ಮದುವೆಯಾಗಿರುವ ಹೀರೊಯಿನ್ ಹಿಂದೆ ಬಿದ್ದ ನಾಗ ಚೈತನ್ಯ: ಆಕೆಯನ್ನು ನೋಡಿದ ಕೂಡಲೇ ಒಮ್ಮೆಯಾದರೂ….
ಈ ನಡುವೆ ನಾಗಚೈತನ್ಯ ಸದಾ ಸುದ್ದಿಯಲ್ಲಿದ್ದಾರೆ. ಚೈತು ಯಾವಾಗಲೂ ವಿವಾದಗಳು ಮತ್ತು ವಿವಾದಾತ್ಮಕ ಕಮೆಂಟ್ ಗಳಿಂದ ದೂರವಿರುತ್ತಾರೆ. ಆದರೆ ವಿಚ್ಛೇದನದ ನಂತರ, ಅವರು ಸ್ವಲ್ಪ ಬೇರೆಯ ರೀತಿಯಲ್ಲೇ ಇದ್ದಾರೆ. ಅಂದರೆ ಮನಸಿಗೆ ಅನಿಸಿದ್ದನ್ನು ಬಹಿರಂಗವಾಗಿ ಹೇಳುತ್ತಾ ಸುದ್ದಿಯಲ್ಲಿದ್ದಾರೆ. ಚೈತನ್ಯ ಅವರು ಹತಾಶೆಯಲ್ಲಿದ್ದಾರೆ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ, ಆ ನಿರಾಶೆ ಕಡಿಮೆ ಆದ ಹಾಗೆ ಕಾಣಿಸುವುದಿಲ್ಲ.
ಎಂದೂ ಹೇಳದ ಕೆಲವು ಗುಟ್ಟುಗಳನ್ನು ಹೇಳುತ್ತಿದ್ದಾರೆ ಚೈತು. ಇತ್ತೀಚೆಗೆ ಕಾರಿನಲ್ಲಿ ಹುಡುಗಿಯೊಂದಿಗೆ ರೊಮ್ಯಾನ್ಸ್ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದೇನೆ ಎಂದು ಹೇಳಿ ಬಾಂಬ್ ಸ್ಫೋಟಿಸಿದ್ದರು. ಅದಕ್ಕಿಂತ ಮೊದಲು ತಮ್ಮ ಪ್ರೇಮಕಥೆಗಳನ್ನು ಹೇಳಿದ್ದರು. ಈ ಹಿಂದೆ ಅವರು ಈ ರೀತಿಯ ಯಾವುದೇ ವೈಯಕ್ತಿಕ ವಿಷಯಗಳನ್ನು ಬಹಿರಂಗಪಡಿಸಿರಲಿಲ್ಲ. ಈಗ ಚೈತು ಇನ್ನೊಂದು ಮಾತು ಹೇಳಿದ್ದಾರೆ. ಇತ್ತೀಚೆಗಷ್ಟೇ ಅವರು ಲಾಲ್ ಸಿಂಗ್ ಚಡ್ಡಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಬಾಲರಾಜ್ ಪಾತ್ರಕ್ಕೆ ಚೈತು ಉತ್ತಮ ಅಂಕ ಪಡೆದರು. ಆದರೆ ಈ ಸಿನಿಮಾದ ಪ್ರಚಾರದ ಭಾಗವಾಗಿ ಅವರು ಆಗಾಗ್ಗೆ ಬಾಲಿವುಡ್ ಮಾಧ್ಯಮಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸಿದರು.
ಈ ಸಂದರ್ಶನದ ಭಾಗವಾಗಿ ನೀವು ಬಾಲಿವುಡ್‌ನಲ್ಲಿ ಯಾವ ನಾಯಕಿಯೊಂದಿಗೆ ನಟಿಸಲು ಬಯಸುತ್ತೀರಿ ಎಂದು ಕೇಳಲಾಯಿತು. ಆಗ ಚೈತು ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ ಮತ್ತು ಆಲಿಯಾ ಭಟ್ ಅವರೊಂದಿಗೆ ನಟಿಸಲು ಬಯಸುತ್ತೇನೆ ಎಂದು ಚೈತು ಹೇಳಿದರು. ಅದರಲ್ಲು ಆಲಿಯಾ ಭಟ್ ಅವರ ನಟನೆ ತಮಗಡ್ ಇಷ್ಟವಾಗಿದ್ದು, ಅವರ ಜೊತೆ ಒಮ್ಮೆಯಾದರು ನಟಿಸುವ ಆಸೆ ಇದೆ ಎಂದು ವಿವರಿಸಿದರು. ಈ ಉತ್ತರದಿಂದಾಗಿ ಮದುವೆಯಾದ ನಾಯಕಿಯರನ್ನು ಚೈತು ಪ್ರೀತಿಸುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಚೈತು ಬದಲಾಗಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಚೈತನ್ಯ ಅವರ ಈ ಆಸೆ ಈಡೇರುತ್ತದೆಯೋ ಇಲ್ಲವೋ ಎಂದು ಕಾದು ನೋಡಬೇಕಿದೆ.