ಹುಡುಗಿಯರು ಮದುವೆಗೂ ಮುನ್ನವೇ ಮುಜುಗರವಿಲ್ಲದೆ ನೇರವಾಗಿ ಕೇಳಿ, ಈ ವಿಷಯ ತಿಳಿದುಕೊಂಡರೆ ಸಾಕು, ಜೀವನದಲ್ಲಿ ಸುಖವೇ ಸುಖ. ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನಗಳಲ್ಲಿ ಮದುವೆಯ ಕುರಿತಂತೆ ತಪ್ಪಾದ ಪರಿಕಲ್ಪನೆಯನ್ನು ಹೊಂದಿರುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ಕೂಡ ಮದುವೆ ಎಂಬ ಶಬ್ದದಿಂದ ದೂರ ಓಡಲು ಪ್ರಾರಂಭಿಸುತ್ತಾರೆ. ಹೌದು ಗೆಳೆಯರೇ ಇಂದು ನಾವು ಮಾತನಾಡಲು ಹೊರಟಿರುವುದು ಅದರಲ್ಲೂ ವಿಶೇಷವಾಗಿ ಮದುವೆಯಾಗಲು ಹೊರಟಿರುವ ಹುಡುಗಿಯರು ಮದುವೆಯ ಮುನ್ನವೇ ಕೆಲವೊಂದು ವಿಚಾರಗಳ ಕುರಿತಂತೆ ಕ್ಲಾರಿಟಿಯನ್ನು ಹೊಂದಿದ್ದಾರೆ ಖಂಡಿತವಾಗಿ ಅವರ ದಾಂಪತ್ಯ ಜೀವನ ಎನ್ನುವುದು ಸುಖಮಯವಾಗಿರುತ್ತದೆ ಎಂಬುದರ ಕುರಿತಂತೆ. ಹಾಗಿದ್ದರೆ ಆ ವಿಚಾರಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
ಮೊದಲಿಗೆ ತಾವು ಎಂಗೇಜ್ಮೆಂಟ್ ಮಾಡಿಕೊಂಡಿರುವ ಅಥವಾ ಮುಂದೆ ಮದುವೆ ಆಗಲಿರುವ ಹುಡುಗನ ಜೊತೆಗೆ ಪ್ರತಿಯೊಂದು ವಿಚಾರಗಳನ್ನು ಕೂಡ ಮದುವೆಯ ಮುನ್ನವೇ ಚರ್ಚಿಸಬೇಕು. ಮದುವೆ ಮುನ್ನ ಇಬ್ಬರ ನಡುವೆ ಬೇರೆ ಏನೇ ವೈಮನಸುಗಳು ಅಥವಾ ಬೇರೆ ಬೇರೆ ರೀತಿಯ ಭಿನ್ನಾಭಿಪ್ರಾಯಗಳು ಇದ್ದರೂ ಕೂಡ ಅದನ್ನು ಬಗೆಹರಿಸಿಕೊಳ್ಳಬೇಕು. ಯಾವುದೇ ಅನುಮಾನಗಳು ಇದ್ದರೂ ಕೂಡ ಮದುವೆಯ ಮುನ್ನವೇ ಚರ್ಚಿಸಿ ಮಾತನಾಡಿ ಬಗೆಹರಿಸಿಕೊಂಡರೆ ಮದುವೆ ನಂತರ ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶ ಇರುವುದಿಲ್ಲ.
ಇನ್ನೊಂದು ಪ್ರಮುಖ ವಿಚಾರ ಏನೆಂದರೆ ಸಾಮಾನ್ಯವಾಗಿ ಮದುವೆಯಾದ ಕೆಲವೇ ವರ್ಷಗಳಲ್ಲಿ ಮಗುವಿಗೆ ತಾಯಿ ಆಗುತ್ತೀರಿ. ಒಮ್ಮೆ ತಾಯಿ ಆದ ನಂತರ ಮಗುವಿನ ಕುರಿತಂತೆ ಹೆಚ್ಚಾದ ಗಮನವನ್ನು ವಹಿಸಲು ಪ್ರಾರಂಭಿಸುತ್ತೀರಿ ಈ ಸಂದರ್ಭದಲ್ಲಿ ಗಂಡನನ್ನು ಸಂಪೂರ್ಣವಾಗಿ ಮರೆತುಬಿಡುತ್ತಿರಿ ಎಂಬುದಾಗಿ ಈಗಾಗಲೇ ಹಲವಾರು ಬಾರಿ ನಡೆದಿರುವ ರಿಸರ್ಚ್ ಪ್ರಕಾರ ಸಾಬೀತಾಗಿದೆ. ಹೀಗಾಗಿ ಈ ವಿಚಾರವನ್ನು ಧ್ಯಾನದಲ್ಲಿ ಇಟ್ಟುಕೊಂಡು ಮದುವೆ ಆಗಿ ಮಕ್ಕಳು ಆದ ನಂತರವೂ ಕೂಡ ಗಂಡನಿಗೆ ಅದೇ ರೀತಿಯ ಸಮಯವನ್ನು ಹಾಗೂ ಕಾಳಜಿಯನ್ನು ನೀಡುವುದನ್ನು ಮಾತ್ರ ಮರೆಯಬೇಡಿ.
ಇದರಿಂದಾಗಿ ಯಾವುದೇ ಭಿನ್ನಾಭಿಪ್ರಾಯಗಳು ಇಬ್ಬರ ನಡುವೆ ಮೂಡಿಬರುವುದಿಲ್ಲ. ಮಾತ್ರವಲ್ಲದೆ ದಾಂಪತ್ಯ ಜೀವನವು ಕೂಡ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಸರಾಗವಾಗಿ ಸಾಗುತ್ತದೆ. ದಾಂಪತ್ಯ ಜೀವನ ಎಂದ ಮೇಲೆ ಗಂಡ ಹೆಂಡತಿಯರ ನಡುವೆ ಚಿಕ್ಕ ಚಿಕ್ಕ ವಿಚಾರಗಳಿಗಾಗಿ ಜಗಳ ನಡೆಯುವುದು ಸರ್ವೆ ಸಾಮಾನ್ಯ ಆದರೆ ಇದನ್ನು ದೊಡ್ಡದು ಮಾಡಲು ಹೋಗಬೇಡಿ. ಈ ಸಂದರ್ಭದಲ್ಲಿ ನಿನ್ನದೇ ತಪ್ಪು ಎಂಬುದಾಗಿ ಇಬ್ಬರೂ ಕೂಡ ಹಠಕ್ಕೆ ಬಿದ್ದು ಅಹಂಕಾರವನ್ನು ಮಧ್ಯ ತರಬೇಡಿ.
ದಾಂಪತ್ಯ ಜೀವನದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಸೋತರು ಕೂಡ ಪರವಾಗಿಲ್ಲಾ. ಜಗಳವನ್ನು ದೊಡ್ಡದು ಮಾಡಿ ಅದು ಗಂಭೀರ ಪರಿಣಾಮವನ್ನು ಮೂಡುವಂತೆ ಮಾಡಬೇಡಿ ಅಷ್ಟೇ. ಮದುವೆಗೆ ಮುನ್ನ ಮಾತ್ರ ತಮ್ಮ ಸಂಗಾತಿ ಜೊತೆಗೆ ಡೇಟಿಂಗ್ ಹೋಗುವ ಪರಿಕಲ್ಪನೆ ಮಾತ್ರ ಇಟ್ಟುಕೊಳ್ಳಬೇಡಿ ಮದುವೆ ಆದ ನಂತರವೂ ಕೂಡ ಸಮಯ ಸಿಕ್ಕಾಗಲಿಲ್ಲ ಒಳ್ಳೊಳ್ಳೆಯ ಸ್ಥಳಗಳಿಗೆ ತಿಂಗಳಿಗೆ ಒಮ್ಮೆಯಾದರೂ ಕೂಡ ಡೇಟಿಂಗ್ ಹೋಗುವ ಅಭ್ಯಾಸವನ್ನು ಇಟ್ಟುಕೊಳ್ಳಿ.
ಇದರಿಂದಾಗಿ ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವಿನ ಸಂಬಂಧದಲ್ಲಿ ತಾಜಾತನ ಎನ್ನುವುದು ನವ ನವೀನವಾಗಿ ಉಳಿದುಕೊಂಡಿರುತ್ತದೆ. ಇದು ಎಷ್ಟು ತಾಜಾತನದಿಂದ ಇರುತ್ತದೆಯೋ ಅಷ್ಟು ಸಮಯದವರೆಗೆ ದೀರ್ಘಕಾಲದ ದಾಂಪತ್ಯ ಜೀವನವನ್ನು ಸಂತೋಷದಿಂದ ನೀವು ನಿಭಾಯಿಸಬಹುದಾಗಿದೆ. ಹೀಗಾಗಿ ಈ ಅಭ್ಯಾಸವನ್ನು ಮಾತ್ರ ಪ್ರತಿ ತಿಂಗಳ ನೀವು ಪುನರಾವರ್ತನೆ ಮಾಡಲೇಬೇಕು. ಇದರಿಂದಾಗಿ ನಿಮ್ಮಿಬ್ಬರ ನಡುವೆ ಸಂತೋಷ ಎನ್ನುವುದು ನೈಜವಾಗಿ ಮೂಡಿರುತ್ತದೆ.
ಇನ್ನೊಂದು ಪ್ರಮುಖ ವಿಚಾರೇನೆಂದರೆ ದಿನಪೂರ್ತಿ ನೀವು ಎಷ್ಟೇ ಜಗಳ ಮಾಡಿಕೊಂಡಿರಬಹುದು ಅಥವಾ ಕೆಲಸದ ಒತ್ತಡದಿಂದಾಗಿ ನೀವು ಮನಸ್ಸನ್ನು ಎಷ್ಟೇ ಕಲ್ಲಾಗಿಸಿಕೊಂಡರೂ ಕೂಡ ಮತ್ತೊಂದು ದಿನ ಉದಯವಾದಾಗ ಹಳೆಯ ಚಿಂತೆಯನ್ನು ಮುಂದುವರಿಸಿಕೊಂಡು ಹೋಗದೆ ಹೊಸ ದಿನವನ್ನು ಹೊಸ ಮನಸ್ಸಿನ ಭಾವನೆಯೊಂದಿಗೆ ಸ್ವಾಗತಿಸಿ. ಸದಾಕಾಲ ಪ್ರತಿ ದಿನವನ್ನು ಹೊಸ ಯೋಚನೆಯೊಂದಿಗೆ ನಡೆಸಿಕೊಂಡು ಹೋಗುವುದನ್ನು ಕಲಿತುಕೊಳ್ಳಬೇಕು. ಆಗಲೇ ನಿಮ್ಮ ದಾಂಪತ್ಯ ಜೀವನದಲ್ಲಿ ಸಂಗಾತಿಯ ಜೊತೆಗೆ ಎಲ್ಲವೂ ಕೂಡ ಸರಿಯಾಗಿರುತ್ತದೆ.
ಅದೇ ನಿನ್ನೆ ಮೊನ್ನೆಯ ಕೋಪವನ್ನು ಮತ್ತೆ ಇಂದು ತೋರಿಸಲು ಹೋದರೆ ಖಂಡಿತವಾಗಿ ಅದು ನಿಮ್ಮ ದಾಂಪತ್ಯ ಜೀವನ ಮೇಲೆ ದುಷ್ಪರಿಣಾಮವನ್ನು ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೊನೆಯದಾಗಿ ಇದೊಂದು ವಿಚಾರ ಪ್ರಮುಖವಾಗಿ ನೆನಪಿಟ್ಟುಕೊಳ್ಳಲೇಬೇಕು. ನೀವು ಅಥವಾ ನಿಮ್ಮ ಸಂಗಾತಿ ಗಂಡ ಹೆಂಡತಿ ಆಗಿರಬಹುದು ಆದರೆ ಅವರ ಸ್ನೇಹಿತರು ಅಥವಾ ಅವರ ಸಹೋದ್ಯೋಗಿಗಳು ಬಂದಾಗ ಅಥವಾ ಅವರಿಗೆ ಹೋಗಲೇಬೇಕು ಎನ್ನುವ ಸಮಯ ಮೂಡಿ ಬಂದಾಗ ಯಾವುದೇ ಕಟ್ಟುನಿಟ್ಟುಗಳನ್ನು ವಿಧಿಸದೆ ಅವರ ಸಮಯವನ್ನು ಅವರ ಸ್ಥಳಾವಕಾಶವನ್ನು ಅವರಿಗೆ ಸ್ವತಂತ್ರವಾಗಿ ನೀಡಿ.
ಹೀಗಿದ್ದಲ್ಲಿ ಮಾತ್ರ ದಾಂಪತ್ಯ ಜೀವನದಲ್ಲಿ ಪರಸ್ಪರ ಒಬ್ಬರೊಬ್ಬರ ಮೇಲೆ ಗೌರವವನ್ನು ನೀಡಲು ಸಾಧ್ಯವಾಗುತ್ತದೆ. ಈ ಎಲ್ಲಾ ವಿಚಾರಗಳನ್ನು ಮದುವೆಯ ಮುನ್ನವೇ ನೀವು ಯೋಚನೆ ಮಾಡಿಕೊಂಡರೆ ಖಂಡಿತವಾಗಿ ಜೀವನಪೂರ್ತಿ ದಾಂಪತ್ಯ ಜೀವನವನ್ನು ಯಶಸ್ವಿಯಾಗಿ ನಡೆಸಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.