ಕೇವಲ 5 ವರ್ಷದಲ್ಲಿ 10 ಲಕ್ಷ ಒಡೆಯರಾಗುವ ಯೋಜನಯನ್ನು ಪರಿಚಯ ಮಾಡಿರುವ ಪೋಸ್ಟ್ ಆಫೀಸ್. ಯಾವ ಯೋಜನೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ಕೆಲವೊಂದು ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ನಿವೃತ್ತಿ ನಂತರದ ಜೀವನ ಖಂಡಿತವಾಗಿ ಸುಖ-ಶಾಂತಿ ಹಾಗೂ ಆರ್ಥಿಕ ದೃಢತೆಯಿಂದ ಕೂಡಿರುತ್ತದೆ. ಇಂದು ಕೂಡ ನಾವು ಅದೇ ರೀತಿಯ ಯೋಜನೆಯೊಂದರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಈ ಯೋಜನೆ ನಿಮಗೆ ಇಷ್ಟವಾಯಿತು ಎಂದರೆ ತಪ್ಪದೇ ಇದರಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಮಟ್ಟದ ಹಣವನ್ನು ರಿಟರ್ನ್ ಪಡೆಯುವುದಕ್ಕೆ ಪ್ರಯತ್ನ ಪಡಬಹುದಾಗಿದೆ.
ಎಸ್ ಸಿಎಸ್ಎಸ್ ಮುಕ್ತಾಯ ಸಮಯ 5 ವರ್ಷಗಳು. ಹುಡುಕಿದರು ಇಷ್ಟಪಟ್ಟರೆ ಇದರ ಅವಧಿಯನ್ನು ನೀವು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.
ಅಧಿಕೃತ ವೆಬ್ಸೈಟ್ ಪ್ರಕಾರ ಹೆಚ್ಚೆಂದರೆ ನೀವು ಎಕ್ಸ್ಟ್ರಾ ಮೂರು ವರ್ಷಗಳ ಅವಧಿಯನ್ನು ವಿಸ್ತರಿಸಿ ಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಅಂಚೆ ಕಚೇರಿಗೆ ಹೋಗಿ ಠೇವಣಿದಾರರು ಅವರ ಸಂಗಾತಿಯ ಜೊತೆಗೆ ಜಂಟಿ ಖಾತೆಯನ್ನು ಹೊಂದಬಹುದಾಗಿದೆ. ಆದರೆ ಗರಿಷ್ಠ 15 ಲಕ್ಷಗಳವರೆಗೆ ಮಾತ್ರ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆ ಅಡಿಯಲ್ಲಿ ನಿಮ್ಮ ಬಡ್ಡಿ ಮೊತ್ತ ವರ್ಷಕ್ಕೆ ಹತ್ತು ಸಾವಿರ ರೂಪಾಯಿಯನ್ನು ಮೀರಿದರೆ ಟಿಡಿಎಸ್ ಡಿಡಕ್ಟ್ ಆಗುತ್ತದೆ. ಆದಾಯ ತೆರಿಗೆ ಕಾಯ್ದೆಯ 80ಸಿ ಅಡಿಯಲ್ಲಿ ವಿನಾಯಿತಿ ಸೌಲಭ್ಯ ಕೂಡ ದೊರಕುತ್ತದೆ. ಯೋಜನೆಯಲ್ಲಿ ಖಾತೆಯನ್ನು ತೆರೆಯಲು ಕನಿಷ್ಠ ಮೊತ್ತ ಸಾವಿರ ರೂಪಾಯಿ ಹಾಗೂ ನಿಮ್ಮ ಖಾತೆಯಲ್ಲಿ 15 ಲಕ್ಷ ರೂಪಾಯಿಗಿಂತ ಹೆಚ್ಚಾಗಿ ಹಣವನ್ನು ಇಡುವಂತಿಲ್ಲ. ನೀವು ಅಕೌಂಟ್ ತೆರೆಯುವ ಮೊತ್ತ 1 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೆ ನಗದು ಹಣವನ್ನು ನೀಡಿ ತೆರೆಯಬಹುದಾಗಿದೆ ಹಾಗೂ ಮೊತ್ತ 1 ಲಕ್ಷಕ್ಕಿಂತ ಜಾಸ್ತಿಯಾಗಿದ್ದರೆ ಚೆಕ್ ನೀಡಿ ನೀವು ಖಾತೆಯನ್ನು ತಡೆಯಬಹುದಾಗಿದೆ.
ಹಿರಿಯ ನಾಗರಿಕ ಸ್ಕೀಮ್ ನಲ್ಲಿ 10 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಿದರೆ ವಾರ್ಷಿಕ 7.4% ಬಡ್ಡಿದರದಲ್ಲಿ ಮೆಚುರಿಟಿ ಅಂದರೆ 5 ವರ್ಷದ ನಂತರ ಒಟ್ಟು ಮೊತ್ತ 14 ಆಗಿರುತ್ತದೆ. 28964 ಅಂದ್ರೆ ಒಟ್ಟು 14 ಲಕ್ಷಕ್ಕೂ ಹೆಚ್ಚು ಮೊತ್ತ ಆಗಿರುತ್ತದೆ. ಅಂದರೆ ಬಡ್ಡಿಯ ರೂಪದಲ್ಲಿ ನೀವು 428964 ರೂಪಾಯಿಯನ್ನು ಲಾಭವಾಗಿ ಪಡೆಯುತ್ತೀರಿ. ಹಿರಿಯ ನಾಗರಿಕ ಯೋಜನೆಯಲ್ಲಿ ನೀವು ಈ ಖಾತೆಯನ್ನು ತೆರೆಯಲು ನಿಮ್ಮ ವಯಸ್ಸು 60 ಅಥವಾ 60ಕ್ಕಿಂತ ಮೇಲಾಗಿರಬೇಕು. ಅಥವಾ ಸ್ವಯಂ ನಿವೃತ್ತಿಯನ್ನು ತೆಗೆದುಕೊಂಡವರು ಕೂಡ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.