ಕನ್ನಡದ ಕುವರಿ, ತೆಲುಗಿನ ಸುಂದರಿ ಸೌಂದರ್ಯ ಬಗ್ಗೆ ಮಾತು ಜಾರಿದ ಟಾಪ್ ನಟ ಜಗಪತಿಬಾಬು: ನಟಿ ಜೊತೆ ಅಫೇರ್ ಬಗ್ಗೆ ಹೇಳಿದ್ದೇನು ಗೊತ್ತೇ??

64

Get real time updates directly on you device, subscribe now.

ಕನ್ನಡದ ಮುದ್ದು ಹುಡುಗಿ ನಟಿ ಸೌಂದರ್ಯ ಯಾರಿಗೆ ತಾನೇ ಗೊತ್ತಿಲ್ಲ. ಕನ್ನಡದಿಂದ ಶುರುವಾದ ಜರ್ನಿ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಭಾಷೆಯ ಸಿನಿಮಾದಲ್ಲಿ ನಟಿಸಿ ಒಳ್ಳೆಯ ಹೆಸರು ಪಡೆದಿದ್ದಾರೆ. ಸೌಂದರ್ಯ ಅವರು ಹೆಚ್ಚು ಹೆಸರು ಮಾಡಿದ್ದು ತೆಲುಗು ಚಿತ್ರರಂಗದಲ್ಲಿ. ತೆಲುಗಿನಲ್ಲಿ ಮಹಾನಟಿ ಸೌಂದರ್ಯ ಅವರ ಸ್ಥಾನ ತುಂಬುವವರು ಸೌಂದರ್ಯ ಅವರು ಮಾತ್ರ ಎನ್ನುವ ಮಾತುಗಳು ಸಹ ಕೇಳಿ ಬಂದಿತ್ತು. ಆದರೆ ಕೆರಿಯರ್ ನಲ್ಲಿ ಪೀಕ್ ನಲ್ಲಿರುವಾಗಲೇ, ವಿಮಾನ ಅಪಘಾತದಲ್ಲಿ ಮೃತರಾದರು.

ಸೌಂದರ್ಯ ಅವರು ಪೀಕ್ ನಲ್ಲಿ ಇರುವಾಗಲೇ ಅವರ ಬಗ್ಗೆ ಒಂದು ಗಾಸಿಪ್ ಹರಿದಾಡಿತ್ತು. ಅದೇನೆಂದರೆ, ಸೌಂದರ್ಯ ಅವರಿಗೆ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಅವರೊಡನೆ ಅಫೇರ್ ಹೊಂದಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅವರಿಬ್ಬರು ಜೊತೆಯಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜಗಪತಿಬಾಬು ಹಾಗೂ ಸೌಂದರ್ಯ ಅವರು ಜೊತೆಯಾಗಿ ನಟಿಸಿರುವ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಹಾಗಾಗಿ ಇವರ ನಡುವೆ ಅಫೇರ್ ಇದೆ ಎನ್ನುವ ವಿಚಾರ ವೈರಲ್ ಆಗಿತ್ತು. ಸೌಂದರ್ಯ ಅವರು ಈಗ ಇಲ್ಲ, ಆದರೆ ಅವರ ಜೊತೆಗಿನ ಅಫೇರ್ ವಿಚಾರದ ಬಗ್ಗೆ ನಟ ಜಗಪತಿ ಬಾಬು ಅವರು ಈಗ ಕ್ಲಾರಿಟಿ ನೀಡಿದ್ದಾರೆ.

ಸೌಂದರ್ಯ ಅವರ ಜೊತೆಗೆ ನಿಮಗೆ ಅಫೇರ್ ಇತ್ತು ಎನ್ನುವ ಗಾಸಿಪ್ ಕೇಳಿ ಬಂದಿತ್ತು, ಅದು ನಿಜವೇ ಎಂದು ಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರಿಸಿರುವ ಜಗಪತಿ ಬಾಬು ಅವರು, “ನನಗೂ ಸೌಂದರ್ಯ ಅವರಿಗೂ ಅಫೇರ್ ಇತ್ತು, ಆದರೆ ಅದು ನೀವೆಂದುಕೊಂಡಿರುವ ರೀತಿ ಅಫೇರ್ ಅಲ್ಲ. ಅವರ ಅಣ್ಣ ಅಮರ್ ನಾಥ್ ನನಗೆ ಒಳ್ಳೆಯ ಸ್ನೇಹಿತರಾಗಿದ್ದರು, ಹಾಗಾಗಿ ಎರಡು ಕುಟುಂಬಗಳು ಬಹಳ ಕ್ಲೋಸ್ ಆಗಿತ್ತು, ನಮ್ಮ ಮನೆ ಸಮಾರಂಭಕ್ಕೆ ಅವರೆಲ್ಲ ಬರ್ತಾ ಇದ್ರು, ನಾವು ಅವರ ಮನೆಗೆ ಹೋಗ್ತಾ ಇದ್ವಿ. ಅಫೇರ್ ಇತ್ತು ಎನ್ನುವುದು ಸುಳ್ಳು ಸುದ್ದಿ. ಆಗ ನಾನು ಸೌಂದರ್ಯ ಜೊತೆಯಾಗಿ ನಟಿಸಿದ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು, ಅದರಿಂದ ನಮ್ಮ ನಡುವೆ ಅಫೇರ್ ಇತ್ತು ಎಂದು ಗಾಸಿಪ್ ಹರಿದಾಡಿತ್ತು. ಆದರೆ ಅದ್ಯಾವುದಕ್ಕು ತಲೆಕೆಡಿಸಿಕೊಳ್ಳದೆ, ನಮ್ಮ ಪಾಡಿಗೆ ನಾವು ಸಿನಿಮಾ ಮಾಡ್ತಾ ಇದ್ವಿ ಎಂದು ಹೇಳಿದ್ದಾರೆ ನಟ ಜಗಪತಿ ಬಾಬು.

Get real time updates directly on you device, subscribe now.