ಕೊನೆ ಕ್ಷಣದಲ್ಲಿ ಭಾರತ ತಂಡದಲ್ಲಿ ಬಿಗ್ ಟ್ವಿಸ್ಟ್: ಹಾರ್ಧಿಕ್ ಪಾಂಡ್ಯಗೆ ಶಾಕ್ ನೀಡಿದ ಬಿಸಿಸಿಐ. ಏನು ಗೊತ್ತೇ??

22

Get real time updates directly on you device, subscribe now.

ಭಾರತ ಕ್ರಿಕೆಟ್ ತಂಡವು ಸಧ್ಯಕ್ಕೆ ಏಷ್ಯಾಕಪ್ ಪಂದ್ಯಗಳಲ್ಲಿ ಒಳ್ಳೆಯ ಪ್ರದರ್ಶನ ನೀಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಡೆದ ಪಂದ್ಯಗಳಲ್ಲಿ, ಅದರಲ್ಲೂ ಕೊನೆಯ ಪಂದ್ಯ ಇನ್ನೇನು ನಡೆಯಬೇಕು ಎನ್ನುವ ಸಮಯದಲ್ಲಿ ರೋಹಿತ್ ಶರ್ಮಾ ಅವರಿಗೆ ಇಂಜೂರಿ ಆದ ಕಾರಣದಿಂದ ಅವರು ಪಂದ್ಯದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ, ಕೊನೆಯ ಕ್ಷಣದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿತ್ತು. ಪಾಂಡ್ಯ ಅವರು ತಮಗೆ ನೀಡಿದ ಜವಾಬ್ದಾರಿಯನ್ನು ಚೆನ್ನಾಗಿಯೇ ನಿರ್ವಹಿಸಿದರು. ಅವರ ಕ್ಯಾಪ್ಟನ್ಸಿ ಇಂದ ಭಾರತ ತಂಡವು, 88 ರನ್ ಗಳ ಭಾರಿ ಜಯ ಗಳಿಸಿತು.

ಹಾರ್ದಿಕ್ ಪಾಂಡ್ಯ ಅವರು ಸಹ ಇದರ ಬಗ್ಗೆ ಮಾತನಾಡಿ, ನ್ಯಾಷನಲ್ ಲೆವೆಲ್ ನಲ್ಲಿ ತಂಡವನ್ನು ಮುನ್ನಡೆಸುವುದು ಬಹಳ ಹೆಮ್ಮೆಯ ವಿಚಾರ, ತಂಡ ಗೆದ್ದಿರುವುದು ನನಗೂ ಬಹಳ ಸಂತೋಷ ಬಿದೆ ಎಂದಿದ್ದಯೂ ಪಾಂಡ್ಯ. ಜೊತೆಗೆ ಈ ಜವಾಬ್ದಾರಿಯನ್ನು ಪೂರ್ಣಪ್ರಮಾಣದಲ್ಲಿ ನೀಡಿದರೆ, ನಿರ್ವಹಿಸಲು ಸಿದ್ಧವಿರುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೆ, ಪಾಂಡ್ಯ ಅವರು ಈಗಾಗಲೇ ಐಪಿಎಲ್ ನಲ್ಲಿ ತಾವು ಕ್ಯಾಪ್ಟನ್ ಆಗಿದ್ದ ತಂಡವನ್ನು ಮುನ್ನಡೆಸಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾರಣ, ಹಾರ್ದಿಕ್ ಪಾಂಡ್ಯ ಅವರನ್ನು ಏಷ್ಯಾಕಪ್ ನಲ್ಲಿ ಭಾರತ ತಂಡದ ವೈಸ್ ಕ್ಯಾಪ್ಟನ್ ಆಗಿ ಮಾಡಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದವು.

ಆದರೆ ಏಷ್ಯಾಕಪ್ ತಂಡವನ್ನು ಈಗಾಗಲೇ ಬಿಸಿಸಿಐ ಬಿಡುಗಡೆ ಮಾಡಿದೆ, ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಪ್ಲೇಯರ್ ಗಳ ತಂಡವನ್ನು ಬಿಸಿಸಿಐ ಪ್ರಕರಣೆ ಮಾಡಿದ್ದು, ಹಾರ್ದಿಕ್ ಪಾಂಡ್ಯ ಅವರಿಗೆ ದೊಡ್ಡ ಶಾಕ್ ನೀಡಿದೆ. ಹಾರ್ದಿಕ್ ಪಾಂಡ್ಯ ಅವರಿಗೆ ಕ್ಯಾಪ್ಟನ್ಸಿ ಸಿಗುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದಾಗ, ಇಂಜೂರಿ ಇಂದ ಹುಷಾರಾಗಿ ಬಂದಿರುವ ಕೆ.ಎಲ್.ರಾಹುಲ್ ಅವರಿಗೆ ವೈಸ್ ಕ್ಯಾಪ್ಟನ್ ಸ್ಥಾನವನ್ನು ನೀಡಲಾಗಿದೆ. ಇದು ನಿಜಕ್ಕೂ ಹಾರ್ದಿಕ್ ಪಾಂಡ್ಯ ಅವರಿಗೆ ಬೇಸರ ತಂದಿದೆ, ಜೊತೆಗೆ ಶಾಕ್ ಸಹ ನೀಡಿದೆ. ಆದರೆ ಕನ್ನಡಿಗ ಕೆ.ಎಲ್.ರಾಹುಲ್ ಅವರಿಗೆ ಇದು ಸಂತೋಷವಾಗಿದೆ.

Get real time updates directly on you device, subscribe now.