ಹೊಸ ಕಾರು ಖರೀದಿ ಮಾಡಿದ ದರ್ಶನ್. ಈ ಕಾರಿನ ಬೆಲೆ ಕೇಳಿದರೆ ನಿಜಕ್ಕೂ ಒಂದು ಕ್ಷಣ ಶಾಕ್ ಆಗ್ತೀರಾ. ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಹಾಗೂ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅವರಿಗೆ ಪ್ರಾಣಿಗಳೆಂದರೆ ಎಷ್ಟು ಪ್ರೀತಿ ಎನ್ನುವುದು ನಮಗೆಲ್ಲ ತಿಳಿದಿದೆ.
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸದ್ಯಕ್ಕೆ ಕ್ರಾಂತಿ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೇವಲ ಸಿನಿಮಾಗಳ ವಿಚಾರದಲ್ಲಿ ಮಾತ್ರವಲ್ಲದೆ ಅವರ ಐಷರಾಮಿ ಕಾರುಗಳ ವಿಚಾರದಿಂದಾಗಿ ಕೂಡ ಸುದ್ದಿಯಾಗುತ್ತಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ದುಬಾರಿ ಕಾರುಗಳನ್ನು ಹೊಂದಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಕ್ಕಪಕ್ಕದಲ್ಲಿ ಕೂಡ ಬೇರೆ ನಟರು ಕಾಣಿಸಿ ಕೊಳ್ಳುವುದಿಲ್ಲ. ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬಳಿ ಲ್ಯಾಂಬೋರ್ಗಿನಿ ಆಡಿ ಫೋರ್ಶೆ ರೇಂಜ್ ರೋವರ್ ಹಮ್ಮರ್ ಮಿನಿ ಕೂಪರ್ ಸೇರಿದಂತೆ ಹಲವಾರು ದುಬಾರಿ ಕಾರುಗಳು ಈಗಾಗಲೇ ದರ್ಶನ್ ರವರ ಒಡೆತನದಲ್ಲಿದೆ.
ಕೇವಲ ಕಾರುಗಳು ಮಾತ್ರವಲ್ಲದೆ ದುಬಾರಿ ಇಂಪೋರ್ಟೆಡ್ ಬೈಕುಗಳು ಕೂಡ ದರ್ಶನ್ ಅವರ ಬಳಿ ಇರುವುದು ನಿಮಗೆಲ್ಲ ಗೊತ್ತಿದೆ. ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ರವರ ತೆಕ್ಕೆಗೆ ಈಗ ಮತ್ತೊಂದು ದುಬಾರಿ ಕಾರ್ ಸೇರ್ಪಡೆಯಾಗಿದೆ. ಹೌದು ಗೆಳೆಯರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು 2022 ಮಾಡೆಲ್ ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ಖರೀದಿಸಿದ್ದಾರೆ. ಇದರ ಬೆಲೆ ಬರೋಬ್ಬರಿ 1.20 ಕೋಟಿ ರೂಪಾಯಿ ಆಗಿದೆ. ಈಗಾಗಲೇ ಈ ಕಾರಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಸಂತೋಷದಿಂದ ಶೇರ್ ಮಾಡಿಕೊಳ್ಳುತ್ತಿದ್ದಾರೆ. ದರ್ಶನ್ ರವರ ಈ ಹೊಸ ಕಾರಿನ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.