ಮತ್ತೊಂದು ಕರ್ಮಖಾಂಡ ಬಯಲು: ನನ್ನನ್ನು ಆತ ಎಲ್ಲಿ ಬೇಕೆಂದರೆ ಅಲ್ಲಿ ಮುಟ್ಟಿದ ಎಂದ ಖ್ಯಾತ ನಟಿ: ಹೇಳಿದ್ದೇನು ಗೊತ್ತೆ??
ಅನ್ವೇಶಿ ಜೈನ್ ತೆಲುಗು ಇಂಡಸ್ಟ್ರಿಯ ಹೊಸ ನಾಯಕಿ. ಸದ್ಯ ಈ ನಟಿ ಬಗ್ಗೆ ಚಿತ್ರರಂಗದಲ್ಲಿ ಚರ್ಚೆ ನಡೆಯುತ್ತಿದೆ. ಮಾಸ್ ಮಹಾರಾಜ್ ರವಿತೇಜ ಮುಖ್ಯ ಭೂಮಿಕೆಯಲ್ಲಿ ತೆರೆಕಂಡ ರಾಮಾ ರಾವ್ ಆನ್ ಡ್ಯೂಟಿ ಚಿತ್ರದಲ್ಲಿ ಈ ನಟಿ ನಟಿಸಿದ್ದರು. ತನ್ನ ಸೌಂದರ್ಯ ಮತ್ತು ನಟನೆಯಿಂದ ಇಂದಿನ ಪೀಳಿಗೆಯ ಯುವಕರನ್ನು ಆಕರ್ಷಿಸುವಲ್ಲಿ ಅನ್ವೇಷಿ ಜೈನ್ ಯಶಸ್ವಿಯಾಗಿದ್ದಾರೆ. ಸೀಕಾಕುಲಂ ಸಾರಂಗ ಹಾಡಿನಲ್ಲಿ ತನ್ನ ಗ್ಲಾಮರ್ ಶೋ ಮೂಲಕ ಎಲ್ಲರ ಹುಬ್ಬೇರಿಸಿದ ಅನ್ವೇಶಿ ಅವರ ಡ್ಯಾನ್ಸ್ ಸ್ಟೆಪ್ಸ್ ಕಂಡು ಇಂಡಸ್ಟ್ರಿಯಲ್ಲಿ ಎಲ್ಲರೂ ಶಾಕ್ ಆಗಿದ್ದಾರೆ. ಈ ಒಂದು ಹಾಡು ಅವರ ವೃತ್ತಿ ಬದುಕಿಗೆ ತಿರುವು ನೀಡಿತು ಎಂದರೆ ತಪ್ಪಾಗುವುದಿಲ್ಲ.
ತೆರೆಯ ಮೇಲೆ ಕಾಣುವ ಅವರ ಸ್ಮಾರ್ಟ್ ಡ್ಯಾನ್ಸ್ ಹಿಂದೆ ಎಷ್ಟೋ ಜನಕ್ಕೆ ಗೊತ್ತಿಲ್ಲದ ಅನೇಕ ದುರಂತ ಘಟನೆಗಳು ಇವೆ ಎಂದು ಅನ್ವೇಶಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅನ್ವೇಶಿ ತನ್ನ ಹಿಂದಿನ ನೋವಿನ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಕೆಲವರು ತನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ಹೇಳಿದ್ದಾರೆ. “ಅನೇಕ ಹುಡುಗಿಯರಂತೆ, ನಾನು ಬಾಲ್ಯದಲ್ಲಿ ದೈಹಿಕವಾಗಿ ಕಿರುಕುಳಕ್ಕೆ ಒಳಗಾಗಿದ್ದೇನೆ. ಕೆಲವರು ನನ್ನ ದೇಹದ ಬಗ್ಗೆ ಕಮೆಂಟ್ ಮಾಡುತ್ತಿದ್ದರು. ಆಗ ನನಗೇನೂ ಗೊತ್ತಿರಲಿಲ್ಲ ಹಾಗಾಗಿ ಅವರಿಗೆ ಏನೂ ಹೇಳಲಿಲ್ಲ. ಯೌವನದಲ್ಲಿಯೂ ಇದೇ ಪರಿಸ್ಥಿತಿ, 10ನೇ ತರಗತಿಯ ದಿನಗಳಲ್ಲಿ ಸಜ್ಜನನಂತೆ ಕಾಣುವ ವ್ಯಕ್ತಿ.. ನನ್ನ ಕೆನ್ನೆ ಮತ್ತು ಸೊಂಟ ಮುಟ್ಟುತ್ತಿದ್ದ. ನಾನು ಅವನನ್ನು ಹೊಡೆಯಬಹುದಿತ್ತು, ಪೊಲೀಸರಿಗೆ ದೂರು ನೀಡಬಹುದಿತ್ತು.
ಆದರೆ, ಆತ ಬಡವನಾಗಿದ್ದರಿಂದ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ನನ್ನ ತಂದೆ ತಾಯಿ ಆತನ ಬಳಿ ಟ್ಯೂಷನ್ ಗೆ ಕಳುಹಿಸುತ್ತಿದ್ದರು. ನಾನು ನನ್ನ ಸೋದರತ್ತೆಗೆ ಟ್ಯೂಷನ್ ಗೆ ಹೋಗುವುದಿಲ್ಲ ಎಂದು ಹೇಳಬೇಕು ಎಂದುಕೊಂಡೆ, ನನ್ನ ಚಿಕ್ಕಪ್ಪನಿಗೆ ನಿಜ ವಿಷಯ ಹೇಳಬೇಕೆಂದುಕೊಂಡಿದ್ದೆ ಆದರೆ ಸಾಧ್ಯವಾಗಲಿಲ್ಲ.. ನನ್ನ ಮನೆಯವರ ಬಗ್ಗೆ ಯೋಚಿಸಿ ಆತನನ್ನಹ್ ಕ್ಷಮಿಸಿದೆ. ಕಾಲಾನಂತರದಲ್ಲಿ ನನ್ನ ದೇಹವು ಬದಲಾಗಿದೆ ಮತ್ತು ನನ್ನ ಸ್ತನದ ಗಾತ್ರವು ಹೆಚ್ಚಾಯಿತು, ಕಡಿಮೆಯಾಗಬಹುದು ಎಂದುಕೊಂಡಿದ್ದೆ ಆದರೆ ಆಗಲಿಲ್ಲ. ಕ್ಯಾನ್ಸರ್ ಕೋಶಗಳು ಹೆಚ್ಚಿವೆಯೇ ಎಂಬುದನ್ನು ಪರೀಕ್ಷಿಸಲು ತಾನು ಪರೀಕ್ಷೆಗೆ ಒಳಗಾಗುತ್ತೇನೆ..” ಎಂದು ಅವರು ಆಸಕ್ತಿದಾಯಕ ಕಾಮೆಂಟ್ ಗಳನ್ನು ಮಾಡಿದ್ದಾರೆ.