೆಮಿನಿ ಗಣೇಶನ್ ಅವರನ್ನು ರಹಸ್ಯವಾಗಿ ಮದುವೆಯಾಗಿ ಹಾಟ್ ಟಾಪಿಕ್ ಆಗಿದ್ದರು. ಲಕ್ಸ್ ಸಾಬೂನ್ಜ ಪ್ರಚಾರದಲ್ಲಿ ಅವರು ಸಾವಿತ್ರಿ ಗಣೇಶನ್ ಎಂದು ಸಹಿ ಹಾಕಿದಾಗ, ಮದುವೆ ವಿಷಯ ಹೊರಬಂದಿತು. ಮತ್ತೊಂದೆಡೆ, ಜೇಮಿನಿ ಗಣೇಶನ್ ಅವರಿಗೆ ಇದು ಎರಡನೇ ಮದುವೆ ಆಗಿತ್ತು.
*ನಟಿ ಸೀತಾ ಕೂಡ ಗುಟ್ಟಾಗಿ ಮದುವೆಯಾದರು. ಮುದ್ದುಲ ಮಾವಯ್ಯ ಚಿತ್ರ

ದಲ್ಲಿ ಸೀತಾ ಬಾಲಕೃಷ್ಣ ಅವರ ಸಹೋದರಿಯಾಗಿ ನಟಿಸಿದ್ದರು. ಕಾಲಿವುಡ್ ನಲ್ಲಿ ಯಶಸ್ವಿ ನಾಯಕಿಯಾದರು. 2010 ರಲ್ಲಿ ಧಾರಾವಾಹಿ ನಟ ಸತೀಶ್ ಅವರನ್ನು ರಹಸ್ಯವಾಗಿ ವಿವಾಹವಾಗಿದ್ದರು ನಟಿ ಸೀತಾ.

*ಬ್ಯೂಟಿಫುಲ್ ನಟಿ ಶ್ರೀದೇವಿ ಕೂಡ ರಹಸ್ಯವಾಗಿ ಮದುವೆಯಾದರು. ಶ್ರೀದೇವಿ ನಾಯಕಿಯಾಗಿ ಬ್ಯುಸಿಯಾಗಿರುವಾಗಲೇ ನಿರ್ಮಾಪಕ ಬೋನಿಕಪೂರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ನಂತರ ಬೋನಿ ಕಪೂರ್ ಶ್ರೀದೇವಿ ಅವರ ಜೊತೆಗೆ ಎರಡನೇ ಮದುವೆಯಾದರು.
*ನಿರ್ದೇಶಕ ಕೃಷ್ಣ ವಂಶಿ ಅವರನ್ನು ನಟಿ ರಮ್ಯಾ ಕೃಷ್ಣ ರಹಸ್ಯವಾಗಿ ಮದುವೆಯಾದರು. ಇಬ್ಬರೂ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. 2003 ರಲ್ಲಿ ಮದುವೆಯಾದರು.
*ಸ್ಟಾರ್ ಹೀರೋಯಿನ್ ಶ್ರೀಯಾ ಕೂಡ ಸೀಕ್ರೆಟ್ ಆಗಿ ಮದುವೆಯಾಗಿ ಸುದ್ದಿಯಾಗಿದ್ದರು. ರಷ್ಯಾದ ಆಂಡ್ರಿ ಕೊಶಿವ್ ಎಂಬಾತನನ್ನು ಶ್ರೀಯಾ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೇಮ ಪ್ರಕರಣ ಬಹಿರಂಗವಾಗಿ ಬಹಳ ದಿನಗಳಾಗಿವೆ. ಇಬ್ಬರಿಗೂ ಮದುವೆಯಾಗಿ ಮಗು ಆಗುವವರೆಗೂ ವಿಷಯ ಹೊರ ಬಂದಿರಲಿಲ್ಲ.

Get real time updates directly on you device, subscribe now.