ವ್ಯಾಪಾರದಲ್ಲಿ ನಷ್ಟವಾಯಿತು ಎಂದು ವಾಮಚಾರಿಂದ ತನ್ನ ಮೂರು ವರ್ಷದ ಮಗುವನ್ನು ಏನು ಮಾಡಿದ್ದಾನೆ ಗೊತ್ತೇ ಈ ತಂದೆ. ಯಪ್ಪಾ ಈಗೂ ಇರ್ತಾರ??
ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಮನುಷ್ಯರು ಸ್ವಾರ್ಥ ಮನೋಭಾವವನ್ನು ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಹಲವಾರು ಹೇಯ ಕೃತ್ಯಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಇಂದು ನಾವು ಹೇಳ ಹೊರಟಿರುವ ವಿಚಾರವೂ ಕೂಡ ಒಂದಾಗಿದೆ. ಹೌದು ಗೆಳೆಯರೇ ಈ ಘಟನೆ ನಡೆದಿರುವುದು ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ. ವ್ಯಾಪಾರಿಯೊಬ್ಬ ತನ್ನ ವ್ಯಾಪಾರದಲ್ಲಿ ನಷ್ಟ ಆಗುತ್ತಿದೆ ಎಂಬ ಕಾರಣಕ್ಕಾಗಿ ಮೂರು ವರ್ಷದ ಮಗಳ ಮೇಲೆ ವಾಮಾಚಾರ ನಡೆಸಿರುವ ಕಾರಣದಿಂದಾಗಿ ಮಗಳು ಈಗ ಮರಣ ಹೊಂದಿದ್ದು ಆತ ಪೊಲೀಸರ ಅತಿಥಿಯಾಗಿದ್ದಾನೆ.
ಕೆಲವೊಂದು ಮಾಹಿತಿಗಳ ಪ್ರಕಾರ ವ್ಯಾಪಾರಿಯಾಗಿರುವ ವೇಣುಗೋಪಾಲ ತನ್ನ ಮೂರು ವರ್ಷದ ಮಗಳ ತಲೆಗೆ ಕುಂಕುಮ ಹಾಗೂ ಬಾಯಿಗೆ ಅರಿಶಿನ ತುಂಬಿಸಿದ್ದಾರೆ ಇದರಿಂದ ಉಸಿರುಗಟ್ಟಿ ಮಗು ಮರಣವನ್ನು ಹೊಂದಿರುವ ಸಾಧ್ಯತೆ ಇದೆ ಎಂಬುದಾಗಿ ಕೂಡಾ ತಿಳಿದುಬಂದಿದೆ. ಇನ್ನು ಪೊಲೀಸರ ನಡೆಸಿರುವ ತನಿಖೆಯ ಪ್ರಕಾರ ವೇಣುಗೋಪಾಲ್ ತನ್ನ ಮಗುವನ್ನು ತಾನೆ ತನ್ನ ಕೈಯಾರೆ ಕತ್ತುಹಿಸುಕಿ ದ್ದಾನೆ ಇದರಿಂದಾಗಿ ದೊಡ್ಡ ಮಗಳು ಕಿರುಚುತ್ತಾ ಮನೆಯಿಂದ ಹೊರಬಂದ ನಂತರ ನೆರೆಹೊರೆಯವರು ಇದರ ಕುರಿತಂತೆ ತಿಳಿದು ಮಗುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಗು ಹಲವಾರು ದಿನಗಳ ನಂತರ ಈಗ ಜೂನ್ 16ರಂದು ಮರಣವನ್ನು ಹೊಂದಿದ ಎಂಬುದಾಗಿ ತಿಳಿದುಬಂದಿದೆ.
ಇಟ್ಟಿಗೆ ವ್ಯಾಪಾರಿಯಾಗಿದ್ದ ವೇಣುಗೋಪಾಲ್ ರವರು ಹಲವಾರು ಸಮಯಗಳಿಂದ ಕೂಡ ಸಾಕಷ್ಟು ನಷ್ಟವನ್ನು ಅನುಭವಿಸಿದ್ದರು ಇದರಿಂದಾಗಿ ಶನಿಯ ಕಾಟ ಎಂಬುದಾಗಿ ಅರಿತುಕೊಂಡಿದ್ದಾರೆ. ಇದಕ್ಕಾಗಿ ಮಗಳ ಮೇಲೆ ವಾಮಾಚಾರವನ್ನು ಮಾಡಲು ಹೋಗಿ ಈ ಸ್ಥಿತಿಗೆ ತಲುಪಿದ್ದಾರೆ. ಇನ್ನು ಈಗಾಗಲೇ ನಡೆದಿರುವ ತನಿಖೆಯ ಪ್ರಕಾರ ಇಲ್ಲಿ ಯಾವುದೇ ದೇವಮಾನವನ ಕೈವಾಡ ಇಲ್ಲ ಎನ್ನುವುದು ಸಾಬೀತಾಗಿದೆ. ತಂದೆ ವೇಣುಗೋಪಾಲ್ ಮೇಲೆ ಭಾರತೀಯ ಕಾನೂನು ಸಹಿತೆ 302 ರ ಪ್ರಕಾರ ಕ್ರಮವನ್ನು ಜರುಗಿಸಲಾಗುತ್ತಿದೆ. ನಿಜಕ್ಕೂ ಕೂಡ ಇದು ಹೇಯಕರ ಕೃತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.