18 ವರ್ಷಕ್ಕೂ ಮುನ್ನವೇ ಪ್ರೀತಿ ಮಾಡಿ, 18 ಆಗಿದ ತಕ್ಷಣವೇ ಆತುರ ಬಿದ್ದು ಮದುವೆಯಾಗಿದ್ದವಳ ಕಥೆ ಏನಾಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಕೇರಳ ರಾಜ್ಯವನ್ನು ದೇವರ ಸ್ವಂತ ನಾಡೆಂದು ನಾವೆಲ್ಲ ಕರೆಯುತ್ತೇವೆ ಆದರೆ ಅಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಅಪರಾಧಗಳು ನಿಜಕ್ಕೂ ಕೂಡ ಕೇರಳವನ್ನು ದೇವರ ನಾಡೆಂದು ಕರೆಯಲು ಮನಸ್ಸು ಬಾರದಂತೆ ಮಾಡಿಬಿಡುತ್ತದೆ. ಅಷ್ಟಕ್ಕೂ ಇಂದು ನಡೆದಿರುವುದಾದರೂ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಕೇರಳದ ಕೋಯಿಕ್ಕೋಡ್ ಪ್ರಾಂತ್ಯದಲ್ಲಿ ನಡೆದಿರುವ ಘಟನೆ ಈಗ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
19 ವರ್ಷದ ಭಾಗ್ಯ ಎನ್ನುವ ಯುವತಿ ತನ್ನದೇ ಗಂಡನ ಮನೆಯಲ್ಲಿ ನೇಣು ಬಿಗಿದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇನ್ನೂ ಈಕೆಯ ಮದುವೆಯ ಹಿನ್ನೆಲೆಯ ಕಥೆಯನ್ನು ಕೇಳಿದರೆ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಕೆ ಅನಂತು ಎನ್ನುವಾತನ ಪತ್ನಿಯಾಗಿದ್ದು ಇಬ್ಬರೂ ಕೂಡ ಆರು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ಎಲ್ಲದಕ್ಕಿಂತ ಪ್ರಮುಖವಾಗಿ ಓಡಿ ಹೋಗಿದ್ದ ಸಂದರ್ಭದಲ್ಲಿ 18 ವರ್ಷ ಪೂರ್ತಿಯಾದ ನಂತರ ಇಬ್ಬರು ಮದುವೆಯಾಗಲಿ ಎಂಬುದಾಗಿ ನಂತರದ ಸಮಯಗಳಲ್ಲಿ 18 ವರ್ಷ ಪೂರ್ತಿಯಾದ ನಂತರ ಭಾಗ್ಯಳನ್ನು ಅನಂತು ವಿಗೆ ಕೊಟ್ಟು 6 ತಿಂಗಳ ಹಿಂದಷ್ಟೇ ಮದುವೆ ಮಾಡಲಾಗಿತ್ತು ಎಂಬುದಾಗಿ ತಿಳಿದು ಬಂದಿದೆ.
ಆದರೆ ಭಾಗ್ಯ ಈ ಸಂದರ್ಭದಲ್ಲಿ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು ಈ ಸಂದರ್ಭದಲ್ಲಿ ಆಕೆ ಗರ್ಭಿಣಿ ಕೂಡ ಆಗಿದ್ದಾಳೆ ಎಂಬುದಾಗಿ ತಿಳಿದು ಬಂದಿದೆ. ಭಾಗ್ಯಳ ಮನೆಯವರು ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಅನ್ವಯ ಅನಂತುವಿನ ತಾಯಿ ಭಾಗ್ಯಳಿಗೆ ಪದೇಪದೇ ತೊಂದರೆಯನ್ನು ನೀಡುತ್ತಲೇ ಇದ್ದರೂ ಇದಕ್ಕಾಗಿ ಆಕೆ ಹೇಗೆ ಮಾಡಿಕೊಂಡಿರಬಹುದು ಅಥವಾ ಬೇರೇನೂ ಕಾರಣ ಇದೆ ಎಂಬುದಾಗಿ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಪೊಲೀಸ್ ತನಿಖೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇದರ ನೈಜ ಕಾರಣ ಏನು ಎಂಬುದು ಪ್ರಕಟವಾಗಲಿದೆ ಎಂಬುದಾಗಿ ಭರವಸೆ ಇದೆ. ಆದರೆ ಬದುಕನ್ನು ಪ್ರಾರಂಭಿಸುವ ಮೊದಲೇ ಮುಗ್ಧ ಜೀವ ಬಾಡಿ ಹೋಯಿತು ಎಂಬುದಂತೂ ಸುಳ್ಳಲ್ಲ.