MMS ಲೀಕ್ ಆಗುವುದರಿಂದ ಹಿಡಿದು ಜೀವನದಲ್ಲಿ ಬಂದ ಹಲವಾರು ಬಾಯ್ಫ್ರೆಂಡ್ ಗಳು; ಖ್ಯಾತ ನಟಿ ತ್ರಿಷಾ ಕೃಷ್ಣನ್ ಅವರ ಬಗ್ಗೆ ಗೊತ್ತಿಲ್ಲದ ವಿಚಾರಗಳೇನು ಗೊತ್ತೇ??

21

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಆಗಿರುವ ತ್ರಿಷಾ ಕೃಷ್ಣನ್ ರವರು ಚಿತ್ರರಂಗದಲ್ಲಿ ಈಗಾಗಲೇ ಬಹುಭಾಷೆ ತಾರೆಯಾಗಿ ಮಿಂಚಿ ಮೆರೆದಿದ್ದಾರೆ. ಕಳೆದ ತಿಂಗಳಷ್ಟೇ ತಮ್ಮ 39ನೇ ಜನ್ಮದಿನಾಚರಣೆಯನ್ನು ಇವರು ಆಚರಿಸಿಕೊಂಡಿದ್ದಾರೆ. ಇಂದಿಗೂ ಕೂಡ 25ರ ಹದಿಹರೆಯದ ಯುವತಿಯರ ಕಾಣಿಸಿಕೊಳ್ಳುತ್ತಾರೆ. ಇವರ ವೈಯಕ್ತಿಕ ಹಾಗೂ ಸಿನಿಮಾ ಕರಿಯರ್ ಜೀವನದಲ್ಲಿ ಏನೆಲ್ಲ ನಡೆದಿದೆ ಎನ್ನುವುದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ತ್ರಿಷಾ ಕೃಷ್ಣನ್ ರವರು ಕೇವಲ ಸೌತ್ ಇಂಡಸ್ಟ್ರಿಯಲ್ಲಿ ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ನಟಿಸಿದ್ದಾರೆ. ಇನ್ನು ತ್ರಿಷಾ ಕೃಷ್ಣನ ರವರ ಜರ್ನಿ ಯನ್ನು ನೋಡುವುದಾದರೆ ಅವರು ಆಲ್ಬಮ್ ಸಾಂಗ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಗ್ಲಾಮರಸ್ ದುನಿಯಾಗೆ ಕಾಲಿಡುತ್ತಾರೆ. ಒಮ್ಮೆ ತಾವು ವಿದ್ಯಾಭ್ಯಾಸ ಮಾಡುತ್ತಿದ್ದ ಅಂತಹ ಕ್ರಿ’ಮಿನಲ್ ಸೈಕಾಲಜಿ ಕಡೆಗೆ ಹೋಗುವ ಒಲವನ್ನು ತೋರಿಸಿದ್ದರು ಕೂಡ ಸಿನಿಮಾ ಇಂಡಸ್ಟ್ರಿಗೆ ಅವರು ಬಂದುಬಿಡುತ್ತಾರೆ.

ದಕ್ಷಿಣ ಭಾರತ ಚಿತ್ರರಂಗದ ಒಂದು ಕಾಲದ ಅನಭಿಷಕ್ತ ರಾಣಿ ತ್ರಿಶಾ ಕೃಷ್ಣನ್ ಅವರು ತಮ್ಮ ಸಿನಿಮಾ ಜರ್ನಿ ಯನ್ನು 2002 ರಲ್ಲಿ ಮೌನಮ್ ಪೆಸಿಯದೆ ಎನ್ನುವ ಸಿನಿಮಾದಲ್ಲಿ ನಟಿಸುವ ಮೂಲಕ ಆರಂಭಿಸುತ್ತಾರೆ. ಆದರೆ ಅವರ ಸಿನಿಮಾ ಜೀವನಕ್ಕೆ ದೊಡ್ಡಮಟ್ಟದ ತಿರುವನ್ನು ನೀಡಿದ್ದು 2003 ರಲ್ಲಿ ಬಿಡುಗಡೆಯಾದ ಸಾಮಿ ಸಿನಿಮಾ. ಇದಾದ ನಂತರ ಮತ್ತೆ ಅವರು ಹಿಂದಿರುಗಿ ಚಿತ್ರರಂಗದಲ್ಲಿ ನೋಡಿದ್ದೇ ಇಲ್ಲ. ಅದಾದ ನಂತರ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ ಕಟ್ಟಾ ಮೀಟಾ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಕೂಡ ಕಾಲಿಡುತ್ತಾರೆ.

ಹಲವಾರು ಸಿನಿಮಾಗಳಲ್ಲಿ ಸತತವಾಗಿ ನಟಿಸುತ್ತಾ ತ್ರಿಷಾ ಕೃಷ್ಣನ್ ರವರು ಸಿನಿಮಾಗಳಿಗಿಂತ ಹೆಚ್ಚಾಗಿ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಚಾರಗಳಿಗೂ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಾರೆ. ಹೌದು ಗೆಳೆಯರೇ ಮೊದಲಿಗೆ ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ತಲಪತಿ ವಿಜಯ್ ರವರ ಜೊತೆಗೆ ಇವರು ಪ್ರೇಮ ಸಂಬಂಧದಲ್ಲಿ ತಳುಕು ಹಾಕಿಕೊಳ್ಳುತ್ತಾರೆ. ಆದರೆ ಇವರಿಬ್ಬರ ಪ್ರೇಮ ಸಂಬಂಧ ಹೆಚ್ಚು ವರ್ಷಗಳ ಕಾಲ ನಡೆಯಲಿಲ್ಲ. ಇದಾದನಂತರ ತೆಲುಗು ಚಿತ್ರರಂಗದ ಬಾಹುಬಲಿ ಖ್ಯಾತಿಯ ಪ್ರಾಣ ದಗ್ಗುಬಾಟಿ ರವರ ಜೊತೆಗೆ ಕೂಡ ಇವರು ಸಾಕಷ್ಟು ಬಾರಿ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಇವರಿಬ್ಬರು ತೀರಾ ಕ್ಲೋಸ್ ಎನ್ನಿಸಿಕೊಳ್ಳುವಂತಹ ಫೋಟೋಗಳು ಕೂಡ ಅಲ್ಲಲ್ಲಿ ವೈರಲ್ ಆಗಿ ಇವರಿಬ್ಬರ ಕುರಿತಂತೆ ಗುಸುಗುಸು ಸುದ್ದಿಗಳು ಹರಿದಾಡಲು ಆರಂಭಿಸುತ್ತದೆ. ಆದರೆ ಈ ಸಂಬಂಧವು ಕೂಡ ಹೆಚ್ಚಿನ ಕಾಲ ಉಳಿಯಲಿಲ್ಲ.

ಮುಂದುವರೆದು 2015 ರಲ್ಲಿ ತ್ರಿಷಾ ಕೃಷ್ಣನ್ ರವರು ಖ್ಯಾತ ಬಿಸಿನೆಸ್ ಮ್ಯಾನ್ ಆಗಿರುವ ವರುನ್ ಮನಿಯನ್ ರವರ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಾರೆ ಆದರೆ ಅದೇ ವರ್ಷ ಇವರಿಬ್ಬರ ಎಂಗೇಜ್ಮೆಂಟ್ ಮುರಿದುಬೀಳುತ್ತದೆ. ಸದ್ಯಕ್ಕೆ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ನಟಿ ನಯನತಾರಾ ರವರ ಎಕ್ಸ್ ಬಾಯ್ ಫ್ರೆಂಡ್ ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ಸಿಂಬು ರವರ ಜೊತೆಗೆ ತ್ರಿಷಾ ಕೃಷ್ಣನ್ ರವರ ಲವ್ವಿಡವ್ವಿ ನಡೆಯುತ್ತಿದೆ ಎಂಬುದಾಗಿ ಹೇಳಿ ಬರುತ್ತಿದೆ. ಅತಿಶೀಘ್ರದಲ್ಲೇ ಸಿಂಬು ಹಾಗೂ ತ್ರಿಷಾ ಕೃಷ್ಣನ್ ರವರು ಮದುವೆಯಾಗುತ್ತಿರುವ ಸುದ್ದಿ ಕೂಡ ಕೇಳಿ ಬರುತ್ತಿದೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

2004 ರಲ್ಲಿ ಗಮನಿಸುವುದಾದರೆ ತ್ರಿಷಾ ಕೃಷ್ಣನ್ ಅವರ ಸ್ನಾನ ಮಾಡುತ್ತಿರುವ ರೀತಿಯ ಎಂಎಂಎಸ್ ವಿಡಿಯೋ ಕೂಡ ವೈರಲ್ ಆಗಿತ್ತು. ಆದರೆ ಈ ಕುರಿತಂತೆ ತ್ರಿಷಾ ಕೃಷ್ಣನ್ ರವರು ಇದು ನನ್ನ ವಿಡಿಯೋ ಅಲ್ಲ ಎಂಬುದಾಗಿ ಕಡಾಖಂಡಿತವಾಗಿ ಕಡ್ಡಿಮುರಿದಂತೆ ತಿರಸ್ಕರಿಸಿದ್ದರು. ಇನ್ನು ಇವರು ತಮ್ಮ ಸಿನಿಮಾ ಜೀವನದಲ್ಲಿ ಹಲವಾರು ಅವಾರ್ಡ್ ಗಳನ್ನು ಕೂಡ ಗೆದ್ದುಕೊಂಡಿದ್ದಾರೆ. ಕೇವಲ ಸೌಂದರ್ಯ ಮಾತ್ರವಲ್ಲದೆ ನಟನೆಯಲ್ಲೂ ಕೂಡ ತಮ್ಮನ್ನು ತಾವು ಸಾಬೀತುಪಡಿಸಿ ಕೊಂಡಿರುವ ನಟಿ ತ್ರಿಷಾ ಕೃಷ್ಣನ್ ಆಗಿದ್ದಾರೆ. ತ್ರಿಷಾ ಕೃಷ್ಣನ್ ಅವರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮಾಡಿ ಹಂಚಿಕೊಳ್ಳುವುದು ಮರೆಯಬೇಡಿ.

Get real time updates directly on you device, subscribe now.