ಆರು ವರ್ಷಗಳಿಂದ ಪ್ರೀತಿ ಮಾಡಿ ಒಟ್ಟಿಗೆ ಇದ್ದ ಯುವತಿಯ ಮೊಬೈಲ್ ನೋಡಿದ ಯುವಕ ಅಲ್ಲೇ ಆಕೆಯನ್ನು ಮುಗಿಸಿದ್ದು ಯಾಕೆ ಗೊತ್ತೇ?? ಅಂತದ್ದು ಏನಿತ್ತು ಗೊತ್ತು??
ಪ್ರೀತಿ ಎನ್ನುವುದು ಯಾರಿಗೆ ಏನನ್ನಾದರೂ ಮಾಡಿಸಿ ಬಿಡುತ್ತದೆ. ಪ್ರೀತಿಗೋಸ್ಕರ ಹುಡುಗ ಹುಡುಗಿಯರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂದು ನಾವು ಕೇಳಿದ್ದೇವೆ. ಇದೀಗ ಅದಕ್ಕೆ ಸಾಕ್ಷಿ ಎನ್ನುವಂತೆ ಮತ್ತೊಂದು ಘಟನೆ ಕೇರಳದಲ್ಲಿ ನಡೆದಿದೆ. ಹುಡುಗನೊಬ್ಬ ತಾನು ಪ್ರೀತಿ ಮಾಡುತ್ತಿದ್ದ ಹುಡುಗಿಯ ಮೊಬೈಲ್ ನೋಡಿ, ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ರೀತಿ ಮಾಡಿದ ಬಳಿಕ ತಾನೇ ಪೊಲೀಸರ ಬಳಿ ಹೋಗಿ ಶರಣಾಗಿದ್ದಾನೆ. ನಿಜಕ್ಕೂ ನಡೆದಿದ್ದೇನು? ಹುಡುಗ ಈ ರೀತಿ ಮಾಡಿದ್ದೇಕೆ? ತಿಳಿಸುತ್ತೇವೆ ನೋಡಿ..
ಕೊಲೆ ಮಾಡಿದ ಹುಡುಗನ ಹೆಸರು ಸುಜೀಶ್, ಈತ ಸೇಲಂ ನಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಈತನ ವಯಸ್ಸು 27, ಮೃತವಾದ ಹುಡುಗಿಯ ಹೆಸರು ಸೂರ್ಯಪ್ರಿಯಾ, ಈಕೆಯ ವಯಸ್ಸು 24. ಈಕೆಯ ತಂದೆ ಕೊನ್ನಲ್ಲೂರಿನ ಹಾಗೂ ತಾಯಿ ಗೀತಾ. ಸೂರ್ಯಪ್ರಿಯಾ, ಡೆಮೋಕ್ರಿಟಿಕ್ ಯೂತ್ ಫೆಡೆರೇಷನ್ ಆಫ್ ಇಂಡಿಯಾ ಬ್ಲಾಕ್ ಕಮಿಟಿ ಸದಸ್ಯೆ ಮತ್ತು ಮೆಲಾರಕೋಡು ಪಂಚಾಯತ್ ಕುಟುಂಬಶ್ರೀ ಸಿಡಿಎಸ್ ಸದಸ್ಯೆ ಆಗಿದ್ದರು. ಇವರಿಬ್ಬರು ವಿದ್ಯಾರ್ಥಿಗಳಾಗಿದ್ದಾಗಿನಿಂದಲೂ ಪ್ರೀತಿ ಮಾಡುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಸೂರ್ಯಪ್ರಿಯಾ ಸುಜೀಶ್ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಾಳೆ.
ಇದಾದ ಕೆಲ ದಿನಗಳ ಬಳಿಕ ಆಕೆ ಮತ್ತೊಬ್ಬ ಹುಡುಗನನ್ನು ಪ್ರೀತಿ ಮಾಡುತ್ತಿದ್ದಾಳೆ ಎನ್ನುವ ವಿಚಾರ ಸುಜೀಶ್ ಗೆ ಗೊತ್ತಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಫೋನ್ ನಲ್ಲಿ ಜಗಳ ಸಹ ನಡೆದಿದೆ. ನಂತರ ಆಕೆಯ ಜೊತೆಗೆ ನೇರವಾಗಿ ಮಾತನಾಡಬೇಕು ಎಂದು, ಸೂರ್ಯಪ್ರಿಯಾ ತಾಯಿ ಮತ್ತು ಸೋದರ ಮಾವ ಮನೆಯಲ್ಲಿ ಇಲ್ಲದ ಸಮಯ, ಹಾಗೂ ಆಕೆಯ ತಾತ ಟೀ ಕುಡಿಯಲು ಹೋಗುವ ಸಮಯ ನೋಡಿಕೊಂಡು ಮನೆಗೆ ಹೋಗಿದ್ದಾನೆ, ಅಲ್ಲಿ ಇಬ್ಬರ ನಡುವೆ ಜಗಳ ನಡೆದು, ಸುಜೀಶ್ ಸೂರ್ಯಪ್ರಿಯಾ ಮೊಬೈಲ್ ನೋಡಿ ಅದರಲ್ಲಿದ್ದ ಮೆಸೇಜ್ ಗಳನ್ನು ನೋಡಿ, ಕೋಪಗೊಂಡು, ಆಕೆಯ ಕತ್ತು ಹಿಸುಕಿ, ಕೊಲೆ ಮಾಡಿದ್ದಾನೆ. ಆಕೆಯ ಪ್ರಾಣಪಕ್ಷಿ ಹಾರಿ ಹೋದ ಬಳಿಕ, ಮೊಬೈಲ್ ತೆಗೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.