ಈ ಬಾರಿಯೂ ಕೂಡ ಲಾಭಗಳಿಕೆ ಕಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ: ಈ ಬಾರಿ ಗಳಿಸಿದ್ದು ಎಷ್ಟು ಕೋಟಿ ಗೊತ್ತೆ??
ಚೆನ್ನೈ ಸೂಪರ್ ಕಿಂಗ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡದ ಮಾಲೀಕತ್ವ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್, ಕಳೆದ ವರ್ಷ ಹಣಕಾಸು ವಿಚಾರದಲ್ಲಿ 349.14 ಕೋಟಿ ರೂಪಾಯಿ ಆದಾಯದೊಂದಿಗೆ 32.12 ಕೋಟಿ ರೂಪಾಯಿಗಳ ಲಾಭದೊಂದಿಗೆ ಸಂಸ್ಥೆ ಈ ವರ್ಷ ಕ್ಲೋಸ್ ಆಗಿದೆ ಎಂದು ಮಾಹಿತಿ ಸಿಕ್ಕಿದೆ.
FY21 ರ ಅವಧಿಯಲ್ಲಿ, ಸಿ.ಎಸ್.ಕೆ ಕಂಪನಿಯು 253.69 ಕೋಟಿ ರೂಪಾಯಿಗಳ ಒಟ್ಟು ಆದಾಯ ಹಾಗು 40.26 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ಗಳಿಸಿದೆ. ಈ ಕಂಪನಿಯ ವಾರ್ಷಿಕ ವರದಿಯ ಪ್ರಕಾರ, ಸಿ.ಎಸ್.ಕೆ ತಂಡ ಐಪಿಎಲ್ ಪ್ರಶಸ್ತಿ ಗೆದ್ದಂತೆ ಕಂಪನಿಯ ಒಟ್ಟು ಆದಾಯವು ಹೆಚ್ಚಾಯಿತು ಹಾಗೂ ಹೆಚ್ಚಿನ ವೆಚ್ಚಗಳ ಕಾರಣದಿಂದಾಗಿ ನಿವ್ವಳ ಲಾಭವು ಕಡಿಮೆಯಾಗಿದೆ ಎಂದು ಮಾಹಿತಿ ಸಿಕ್ಕಿದೆ.
“ಭಾರತದಲ್ಲಿ ನಡೆದ ಐಪಿಎಲ್ ಸೀಸನ್ 14 ಅನ್ನು ಕೋವಿಡ್ ಸೋಂಕು ಹರಡುವಿಕೆಯಿಂದಾಗಿ 2021 ರಲ್ಲಿ ಮಧ್ಯದಲ್ಲಿ ರದ್ದುಗೊಳಿಸಲಾಯಿತು, ಈ ಪಂದ್ಯಾವಳಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ವರ್ಗಾಯಿಸಲಾಯಿತು, ಇದರ ಪರಿಣಾಮವಾಗಿ ಹೆಚ್ಚಿನ ವೆಚ್ಚ ಮಾಡಲಾಗಿತ್ತು” ಎಂದು ಕಂಪನಿ ಹೇಳಿದೆ. ಹಾಗಾಗಿ ಈ ವರ್ಷ 32 ಕೋಟಿ ರೂಪಾಯಿ ಲಾಭ ಗಳಿಸಿದೆ. ಈ ವರ್ಷ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನ ಕಳಪೆಯಾಗಿತ್ತು. ಮುಂದಿನ ವರ್ಷ ಹೇಗೆ ಕಂಬ್ಯಾಕ್ ಮಾಡುತ್ತದೆ ಎಂದು ಕಾದು ನೋಡಬೇಕಿದೆ.