ಕೊನೆಗೂ ಸಿಗುತ್ತಿದೆ ಮುಕ್ತಿ: ರಾಹು ಹಾಗೂ ಮಂಗಳ ಯುತಿ ಯೋಗದಿಂದ ಉಂಟಾದ ಅಶುಭ ದಿನಗಳು ಮುಕ್ತಾಯ. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಒಂದೊಂದು ಗ್ರಹವು ತನ್ನ ಸ್ಥಾನ ಬಿಟ್ಟು, ಬೇರೆ ರಾಶಿಗೆ ಸ್ಥಾನ ಬದಲಾಯಿಸಿದಾಗ, ಈ ಯೋಗಗಳು ಶುರುವಾಗುತ್ತವೆ. ಇನ್ನು ಒಂದು ಗ್ರಹ ಮತ್ತೊಂದು ಗ್ರಹ ಇರುವ ರಾಶಿಗೆ ಪ್ರವೇಶಿಸಿದರೆ ಅದನ್ನು ಗ್ರಹಗಳ ಸಂಯೋಜನೆ ಎಂದು ಕರೆಯುತ್ತಾರೆ. ಪ್ರಸ್ತುತ ಮಂಗಳ ಗ್ರಹ ಮೇಷ ರಾಶಿಯಲ್ಲಿದೆ, ಆಗಸ್ಟ್ 10ರಂದು ವೃಷಭ ರಾಶಿಗೆ ಪ್ರವೇಶ ಮಾಡಲಿದೆ. ಜುಲೈ 27ರಂದು ಮಂಗಳ ಗ್ರಹ ಮೇಷ ರಾಶಿಗೆ ಪ್ರವೇಶ ಮಾಡಿದಾಗ, ಅಂಗಾರಕ ಯೋಗ ರೂಪುಗೊಂಡಿತ್ತು ಇದು ಆಗಸ್ಟ್ 10ರಂದು ಕೊನೆಯಾಗಲಿದೆ. 37 ವರ್ಷಗಳ ನಂತರ ಅಂಗಾರಕ ಯೋಗ ರೂಪುಗೊಂಡಿತ್ತು, ಇದೀಗ ಮೇಷ ರಾಶಿಯವರಿಗೆ ನೆಮ್ಮದಿಯಾಗಲಿದೆ.
ಜ್ಯೋತಿಷ್ಯದ ಪ್ರಕಾರ ಅಂಗಾರಕ ಯೋಗವನ್ನು ಅಶುಭ ಯೋಗ ಎಂದು ಪರಿಗಣಿಸಲಾಗಿದೆ. ಎಲ್ಲಾ ಗ್ರಹಗಳಲ್ಲಿ ರಾಹು ಗ್ರಹ ಮತ್ತು ಮಂಗಳ ಗ್ರಹವನ್ನು ಉಗ್ರಗ್ರಹ ಎಂದು ಪರಿಗಣಿಸಲಾಗುತ್ತದೆ. ಈ ಎರಡು ಗ್ರಹಗಳ ಸಂಯೋಜನೆಯಿಂದ ಅಂಗಾರಕ ಯೋಗ ರೂಪುಗೊಳ್ಳುತ್ತದೆ. ಈ ಯೋಗವು ಕೆಲವು ರಾಶಿಗಳಿಗೆ ಶುಭಫಲ ತರುತ್ತದೆ, ಇನ್ನು ಕೆಲವು ರಾಶಿಗಳಿಗೆ ಅಶುಭ ಫಲಗಳನ್ನು ತಂದುಕೊಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲ ಗ್ರಹಗಳು ತಮ್ಮ ರಾಶಿಯಲ್ಲಿದ್ದಾಗ, ಬಹಳ ಶಕ್ತಿಶಾಲಿಯಾಗಿರುತ್ತದೆ. ಈಗ ಮಂಗಳ ಗ್ರಹವು ತನ್ನದೇ ಆದ ಮೇಷ ರಾಶಿಯಲ್ಲಿದೆ. ಹಾಗಾಗಿ ಮಂಗಳ ಗ್ರಹವು ಶಕ್ತಿಶಾಲಿಯಾಗಿದೆ.
ಈ ಸಮಯದಲ್ಲಿ ಮೇಷ ರಾಶಿಯಲ್ಲಿ ರೂಪುಗೊಂಡಿರುವ ಅಂಗಾರಕ ಯೋಗ, ವೃಷಭ, ತುಲಾ ಮತ್ತು ಸಿಂಹ ರಾಶಿಯವರಿಗೆ ಅತಿಹೆಚ್ಚು ಕಷ್ಟಗಳನ್ನು ನೀಡುತ್ತಿದ್ದು, ನಾಳೆಯಿಂದ ಈ ರಾಶಿಯವರಿಗೆ ಒಳ್ಳೆಯ ಸಮಯ ಶುರುವಾಗುತ್ತದೆ, ಅಂಗಾರಕ ಯೋಗದಿಂದ ಮುಕ್ತಿ ಸಿಗುತ್ತದೆ. ಜುಲೈ 27ರಂದು ಮಂಗಳ ಗ್ರಹವು ಮೇಷ ರಾಶಿಗೆ ಪ್ರವೇಶ ಮಾಡಿದ್ದಾನೆ, ಕೆಲವು ರಾಶಿಗಳಿಗೆ ಕಷ್ಟ ನೀಡಿದ್ದನು. ಇಂದಿನಿಂದ ಮಂಗಳ ಗ್ರಹವು ವೃಷಭ ರಾಶಿಗೆ ಪ್ರವೇಶ ಮಾಡಲಿದ್ದು, ಅಲ್ಲಿ ರಾಹು ಮತ್ತು ಮಂಗಳನ ಸಂಯೋಜನೆ ಮುಕ್ತಾಯವಾಗಲಿದೆ. ಈ ಮೂಲಕ, 37 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಅಂಗಾರಕ ಯೋಗ ಸಹ ಮುಕ್ತಾಯವಾಗಲಿದೆ. ಆಗಸ್ಟ್ 10ರ ನಂತರ ಈ ಮೂರು ರಾಶಿಗಳಿಗೂ ಕಷ್ಟದಿಂದ ಮುಕ್ತಿ ಸಿಗಲಿದೆ.