ಮದುವೆಯಾಗಿರುವ ನಟಿಯ ಮೇಲೆ ನಾಗ ಚೈತನ್ಯಗೆ ಫುಲ್ ಕ್ರಶ್: ಪ್ರೀತಿ ಬಗ್ಗೆ ಮಾತನಾಡಿ ಹೇಳಿದ್ದೇನು ಗೊತ್ತೇ?? ಆಕೆ ನಿನ್ನ ಕಡೆ ತಿರುಗು ನೋಡುವುದಿಲ್ಲ ಎಂದ ಜನ.
ಅಕ್ಕಿನೇನಿ ನಾಗಚೈತನ್ಯ ಅವರು ನಟಿ ಸಮಂತಾ ಅವರಿಂದ ವಿಚ್ಛೇದನ ಪಡೆದ ಬಳಿಕ ಅವರು ನೀಡಿರುವ ಎಲ್ಲಾ ಹೇಳಿಕೆಗಳು ವೈರಲ್ ಆಗುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಮೊದಲಾಗಿ ನಾಗಚೈತನ್ಯ ಅವರು ವೈಯಕ್ತಿಕ ಜೀವನವನ್ನು ವೃತ್ತಿಜೀವನದಿಂದ ದೂರವಿಡಲು ಇಷ್ಟಪಡುತ್ತಾರೆ. ಆದರೆ ವಿಚ್ಛೇದನದ ಬಳಿಕ ಎಲ್ಲೆಡೆ ಹೆಚ್ಚಾಗಿ ಚರ್ಚೆ ಆಗುತ್ತಿರುವುದು ಅವರ ವೈಯಕ್ತಿಕ ಜೀವನದ ವಿಚಾರಗಳೇ. ನಾಗಚೈತನ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.
ಸಿನಿಮಾ ಕುರಿತ ಸಂದರ್ಶನಗಳಿಗೆ ಹೋದಾಗಲೆಲ್ಲಾ ಹೆಚ್ಚಾಗಿ ಪ್ರಶ್ನೆ ಕೇಳುವುದು ಅವರ ವೈಯಕ್ತಿಕ ಜೀವನದ ಬಗ್ಗೆ, ಅದರ ಬಗ್ಗೆ ಕಾಮ್ ಆಗಿ ಮಾತನಾಡಿ, ವಿವಾದಗಳಿಂದ ದೂರವೇ ಉಳಿಯುತ್ತಾರೆ ನಾಗಚೈತನ್ಯ. ಇತ್ತೀಚೆಗೆ ನಾಗಚೈತನ್ಯ ಅವರು ನಟಿ ಶೋಭಿತ ಧುಲಿಪಾಲ ಅವರೊಂದಿಗೆ ಡೇಟ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಸಹ ಸದ್ದು ಮಾಡಿದ್ದು, ಸಂದರ್ಶನ ಒಂದರಲ್ಲಿ ಅದರ ಬಗ್ಗೆ ಪ್ರಶ್ನೆ ಕೇಳಿದಾಗ, ನಾಗಚೈತನ್ಯ ಅವರು ನಗುತ್ತಲೇ, ವಿವಾದಗಳಿಗೆ ತೆರೆ ಎಳೆದಿದ್ದರು. ಇದೀಗ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮೂಲಕ ಚೈತನ್ಯ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ವಿಚಾರ ಗೊತ್ತೇ ಇದೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿದ್ದರು, ಚೈತನ್ಯ ಪಾತ್ರ ಮತ್ತು ಅಭಿನಯಕ್ಕೆ ಒಳ್ಳೆಯ ಪ್ರಶಂಸೆ ಸಿಕ್ಕಿದೆ.
ಲಾಲ್ ಸಿಂಗ್ ಚಡ್ಡಾ ಸಿನಿಮಾ ಸಂದರ್ಶನ ಒಂದರಲ್ಲಿ, ಚೈತನ್ಯ ಅವರಿಗೆ ಬಾಲಿವುಡ್ ನಲ್ಲಿ ಯಾವ ನಟಿಯ ಜೊತೆಗೆ ನಟಿಸಲು ಇಷ್ಟ ಪಡುತ್ತೀರಿ ಎಂದು ಕೇಳಿದಾಗ, ಆಲಿಯಾ ಭಟ್, ಕತ್ರಿನಾ ಕೈಫ್ ಮತ್ತು ಪ್ರಿಯಾಂಕ ಚೋಪ್ರಾ ಎಂದು ಹೇಳಿರುವ ಚೈತನ್ಯ, ಆಲಿಯಾ ಭಟ್ ಫೇವರೆಟ್, ಕತ್ರಿನಾ ಕೈಫ್ ಸುಂದರವಾಗಿದ್ದಾರೆ, ಪ್ರಿಯಾಂಕ ಚೋಪ್ರಾ ಇನ್ಸ್ಪಿರೇಷನ್ ಎಂದು ಹೇಳಿದ್ದಾರೆ. ಹಾಗೆಯೇ ತಮ್ಮ ಮೊದಲ ಸೆಲೆಬ್ರಿಟಿ ಕ್ರಶ್ ಬಗ್ಗೆ ಮಾತನಾಡಿ, ಸುಶ್ಮಿತಾ ಸೇನ್ ಅವರು ತಮ್ಮ ಮೊದಲ ಸೆಲೆಬ್ರಿಟಿ ಕ್ರಶ್ ಎಂದು ಹೇಳಿ, ಅವರನ್ನು ತುಂಬಾ ಇಷ್ಟಪಡುತ್ತೇನೆ, ಒಮ್ಮೆ ಅವರನ್ನು ಭೇಟಿಯಾದಾಗ ಕೂಡ ಇದನ್ನು ಹೇಳಿದ್ದೆ ಎಂದು ಹೇಳಿದ್ದಾರೆ ಚೈತನ್ಯ.