ಇಂಟರ್ನೆಟ್ ನಲ್ಲಿ ವಿಡಿಯೋ ನೋಡಿದ್ದೇ ನೋಡಿದ್ದು, ಕಲಿತುಕೊಂಡು ಕೊನೆಗೆ ಅವಳ ಉಸಿರನ್ನೇ ನಿಲ್ಲಿಸಿಬಿಟ್ಟ. ಆಕೆಯ ಪರಿಸ್ಥಿತಿ ಏನಾಗಿದೆ ಗೊತ್ತೇ??
ಈ ವ್ಯಕ್ತಿ ಅದಾಗಲೇ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಆ ಸಾಲ ತೀರಿಸಲು ಏನು ಮಾಡಬೇಕು ಎಂದು ಯೋಚಿಸುತ್ತಿರುವಾಗಲೇ ಪತ್ನಿಯನ್ನೇ ಕೊಂದು ಹಾಕಿ.ಆಕೆಯ ವಿಮೆಯ ಹಣ ತೆಗೆದುಕೊಳ್ಳಬೇಕು ಎಂದುಕೊಂಡ. ಅದಕ್ಕಾಗಿ ಪ್ಲಾನ್ ಮಾಡಿದ ಆ ವ್ಯಕ್ತಿ ಹೆಂಡತಿಗೆ ಗುಂಡು ಹಾರಿಸಿದ್ದಾನೆ. ಮಧ್ಯಪ್ರದೇಶದ ರಾಜ್ ಗಢ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇಂಟರ್ನೆಟ್ ನಲ್ಲಿ ವಿಡಿಯೋ ನೋಡಿದ ಬಳಿಕ ಸಾಲ ತೀರಿಸಲು ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಗುಂಡು ಹಾರಿಸಿದ್ದಾನೆ.
ಆರೋಪಿ ಪತಿ ಬದ್ರಿಪ್ರಸಾದ್ ಬಂಧಿತನಾಗಿದ್ದಾನೆ ಈತನ ಹೆಂಡತಿ ಪೂಜಾ. ಕೊಲೆ ಯೋಜನೆ ರೂಪಿಸಲು ಆರೋಪಿ ಇಂಟರ್ನೆಟ್ ಸಹಾಯ ಪಡೆದಿದ್ದಾನೆ. ತಾನು ಮಾಡಿದ್ದ ಸಾಲ ತೀರಿಸಲು ಪರಿಹಾರ ಕಂಡುಹಿಡಿಯಲು ಇಂಟರ್ನೆಟ್ ನಲ್ಲಿ ಅನೇಕ ವೀಡಿಯೊಗಳನ್ನು ವೀಕ್ಷಿಸಿದ. ಕೆಲವು ವೀಡಿಯೋಗಳನ್ನು ನೋಡಿದ ನಂತರ, ಅವನು ತನ್ನ ಹೆಂಡತಿಗೆ ಮೊದಲು ವಿಮೆ ಮಾಡಿಸಿದನು. ನಂತರ ವಿಮೆ ಹಣ ಪಡೆದು ಸಾಲ ತೀರಿಸಲು ಆಕೆಯನ್ನು ಕೊಂದಿದ್ದಾನೆ. ಜುಲೈ 26 ರಂದು ರಾತ್ರಿ 9 ಗಂಟೆ ಸುಮಾರಿಗೆ ಭೋಪಾಲ್ ರಸ್ತೆಯ ಮನ ಜೋಡ್ ಬಳಿ ಬದ್ರಿಪ್ರಸಾದ್ ತನ್ನ ಪತ್ನಿ ಪೂಜಾಗೆ ಗುಂಡು ಹಾರಿಸಿದ್ದಾನೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕೆ ಮೃತಪಟ್ಟಿದ್ದಾಳೆ. ಪತಿ ಮೊದಲು ಪೊಲೀಸರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾನೆ. ಆದರೆ ಕೂಲಂಕುಷವಾಗಿ ತನಿಖೆ ನಡೆಸಿದ ಬಳಿಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಪತ್ನಿಯ ಹತ್ಯೆಯ ನಂತರ ಆರೋಪಿ ತನ್ನ ಪತ್ನಿಯನ್ನು ಹತ್ಯೆಗೈದ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದನು. ಹತ್ಯೆಯ ಸಮಯದಲ್ಲಿ ನಾಲ್ವರು ಅಪರಾಧ ಸ್ಥಳದಲ್ಲಿ ಇರಲಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಬದ್ರಿಪ್ರಸಾದ್ ಹಾಗೂ ಆತನ ಸಹಚರನೊಬ್ಬನನ್ನು ಬಂಧಿಸಿದ್ದಾರೆ. ಆತನ ಇಬ್ಬರು ಸಹಚರರು ಇನ್ನು ತಲೆಮರೆಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.