ಯಾರನ್ನಾದರೂ ನೋಡಿ, ಬುದ್ದಿವಂತರು ಮಾತ್ರ ಸಂತೋಷವಾಗಿರುವುದಿಲ್ಲ, ಅದ್ಯಾಕೆ ಗೊತ್ತೇ?? ಹಿಂದಿನ ಕಾರಣವೇನು ಗೊತ್ತೇ??
ಪ್ರಪಂಚದಲ್ಲಿ ಬುದ್ಧಿವಂತರ ಸ್ವಭಾವ, ಅವರ ನಡವಳಿಕೆ ಎಲ್ಲವೂ ಬೇರೆ ರೀತಿಯೇ ಇರುತ್ತದೆ. ಬುದ್ಧಿವಂತರು ಹೆಚ್ಚಾಗಿ ಬೇಸರ ಗೊಳ್ಳುತ್ತಾರೆ, ಯಾವಾಗಲೂ ಏನಾದರು ಹುಡುಕುತ್ತಾ ಇರುತ್ತಾರೆ, ಕೆಲಸ ಅಥವಾ ಜೀವನ ಉತ್ತಮವಾಗಿ ಇರಬೇಕು ಎಂದು ಬಯಸುವ ಇವರು, ಸಣ್ಣ ವಿಚಾರಗಳಿಂದ ಬೇಸರಗೊಳ್ಳುತ್ತಾರೆ. ಒಂದು ಘಟನೆ ಮತ್ತು ವಿಚಾರದ ಬಗ್ಗೆ ಸಾಮಾನ್ಯ ಜನರಿಗಿಂತ ಹೆಚ್ಚಾಗಿ ಯೋಚನೆ ಮಾಡುತ್ತಾರೆ. ಹಲವು ವಿಚಾರಗಳ ಬಗ್ಗೆ ಇವರು ಯಾವಾಗಲೂ ಯೋಚನೆ ಮಾಡುತ್ತಾ ಇರುತ್ತಾರೆ.
ಬುದ್ಧಿವಂತ ಜನರಿಗೆ ತೃಪ್ತಿ ಇರುವುದಿಲ್ಲ, ಎಲ್ಲದರಲ್ಲೂ ಉತ್ತಮ ಸಾಧ್ಯತೆ ಹುಡುಕತ್ತಲೇ ಇರುತ್ತಾರೆ. ತಮ್ಮ ಸುತ್ತಲೇ ಇರುವ, ಕೇಳಿ ಅರ್ಥ ಮಾಡಿಕೊಳ್ಳುವ ಜನರನ್ನು ಇವರು ಪರಿಚಯ ಮಾಡಿಕೊಳ್ಳುವುದಿಲ್ಲ. ಅವರು ಹೀಗೆ ಇರುವ ಕಾರಣ ಬೇರೆಯವರಿಗೂ ಅದೇ ರೀತಿ ಮಾಡುತ್ತಾರೆ. ಒಂದು ನಿರ್ಧಾರದಿಂದ ಈ ರೀತಿಯ ಪರಿಣಾಮ ಪಡೆದುಕೊಳ್ಳುತ್ತೇವೆ ಎಂದು ಅಂದುಕೊಂಡಿರುತ್ತಾರೆ, ಬೇರೆ ರೀತಿ ಫಲಿತಾಂಶ ಬಂದರೆ, ಅತೃಪ್ತರಾಗುತ್ತಾರೆ. ಅದನ್ನು ಅಲ್ಲಿಗೆ ಬಿಡದೆ, ಆ ರೀತಿ ಆಗಲು ಕಾರಣ ಯಾರು ಎಂದು ಹುಡುಕುವ ಪ್ರಯತ್ನ ಮಾಡುತ್ತಾರೆ.
ಅತಿಹೆಚ್ಚಾಗಿ ತಿಳುವಳಿಕೆ ಇರುವ ಇವರು, ತಮ್ಮ ಬಗ್ಗೆ ತಾವೇ ಮೌಲ್ಯಮಾಪನ ಮಾಡಬೇಕು ಎಂದರೆ ಕೀಳಾಗಿ ಕಾಣುತ್ತಾರೆ. ಬುದ್ಧಿವಂತರು ತಮ್ಮ ಜೊತೆ ಇರುವವರಿಗಿಂತ ಹೆಚ್ಚಾಗಿ ತಮ್ಮ ಬಗ್ಗೆ ಮಾತ್ರ ಹೆಚ್ಚಾಗಿ ಯೋಚನೆ ಮಾಡುತ್ತಾರೆ. ಇದರಿಂದ ಬುದ್ಧಿವಂತರು ಹೆಚ್ಚು ತೊಂದರೆಗಳನ್ನು ಸಹ ಅನುಭವಿಸುತ್ತಾರೆ. ಕೆಟ್ಟದ್ದು ಸಹ ಆಗುತ್ತದೆ. ಇದರಿಂದಲೇ ಅವರಿಗೆ ಅತ್ಯಂತ ದುಃಖ ಉಂಟಾಗುತ್ತದೆ. ಬುದ್ಧಿವಂತರಿಗೆ ಹೆಚ್ಚಾಗಿ ಮಾನಸಿಕ ಸಮಸ್ಯೆಗಳು ಕಾಡುತ್ತವೆ. ಬೈಪೋಲಾರ್ ಡಿಸಾರ್ಡರ್, ಇದು ಇತರೆ ಜನರಿಂದ ಆಗುವ ಪ್ಯಾನಿಕ್ ಅಥವಾ ಬೇರೆ ಮಾನಸಿಕ ಅಸ್ವಸ್ಥೆ ಆಗಿರಬಹುದು. ಇದು ಬುದ್ಧಿವಂತರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.