ಹೆಂಡತಿ ಕೈ ಯನ್ನು ಮುಟ್ಟಿದ ಎಂದು ಇನ್ನು ಅಪ್ರಾಪ್ತ ಬಾಲಕನನ್ನು ಪತಿ ಏನು ಮಾಡಿದ್ದಾನೆ ಗೊತ್ತೇ??

234

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ರಿವಿಲ್ ಆದಾಗ ನಿಜಕ್ಕೂ ಕೂಡ ನಮ್ಮ ಸಮಾಜ ಈ ರೀತಿ ಇದೆಯಾ ಎನ್ನುವುದಾಗಿ ಅನುಮಾನ ಮೂಡಿ ಬರುತ್ತದೆ. ಇಂದು ನಾವು ಹೇಳಹೊರಟಿರುವ ಘಟನೆ ಕೂಡ ಅದಕ್ಕೆ ಹೊರತಾಗಿಲ್ಲ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಘಟನೆ ನಡೆದಿರುವುದು ಯಾವುದು ಬೇರೆ ರಾಜ್ಯದಲ್ಲಿ ಅಲ್ಲ ಬದಲಾಗಿ ನಮ್ಮದೇ ರಾಜ್ಯದ ಹಾಸನದಲ್ಲಿ. ಹೌದು ಗೆಳೆಯ ಹಾಸನದ ರೌಡಿಶೀಟರ್ ಆಗಿರುವ ರಾಕಿ ಹಾಗೂ 17 ವರ್ಷದ ಅಪ್ರಾಪ್ತ ಬಾಲಕ ವಿನಯ್ ನಡುವೆ ನಡೆದಿರುವಂತಹ ಘಟನೆ ಕುರಿತಂತೆ ನಿಮಗೆ ನಾವು ವಿವರಣೆ ನೀಡಲು ಹೊರಟಿದ್ದೇವೆ.

ರೌಡಿಶೀಟರ್ ರಾಕಿ ತನ್ನ ಸಹಚರರೊಂದಿಗೆ ಹಾಗೂ ಪತ್ನಿಯ ಜೊತೆಗೆ ರೆಸ್ಟೋರೆಂಟ್ ಒಂದಕ್ಕೆ ಹೋಗಿದ್ದ ಸಂದರ್ಭದಲ್ಲಿ ಲಿಫ್ಟಿನಲ್ಲಿ ಆತನ ಹೆಂಡತಿಯ ಕೈಗೆ 17ವರ್ಷದ ವಿನಯ್ ಕೈ ಟಚ್ ಆಯಿತು ಎನ್ನುವ ಕಾರಣಕ್ಕಾಗಿ ಕ್ಯಾತೆ ತೆಗೆದಿದ್ದಾರೆ. ಆ ಸಂದರ್ಭದಲ್ಲಿ ವಿನಯ್ ರಾಕಿಗೆ ಅವಾಜ್ ಹಾಕಿ ಹೋಗಿದ್ದ ಎನ್ನುವುದಾಗಿ ತಿಳಿದುಬಂದಿದೆ. ಇದರಿಂದ ರಾಕಿ ತನ್ನ ರೌಡಿಸಂ ಸ್ಟೇಟಸ್ ಗೆ ದಕ್ಕೆ ಬಂದಿತು ಎನ್ನುವ ಕಾರಣಕ್ಕಾಗಿ ಮಾರನೆದಿನ ತನ್ನ ಹುಡುಗರ ಜೊತೆಗೆ ರಾಕಿಯ ಮನೆಗೆ ನುಗ್ಗಿ ಆತನನ್ನು ಬಲವಂತವಾಗಿ ಎಳೆದೊಯ್ದು ಆತನನ್ನು ಚು’ಚ್ಚಿ ಮುಗಿಸಿದ್ದಾರೆ. ಹಿನ್ನೆಲೆಯಲ್ಲಿ ವಿನಯ್ ನ ತಂದೆ ತಾಯಿ ಇಬ್ಬರೂ ಕೂಡ ಈ ಕುರಿತಂತೆ ಪೊಲೀಸರಲ್ಲಿ ದೂರು ನೀಡಿದ್ದಾರೆ.

ತನ್ನ ರೌಡಿಸಂ ಹವಾ ಮೆಂಟೇನ್ ಮಾಡುವುದಕ್ಕಾಗಿ ಈ ರೀತಿ ಮಾಡಿದ್ದಾನೆ ಎಂಬುದಾಗಿ ತಿಳಿದು ಬಂದಿದ್ದು ಪೊಲೀಸರು ಈಗಾಗಲೇ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ನಿಜಕ್ಕೂ ಕೂಡ ನಮ್ಮ ರಾಜ್ಯದಲ್ಲಿ ಇಂತಹ ಮನಸ್ಸಿನ ಜನರಿದ್ದಾರೆ ಎಂದು ನೆನೆಸಿಕೊಂಡರೆ ಮೈನವಿರೇಳುತ್ತದೆ. ಈ ಘಟನೆಯ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.