ಕರುನಾಡಿನ ಮಗ ಪುನೀತ್ ರಾಜ್ ಕುಮಾರ್ ರವರ ಮತ್ತೊಂದು ಫೋಟೋ ವೈರಲ್. ಇದರ ಹಿನ್ನೆಲೆ ಏನು ಗೊತ್ತೇ??

14

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಈಗಾಗಲೇ ಏಳು ತಿಂಗಳಿಗೂ ಅಧಿಕ ಕಾಲ ಕಳೆದಿದ್ದು ಇಂದಿಗೂ ಕೂಡ ಕರ್ನಾಟಕದ ಪ್ರತಿಯೊಬ್ಬ ತಾಯಿ ಕೂಡ ತನ್ನ ಮಗನನ್ನು ಕಳೆದುಕೊಂಡಿದ್ದೇನೆ ಎಂಬ ಭಾವದಲ್ಲಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣಾನಂತರ ಅವರ ಕುರಿತಂತೆ ಚಿಕ್ಕ ವಿಷಯಗಳು ಹೊರಬಂದರು ಕೂಡ ಜನರ ಅದರತ್ತ ಸಂಪೂರ್ಣ ಧ್ಯಾನವನ್ನು ವಹಿಸುತ್ತಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡಿರುವ ಜನಪಯೋಗಿ ಕೆಲಸಗಳು ಅವರ ಮರಣದ ನಂತರ ತಿಳಿದುಬಂದಿದ್ದು ಪುಣ್ಯಾತ್ಮ ಚಿಕ್ಕವಯಸ್ಸಿನಲ್ಲಿಯೇ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದರು ಕೂಡ ಜನರಿಗಾಗಿ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿ ಹೋಗಿದ್ದಾರೆ. ನಿಜಕ್ಕೂ ಅವರ ನಿಸ್ವಾರ್ಥ ಮನೋಭಾವ ಎನ್ನುವುದು ಇಲ್ಲಿ ಪ್ರತಿಫಲಿಸುತ್ತದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಒಂದು ಅಪರೂಪದ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣಗಳ ಸಖತ್ ಸುದ್ದಿ ಮಾಡುತ್ತಿದೆ. ಇದರಲ್ಲಿ ಅವರು ಟೀಶರ್ಟ್ ಹಾಗೂ ಪಂಚೆಯನ್ನು ಉಟ್ಟುಕೊಂಡು ಒಂದು ಮಗುವನ್ನು ಹಿಡಿದುಕೊಂಡಿದ್ದಾರೆ‌. ಅಪ್ಪು ಚಿತ್ರದ ಲುಕ್ ನಲ್ಲಿ ಈ ಫೋಟೋದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾದ್ರೆ ಇದರ ಹಿನ್ನೆಲೆ ಏನು ಎಂಬುದನ್ನು ಹೇಳುತ್ತೇವೆ ಬನ್ನಿ.

ಡಾಕ್ಟರ್ ರಾಜಕುಮಾರ್ ಅವರ 76ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಈ ಫೋಟೋವನ್ನು ಕ್ಲಿಕ್ಕಿಸಲಾಗಿತ್ತು. ಇನ್ನು ಈ ಫೋಟೋದಲ್ಲಿರುವ ಬಾಲಕ ಇನ್ನು ಯಾರು ಅಲ್ಲ ಧಿರೇನ್ ರಾಮ್ ಕುಮಾರ್ ರವರು. ಅವರೇ ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಪ್ಪು ಮಾಮನನ್ನು ಮಿಸ್ ಮಾಡಿಕೊಳ್ಳುತ್ತಿರುವ ದುಃಖವನ್ನು ಹೊರಹಾಕಿದ್ದಾರೆ. ಈ ಫೋಟೋದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮಾಡಿ ತಿಳಿಸಿ.

Get real time updates directly on you device, subscribe now.