ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಸಾವಿರ ಕೋಟಿ ದಾಟಿದರು, ನಿರ್ಮಾಪಕರು ತಪ್ಪು ಮಾತ್ರ ಮಾಡಲಿಲ್ಲ. ಜಾಣತನ ಅಂದ್ರೆ ಇದೇನಾ?? ಕೆಜಿಎಫ್ ನಿರ್ಮಾಪಕರು ಮಾಡಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೆ ನಿಮಗೆ ಗೊತ್ತಿರುವ ಹಾಗೆ ಕೆಜಿಎಫ್ ಚಾಪ್ಟರ್ 2 ಚಿತ್ರ ಯಾವ ಮಟ್ಟದಲ್ಲಿ ಭಾರತೀಯ ಹಾಗೂ ಜಾಗತಿಕ ಸಿನಿಮಾ ಕ್ಷೇತ್ರದಲ್ಲಿ ಬಾಕ್ಸಾಫೀಸ್ ನಲ್ಲಿ ದೊಡ್ಡ ಮಟ್ಟಿಗೆ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ ಎಂದು ಹೆಚ್ಚಾಗಿ ಹೇಳಬೇಕಾಗಿಲ್ಲ. ಹೌದು ಗೆಳೆಯರೇ ನಿರ್ಮಾಪಕ ವಿಜಯ್ ಕಿರಗಂದೂರು ರವರು ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಹಾಕಿರುವ ಬಜೆಟ್ ಕೇವಲ 100 ಕೋಟಿ ರೂಪಾಯಿ ಮಾತ್ರ. ನೂರು ಕೋಟಿ ರೂಪಾಯಿ ಬಜೆಟ್ ಮೂಲಕ ಕೆಜಿಎಫ್ ಚಾಪ್ಟರ್ 2 ಚಿತ್ರದ ಯಶಸ್ಸಿನಿಂದಾಗಿ ಈಗಾಗಲೇ ಸಾವಿರಾರು ಕೋಟಿ ರೂಪಾಯಿ ಲಾಭವನ್ನು ಪಡೆದುಕೊಂಡಿದ್ದಾರೆ.
ಇಷ್ಟು ದೊಡ್ಡ ಮಟ್ಟದ ಲಾಭ ಪಡೆದಿದ್ದಾರೆ ಎಂದ ಮಾತ್ರಕ್ಕೆ ಅವರು ಬೇಕಾಬಿಟ್ಟಿಯಾಗಿ ತಮ್ಮ ಹಣವನ್ನು ಹೂಡಿಕೆ ಮಾಡಿಲ್ಲ. ಸಿನಿಮಾ ನಿರ್ಮಾಣದಲ್ಲಿ ಅವರು ತೋರಿಸುತ್ತಿರುವ ಬುದ್ಧಿವಂತಿಕೆ ಎಲ್ಲರ ಗಮನ ಸೆಳೆದಿದ್ದು ಎಲ್ಲರೂ ಕೂಡ ತಲೆದೂಗಿದ್ದಾರೆ. ಸದ್ಯಕ್ಕೆ ಗಮನಿಸುವುದಾದರೆ ವಿಜಯ್ ಕಿರಗಂದೂರು ರವರು ಮೊದಲನೇದಾಗಿ ಇಷ್ಟೊಂದು ಹಣ ಸಿಕ್ಕಿತು ಎಂದಮಾತ್ರಕ್ಕೆ ಬಾಲಿವುಡ್ ಚಿತ್ರರಂಗದಿಂದ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂದರೂ ಕೂಡ ಯಾವುದೇ ಸಿನಿಮಾಗಳನ್ನು ಹಿಂದಿಯಲ್ಲಿ ನಿರ್ಮಾಣ ಮಾಡುತ್ತಿಲ್ಲ. ಹೌದು ಗೆಳೆಯರೇ ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಹಿಂದಿ ಚಿತ್ರರಂಗ ಮಕಾಡೆ ಮಲಗಿಕೊಂಡಿದ್ದು ಅಷ್ಟೊಂದು ಲಾಭದಾಯಕವಾಗಿ ಪರಿಣಮಿಸಿಲ್ಲ. ಹೀಗಾಗಿ ವಿಜಯ್ ಕಿರಗಂದೂರು ರವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣವನ್ನು ಮಾಡುತ್ತಿದ್ದಾರೆ. ಮೊದಲಿಗೆ ರಿಷಬ್ ಶೆಟ್ಟಿ ನಟನೆಯ ಕಾಂತಾರ ಹಾಗೂ ನವರಸ ನಾಯಕ ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್ ಸಿನಿಮಾಗಳಿಗೆ ಚಿಕ್ಕ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಇದಾದ ನಂತರ ಸ್ವಲ್ಪ ದೊಡ್ಡ ಬಜೆಟ್ನಲ್ಲಿ ರಕ್ಷಿತ್ ಶೆಟ್ಟಿ ನಟನೆಯ ರಿಚರ್ಡ್ ಆಂಟನಿ ಹಾಗೂ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಭಗೀರ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದಾದ ನಂತರ ಮಲಯಾಳಂನಲ್ಲಿ ಪ್ರಥ್ವಿರಾಜ್ ಸುಕುಮಾರನ್ ರವರಿಗೆ ಟೈಸನ್ ಹಾಗೂ ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್ ರವರಿಗೆ ಸಲಾರ್ ಸಿನಿಮಾದ ನಿರ್ಮಾಣವನ್ನು ಮಾಡುತ್ತಿದ್ದಾರೆ. ಇದಾದನಂತರ ತಮಿಳಿನಲ್ಲಿ ಸುಧಾ ಕೊಂಗಾರ ನಿರ್ದೇಶನದ ಸಿನಿಮಾಗೆ ಕೂಡ ಬಂಡವಾಳ ಹೂಡಲು ಸಿದ್ಧರಾಗಿದ್ದಾರೆ. ಪ್ರತಿಯೊಂದು ಸಿನಿಮಾಗಳು ಕೂಡ ದುಪ್ಪಟ್ಟು ಲಾಭವನ್ನು ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಜಕ್ಕೂ ವಿಜಯ್ ಕಿರಗಂದೂರು ರವರ ಈ ಬುದ್ಧಿವಂತಿಕೆ ಸಿನಿಮಾ ಪಂಡಿತರ ಮನಸ್ಸನ್ನು ಗೆದ್ದಿದೆ.