ನಿಮ್ಮ ಜೀವನದಲ್ಲಿ ಈ ಏಳು ವಿಚಾರಗಳನ್ನು ಯಾರಿಗೂ ಹೇಳಲೇಬೇಡಿ, ಹೇಳಿದರೆ ನಿಜಕ್ಕೂ ನಿಮ್ಮ ಜೀವನವೇ ಅಲ್ಲೋಲ ಕಲ್ಲೋಲ. ಯಾವ್ಯಾವು ಗೊತ್ತೇ?

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮಲ್ಲಿ ಕೆಲವರಿಗೆ ತಮ್ಮಲ್ಲಿರುವ ವಿಚಾರವನ್ನು ತಮ್ಮಲ್ಲಿ ಉಳಿಸಿಕೊಳ್ಳಲು ಬರುವುದಿಲ್ಲ. ಊರೆಲ್ಲಾ ಅದನ್ನು ಹೇಳಿಕೊಂಡು ಬರುತ್ತಾರೆ. ಆದರೆ ಧರ್ಮಗ್ರಂಥಗಳ ಪ್ರಕಾರ ಏಳು ವಿಚಾರಗಳನ್ನು ಯಾವತ್ತೂ ಕೂಡ ಬೇರೆಯವರ ಜೊತೆಗೆ ಹಂಚಿಕೊಳ್ಳ ಬಾರದು ಎನ್ನುವ ಅಂಶ ಉಲ್ಲೇಖವಾಗಿದೆ. ಹಾಗಿದ್ದರೆ ಇಂದಿನ ಲೇಖನಿಯಲ್ಲಿ ಆ 7 ಹಂಚಿಕೊಳ್ಳ ಬಾರದ ವಿಚಾರ ಯಾವುದು ಹಾಗೂ ಅದರಿಂದ ಏನಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

ಮಂತ್ರ; ಯಾವುದಾದರೂ ಗುರುಗಳು ನಿಮಗೆ ಮಂತ್ರವನ್ನು ಹೇಳಿ ಕೊಟ್ಟಿದ್ದರೆ ಅದು ನಿಮ್ಮ ಬಳಿ ಇಟ್ಟುಕೊಳ್ಳಬೇಕು. ಅದನ್ನು ರಹಸ್ಯವಾಗಿ ನಿಮ್ಮ ಬಳಿ ಇಟ್ಟುಕೊಂಡಷ್ಟು ನಿಮಗೆ ಆದ್ದರಿಂದ ಲಾಭದಾಯಕ ಫಲಗಳು ಉಂಟಾಗುತ್ತವೆ. ಹೀಗಾಗಿ ಅವುಗಳನ್ನು ಬೇರೆಯವರ ಜೊತೆಗೆ ಹಂಚಿಕೊಳ್ಳಲು ಹೋಗಬೇಡಿ.

ಅವಮಾನ; ಒಂದು ವೇಳೆ ನೀವು ಯಾರಿಂದಾದರೂ ಅವಮಾನಿತರಾಗಿ ಇದ್ದರೆ ಆ ವಿಚಾರವನ್ನು ನಿಮ್ಮಲ್ಲಿಯೇ ರಹಸ್ಯವಾಗಿ ಟ್ಟುಕೊಳ್ಳಿ. ಒಂದು ವೇಳೆ ನಿಮ್ಮ ಮನಸ್ಸಿನಲ್ಲಿರುವ ದುಃಖವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಬೇರೆಯವರ ಜೊತೆಗೆ ಹಂಚಿಕೊಂಡರೆ ಖಂಡಿತವಾಗಿ ಅವರು ಮುಂದಿನ ದಿನಗಳಲ್ಲಿ ಅದನ್ನೇ ಹಿಡಿದುಕೊಂಡು ಬೇರೆಯವರ ಮುಂದೆ ನಿಮ್ಮ ಅಪಮಾನ ಮಾಡುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಯಾವತ್ತೂ ಕೂಡ ಇಂತಹ ವಿಚಾರಗಳನ್ನು ಬೇರೆಯವರ ಜೊತೆಗೆ ಹಂಚಿಕೊಳ್ಳಬೇಡಿ.

ರೋಮ್ಯಾನ್ಸ್ ವಿಚಾರಗಳು; ಹೌದು ಗೆಳೆಯರೇ ನೀವು ನಿಮ್ಮ ವೈಯಕ್ತಿಕ ಜೀವನದ ರೋಮ್ಯಾನ್ಸ್ ವಿಚಾರಗಳನ್ನು ಬೇರೆಯವರ ಜೊತೆಗೆ ಹಂಚಿಕೊಳ್ಳಲು ಹೋಗಬೇಡಿ ಅವರು ಸಾಮಾಜಿಕ ಜೀವನದಲ್ಲಿ ನಿಮ್ಮನ್ನು ನೋಡುವ ರೀತಿಯೇ ಬೇರೆ ಆಗಿರುತ್ತೆ. ಹೀಗಾಗಿ ಇದು ನಿಮ್ಮ ಚಾರಿತ್ರ್ಯತೆಯನ್ನು ಬೇರೆಯವರು ಪ್ರಶ್ನಿಸುವಂತೆ ಮಾಡುತ್ತದೆ.

ಸಮ್ಮಾನ ಗೌರವಗಳು; ಹೌದು ಗೆಳೆಯರು ಯಾವುದೇ ಸಂದರ್ಭದಲ್ಲಿ ಕೂಡ ನಿಮಗೆ ದೊಡ್ಡಮಟ್ಟದ ಸನ್ಮಾನ ಹಾಗೂ ಗೌರವಗಳು ಸಿಕ್ಕಿದ್ದರೆ ಅದರ ಕುರಿತಂತೆ ಬೇರೆಯವರ ಬರೀ ಅತಿಯಾಗಿ ಹೇಳಿಕೊಳ್ಳುವುದು ಒಳ್ಳೆಯದಲ್ಲ. ಇದರಿಂದಾಗಿ ನಿಮ್ಮ ಮನಸ್ಸಿನಲ್ಲಿ ನಿಮಗೆ ಗೊತ್ತಿಲ್ಲದ ಹಾಗೆ ಅಹಂಕಾರ ಬೆಳೆಯಲು ಪ್ರಾರಂಭವಾಗುತ್ತದೆ ಹಾಗು ಇದು ನಿಮ್ಮ ಜೀವನದಲ್ಲಿ ಬೆಳವಣಿಗೆಯನ್ನು ನಿಲ್ಲಿಸುತ್ತದೆ.

ಆರ್ಥಿಕ ನಷ್ಟ; ಒಂದು ವೇಳೆ ನಿಮ್ಮ ಜೀವನದಲ್ಲಿ ಆರ್ಥಿಕತೆ ಅಂದರೆ ಹಣ ಇಲ್ಲದೆ ಇರುವ ಪರಿಸ್ಥಿತಿಯನ್ನು ಬೇರೆಯವರ ಜೊತೆಗೆ ಹಂಚಿಕೊಳ್ಳಲು ಹೋಗಬೇಡಿ. ಒಂದು ವೇಳೆ ನೀವು ಹೀಗೆ ಹೇಳಿಕೊಂಡರೆ ನಿಮ್ಮ ಬಳಿ ಬರಲು ಅವರು ಹಿಂದೇಟು ಹಾಕುತ್ತಾರೆ. ನೀವು ಅವರ ಬಳಿ ಬಂದು ಹಣವನ್ನು ಸಾಲವಾಗಿ ಕೇಳಬಹುದು ಎಂಬುದಾಗಿ ನಿಮ್ಮ ಬಳಿ ಬರಲು ಅವರು ಹಿಂದೆ-ಮುಂದೆ ನೋಡುತ್ತಾರೆ. ಹಾಗೆ ನಿಮ್ಮ ಬಗ್ಗೆ ಬೇರೆಯವರ ಬಳಿಯೂ ಕೂಡ ಇದೇ ರೀತಿಯ ಗಾಳಿಸುದ್ದಿಯನ್ನು ಹರಡುತ್ತಾರೆ.

ಮನೆಯ ಜಗಳ; ಮನೆಯ ಒಳಗೆ ನಡೆಯುವಂತಹ ಜಗಳದ ಕುರಿತಂತೆ ಯಾವತ್ತೂ ಕೂಡ ಹೊರಗಿನವರ ಬಳಿ ಹೇಳಿಕೊಳ್ಳಬಾರದು. ಇದರಿಂದಾಗಿ ನಿಮ್ಮ ಮನೆತನದ ಪ್ರತಿಷ್ಠೆ ಹಾಗೂ ಗೌರವಗಳು ಮಣ್ಣುಪಾಲಾಗುತ್ತದೆ. ಕೇವಲ ಇಷ್ಟು ಮಾತ್ರವಲ್ಲದೆ ನಿಮ್ಮ ಪರಿವಾರದ ಕೆಟ್ಟದ್ದನ್ನು ಬಯಸುತ್ತಿರುವವರು ಇದರಿಂದ ಮುಂದಿನ ದಿನಗಳಲ್ಲಿ ಲಾಭವನ್ನು ಪಡೆಯಲು ಯತ್ನಿಸುತ್ತಾರೆ.

ದಾನ; ಹೌದು ಗೆಳೆಯರೆ ದಾನವನ್ನು ಮಾಡುವುದು ನಿಮ್ಮ ಬಳಿಯೇ ರಹಸ್ಯವಾಗಿ ಇಟ್ಟುಕೊಳ್ಳುವುದರಿಂದ ಆಗಿ ದೇವಾನುದೇವತೆಗಳು ನಿಮಗೆ ಒಳ್ಳೆಯ ಫಲ ಸಿಗುವಂತೆ ಆಶೀರ್ವದಿಸುತ್ತಾರೆ. ನೀವು ದಾನ ಮಾಡಿರುವುದನ್ನು ಊರೆಲ್ಲಾ ಹೇಳಿಕೊಂಡು ಬರುವುದು ನಿಮ್ಮ ದಾನ ದಿಂದ ಸಿಗುವ ಲಾಭ ಸಿಗದೆ ಇರುವಂತೆ ಮಾಡುತ್ತದೆ. ಹೀಗಾಗಿ ಈ 7 ವಿಚಾರಗಳನ್ನು ಬೇರೆ ಯಾರ ಬಳಿ ಕೂಡ ಹೇಳಿಕೊಳ್ಳಬಾರದು ಇದರಿಂದಾಗಿ ನಿಮಗೆ ಇಂತಹ ಕಷ್ಟಗಳು ಸಿಗುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿ ಕೊಳ್ಳಿ.

Get real time updates directly on you device, subscribe now.