ಕೃತಿ ಶೆಟ್ಟಿ ನಂತರ ರಶ್ಮಿಕಾ ರವರಿಗೆ ತಕ್ಕ ನೀಡಲು ಮುಂದಾದ ಕನ್ನಡತಿ. ತೆಲುಗಿನಲ್ಲಿ ಈಕೆಯ ಹವಾ ಇದೀಗ ಆರಂಭ. ಯಾರು ಗೊತ್ತೇ??

34

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗ ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದಲ್ಲಿ ಕನ್ನಡದ ನಟಿಯರ ಹವಾ ಜೋರಾಗಿದೆ ಎಂಬುದಾಗಿ ಹೇಳಬಹುದಾಗಿದೆ. ಈ ಮೊದಲು ಕೊಡಗಿನ ಕುವರಿ ಯಾಗಿರುವ ರಶ್ಮಿಕ ಮಂದಣ್ಣ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದರು. ನಂತರ ಉಪ್ಪೇನ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಕೃತಿ ಶೆಟ್ಟಿ ಅವರು ಕೂಡ ಈಗ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದರೂ ಕೂಡ ಕರ್ನಾಟಕ ಮೂಲದವರಾಗಿರುವ ಇವರು ಬೆಳೆದು ನಿಂತಿರುವ ರೀತಿ ನೋಡಿದರೆ ನಿಜಕ್ಕೂ ಕೂಡ ಕನ್ನಡಿಗರಿಗೆ ಹೆಮ್ಮೆ ಆಗುತ್ತದೆ. ರಶ್ಮಿಕ ಮಂದಣ್ಣ ಹಾಗೂ ಕೃತಿ ಶೆಟ್ಟಿ ರವರ ಜೊತೆಗೆ ಪೂಜಾ ಹೆಗ್ಡೆ ರವರ ಯಶಸ್ಸನ್ನು ಕೂಡ ನಾವು ಇಲ್ಲಿ ಗಣನೆಗೆ ತೆಗೆದುಕೊಳ್ಳಬಹುದಾಗಿದೆ. ಎಲ್ಲಾ ನಟಿಯರಿಗೂ ಕೂಡ ಟಕ್ಕರ್ ನೀಡುವಂತೆ ಈಗ ಮತ್ತೊಬ್ಬ ಕನ್ನಡ ಚಿತ್ರರಂಗದ ನಟಿ ತೆಲುಗು ಚಿತ್ರರಂಗದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ ಎಂಬುದಾಗಿ ಹೇಳಬಹುದಾಗಿದೆ. ಹೌದು ಗೆಳೆಯರೇ ಅವರಿನ್ನು ಯಾರು ಅಲ್ಲ ನಮ್ಮ ಕನ್ನಡದ ಹುಡುಗಿ ಆಗಿರುವ ಶ್ರೀಲೀಲಾ.

ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ಶ್ರೀಲಿಲ ಈಗಾಗಲೆ ಹಲವಾರು ಕನ್ನಡ ಸಿನಿಮಾಗಳಲ್ಲಿ ಹಾಗೂ ಒಂದು ತೆಲುಗು ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಸುದ್ದಿಗಳ ಪ್ರಕಾರ ಅಲ್ಲು ಅರವಿಂದ್ ರವರ ಗೀತಾ ಆರ್ಟ್ಸ್ ಈಗಾಗಲೇ ಕೆಲವು ಸಿನಿಮಾಗಳಿಗೆ ಶ್ರೀಲೀಲಾ ರವರನ್ನು ಬುಕ್ ಮಾಡಿಕೊಂಡಿದೆ. ರೆಬೆಲ್ ಸ್ಟಾರ್ ಪ್ರಭಾಸ್ ರವರ ಸಿನಿಮಾದಲ್ಲಿ ಕೂಡ ನಾಯಕಿಯಾಗುವ ಅವಕಾಶ ಶ್ರೀಲೀಲಾ ರವರಿಗೆ ಸಿಗಲಿದೆ ಎಂಬ ಗಾಳಿ ಸುದ್ದಿ ಕೂಡ ಇದೆ. ಇನ್ನು ಹಲವಾರು ಸಿನಿಮಾಗಳಲ್ಲಿ ಅವರು ಕಾಣಿಸಿಕೊಳ್ಳುವ ನಿರೀಕ್ಷೆಗಳು ಹೆಚ್ಚಾಗಿದ್ದು ಈ ಮೇಲಿನವು ಹೇಳಿರುವ ನಟಿಯರಂತೆ ಶ್ರೀಲಿಲ ರವರು ಕೂಡ ತೆಲುಗಿನಲ್ಲಿ ಕನ್ನಡದ ಪದ್ಧತಿಯನ್ನು ಹಾರಿಸಲಿ ಎಂಬುದಾಗಿ ಹಾರೈಸೋಣ. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.