ವಿಜಯ್, ಅನನ್ಯ ಹಾಕಿಕೊಂಡು ಲೈಗರ್ ಸಿನಿಮಾ ಮಾಡುವವರೆಗೂ ಮಾಡಿ, ಕ್ಯಾಮೆರಾ ಮುಂದೆ ಬಂದು ಕಣ್ಣೀರು ಹಾಕಿದ ಚಾರ್ಮಿ. ಏನಾಗಿದೆ ಅಂತೇ ಗೊತ್ತೆ??

18

Get real time updates directly on you device, subscribe now.

ವಿಜಯ್ ದೇವರಕೊಂಡ ನಟನೆ ಮತ್ತು ಪುರಿ ಜಗನ್ನಾಥ್ ನಿರ್ದೇಶನದಲ್ಲಿ ತಯಾರಾಗಿರುವ ಲೈಗರ್ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದೇ ತಿಂಗಳ 25 ರಂದು ಬಿಡುಗಡೆಯಾಗಲಿರುವ ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆಗಳಿವೆ. ಈಗಾಗಲೇ ಈ ಸಿನಿಮಾ ಬಾಲಿವುಡ್ ನಲ್ಲೂ ಒಳ್ಳೆಯ ಹೈಪ್ ಕ್ರಿಯೇಟ್ ಮಾಡುತ್ತಿದೆ. ನಿರೀಕ್ಷೆಗೂ ಮೀರಿದ ರೇಂಜ್ ನಲ್ಲಿ ತೆರೆಕಾಣುವ ಸಾಧ್ಯತೆಯು ಇದೆ. ಚಿತ್ರತಂಡದ ಸದಸ್ಯರು ರೆಗ್ಯುಲರ್ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ನಿರ್ಮಾಪಕಿ ಚಾರ್ಮಿ ಈ ಚಿತ್ರದ ಬಜೆಟ್ ಬಗ್ಗೆ ತುಂಬಾ ಭಾವನಾತ್ಮಕ ವಿವರಣೆಯನ್ನು ನೀಡಿದ್ದಾರೆ. ಈ ಹಿಂದೆ ಸರಣಿ ಫ್ಲಾಪ್‌ ಗಳನ್ನು ನೀಡಿದ್ದ ಪೂರಿ ಜಗನ್ನಾಥ್ ಇಸ್ಮಾರ್ಟ್ ಶಂಕರ್ ಚಿತ್ರದ ಮೂಲಕ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ.

ವಿಜಯದೇವರಕೊಂಡ ಜೊತೆಗಿನ ಮೊದಲ ಚಿತ್ರ ಲೈಗರ್. ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಆಗಿ ಪ್ರಾರಂಭಿಸಲಾಯಿತು. ಪೂರಿ ಜಗನ್ನಾಥ್ ಹಿಂದೆಂದಿಗಿಂತಲು ಪ್ರಾಜೆಕ್ಟ್‌ ಗಾಗಿ ಹೆಚ್ಚಿನ ಸಮಯವನ್ನು ತೆಗೆದುಕೊಂಡಿದ್ದಾರೆ. ಈ ಸಿನಿಮಾ ಆಗಸ್ಟ್ 25 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಸದ್ಯ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ವಿಜಯ್ ದೇವರಕೊಂಡ ಉತ್ತರ ಭಾರತ ಪ್ರವಾಸ ಮಾಡುತ್ತಿದ್ದಾರೆ. ಆದರೆ ಇದುವರೆಗೂ ಬಾಲಿವುಡ್‌ ನಲ್ಲಿ ಗುರುತಿಸಿಕೊಳ್ಳದ ವಿಜಯ್‌ ಅವರಿಗಾಗಿ ಜನ ಅಪಾರ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಎಲ್ಲೆಲ್ಲಿ ಪ್ರಚಾರ ಕಾರ್ಯಕ್ರಮ ನಡೆದರೂ ದೊಡ್ಡ ಮಟ್ಟದ ಜನ ಸೇರುತ್ತಿರುವುದು ಗಮನಾರ್ಹವಾಗಿದೆ.

ಚಿತ್ರತಂಡ ದಕ್ಷಿಣ ಭಾರತದಲ್ಲೂ ಪ್ರಚಾರ ಆರಂಭಿಸಿದೆ. ಇತ್ತೀಚೆಗೆ ಪೂರಿ ಜಗನ್ನಾಥ್, ವಿಜಯ್ ದೇವರಕೊಂಡ ಮತ್ತು ಚಾರ್ಮಿ ಒಟ್ಟಿಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಸಿನಿಮಾ ಬಗ್ಗೆ ಮಾತನಾಡುವಾಗ ಚಾರ್ಮಿ ಸ್ವಲ್ಪ ಭಾವುಕರಾದರು. ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಮಾತನಾಡಿರುವ ಚಾರ್ಮಿ ಬಜೆಟ್ ವಿಚಾರಕ್ಕೆ ಬಂದಾಗ ಒಂದಷ್ಟು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಬಜೆಟ್ ಹೇಗೋ ನಿರೀಕ್ಷೆಗಿಂತ ಹೆಚ್ಚಾಗಿದೆ, ಕೈಯಲ್ಲಿ ಒಂದು ರೂಪಾಯಿಯೂ ಇಲ್ಲ, ಇಂತಹ ಸಮಯದಲ್ಲಿ ಒಟಿಟಿಯಿಂದ ಭರ್ಜರಿ ಆಫರ್ ಬಂದಿತ್ತು. ಅಂತಹ ಆಫರ್ ಆಫರ್ ಕೈಬಿಡಲು ಧೈರ್ಯ ಬೇಕು ಎಂದು ಚಾರ್ಮಿ ನೀಡಿದ ವಿವರಣೆ ನೀಡಿದ್ದು, ಹೈಲೈಟ್ ಆಗಿದೆ.

Get real time updates directly on you device, subscribe now.