ಹುಡುಕಿಕೊಂಡು ಹೋಗಿ ಬಾಲಿವುಡ್ ನಟಿಯರನ್ನು ಮದುವೆಯಾಗಿರುವ 7 ಸ್ಟಾರ್ ಕ್ರಿಕೆಟಿಗರು ಯಾರು ಗೊತ್ತಾ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮೊದಲಿನಿಂದಲೂ ಕೂಡ ಕ್ರಿಕೆಟ್ ಆಟಗಾರರಿಗೂ ಹಾಗೂ ಬಾಲಿವುಡ್ ನಟಿಯರಿಗೆ ಬಿಡಿಸಲಾರದ ಅನುಬಂಧ ಇದೆ ಎಂದು ಹೇಳಬಹುದಾಗಿದೆ. ಮೊದಲಿನಿಂದಲೂ ಕೂಡ ಭಾರತೀಯ ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಮದುವೆಯಾಗುವ ಪರಂಪರೆ ನಡೆದುಕೊಂಡು ಬಂದಿದೆ. ಅವುಗಳಲ್ಲಿ ಇಂದು ನಾವು ಪ್ರಮುಖ ಏಳು ಜೋಡಿಗಳನ್ನು ನಿಮಗೆ ಪರಿಚಯಿಸಲು ಹೊರಟಿದ್ದೇವೆ. ಹಾಗಿದ್ದರೆ ಬಾಲಿವುಡ್ ನಟಿಯರನ್ನು ಮದುವೆಯಾಗಿರುವ ಏಳು ಕ್ರಿಕೆಟಿಗರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಕ್ಷೇತ್ರಗಳೆಂದರೆ ಮನೋರಂಜನೆಯಲ್ಲಿ ಸಿನಿಮಾ ಹಾಗೂ ಕ್ರೀಡೆಯಲ್ಲಿ ಕ್ರಿಕೆಟ್. ಈ ವಿಚಾರ ಎರಡು ಕ್ಷೇತ್ರಗಳ ಸಮ್ಮಿಲನ ಎಂದು ಹೇಳಬಹುದಾಗಿದೆ.

ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ; ಈ ಜಮಾನದ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಎಂದೇ ಖ್ಯಾತರಾಗಿರುವ ವಿರಾಟ್ ಕೊಹ್ಲಿ ರವರು ಬಾಲಿವುಡ್ ಚಿತ್ರರಂಗದ ಅತ್ಯಂತ ಬಹುಬೇಡಿಕೆ ನಟಿಯಾಗಿರುವ ಅನುಷ್ಕಾ ಶರ್ಮಾ ರವರನ್ನು ಹಲವಾರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಮಾಧ್ಯಮಗಳಿಂದ ಈ ಮಾತನ್ನು ದೂರವಿಡಲು ಪ್ರಯತ್ನಿಸಿದ್ದರು ಆದರೆ ಇವರಿಬ್ಬರು ಓಡಾಡುತ್ತಿದ್ದದ್ದು ಕ್ಯಾಮರಾ ಕಣ್ಣಿಗೆ ಕಂಡು ಇವರ ಕುರಿತಂತೆ ಸುದ್ದಿಗಳು ವೈರಲ್ ಆಗಲು ಆರಂಭಿಸುತ್ತವೆ. ನಂತರ 2017 ರಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಶರ್ಮ ಇಬ್ಬರೂ ಕೂಡ ಇಟಲಿಯ ಸುಂದರ ಸ್ಥಳದಲ್ಲಿ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗುತ್ತಾರೆ. ಸದ್ಯಕ್ಕೆ ವಮಿಕಾ ಎನ್ನುವ ಹೆಣ್ಣುಮಗಳ ಪೋಷಕರಾಗಿದ್ದಾರೆ.

ಯುವರಾಜ್ ಸಿಂಗ್ – ಹೇಝಲ್ ಕೀಚ್; ಭಾರತೀಯ ವರ್ಲ್ಡ್ ಕಪ್ ಹೀರೋ ಎಂದೇ ಖ್ಯಾತರಾಗಿರುವ ಯುವರಾಜ್ ಸಿಂಗ್ ರವರು ಫೇಮಸ್ ಆಗಿರೋದು ಸ್ಟುವರ್ಟ್ ಬ್ರಾಡ್ ರವರ ಓವರ್ನಲ್ಲಿ ಆರು ಸಿಕ್ಸರ್ ಬಾರಿಸಿರುವುದು ಕ್ಕಾಗಿ. ಬಾಲಿವುಡ್ ಚಿತ್ರರಂಗದ ಹಲವಾರು ನಟಿಯರ ಹೆಸರು ಇವರ ಜೊತೆಗೆ ತಳುಕು ಹಾಕಿಕೊಂಡಿದ್ದರು ಕೂಡ ಯಾವುದು ಮುಂದುವರೆಯಲಿಲ್ಲ. ಇಂಗ್ಲೆಂಡ್ ಮೂಲದ ಬಾಲಿವುಡ್ ನಟಿ ಆಗಿರುವ ಹೇಝಲ್ ಕೀಚ್ ರವರ ಜೊತೆಗೆ ಇವರ ಮದುವೆಯಾಗಿರುತ್ತದೆ. ಮದುವೆಗಿಂತ ಮೊದಲು ಕೇವಲ ಒಟ್ಟಿಗೆ ಕುಳಿತು ಕಾಫಿ ಕುಡಿಯುವುದಕ್ಕಾಗಿ ಯುವರಾಜ್ ಸಿಂಗ್ ಅವರನ್ನು ಬರೋಬ್ಬರಿ ಮೂರು ವರ್ಷಗಳ ಕಾಲ ಅವರ ಪತ್ನಿ ಕಾಯಿಸಿದ್ದಾರೆ ಎನ್ನುವುದು ಸಂದರ್ಶನದ ನಂತರ ತಿಳಿದುಬಂದಿದೆ.

ಹರ್ಭಜನ್ ಸಿಂಗ್ – ಗೀತಾ ಬಸ್ರಾ; ಭಾರತೀಯ ಕ್ರಿಕೆಟ್ ತಂಡದ ಮಿಸ್ಟರಿ ಆಫ್-ಸ್ಪಿನ್ನರ್ ಆಗಿರುವ ಹರ್ಭಜನ್ ಸಿಂಗ್ ರವರು ಭಾರತೀಯ ತಂಡದ ಪ್ರಮುಖ ಆಟಗಾರನಾಗಿ ಕಾಣಿಸಿಕೊಂಡಿದ್ದರು. ಕಾಮನ್ ಫ್ರೆಂಡ್ ಮೂಲಕ ಬಾಲಿವುಡ್ ನಟಿ ಗೀತಾ ಬಸ್ರಾ ರವರ ಪರಿಚಯ ಆಗಿ ಇಬ್ಬರು ಕೂಡ ಬರೋಬ್ಬರಿ ಎಂಟು ವರ್ಷಗಳ ಕಾಲ ಡೇಟಿಂಗ್ ನಡೆಸುತ್ತಾರೆ. ನಂತರವೇ ಇವರಿಬ್ಬರ ಮದುವೆ ನಡೆಯುತ್ತಿದೆ ಇವರ ಮದುವೆಗೆ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಗಣ್ಯರು ಭಾಗವಹಿಸಿ ಆಶೀರ್ವದಿಸಿದ್ದಾರೆ.

ಜಹೀರ್ ಖಾನ್ – ಸಾಗರಿಕಾ ಘಾಟ್ಗೆ; ಭಾರತೀಯ ಕ್ರಿಕೆಟ್ ತಂಡದ ಗ್ರೇಟೆಸ್ಟ್ ಸ್ವಿಂಗ್ ಬೌಲರ್ ಆಗಿ ಜಹೀರ್ ಖಾನ್ ತಮ್ಮನ್ನು ತಾವು ದಶಕಗಳಿಗೆ ಹೆಚ್ಚು ಕಾಲ ಸಾಬೀತುಪಡಿಸಿದ್ದಾರೆ. ಇನ್ನು ಇವರು ಮದುವೆಯಾಗಿರುವುದು ಚಕ್ ದೆ ಚಿತ್ರದ ಖ್ಯಾತಿಯ ಸಾಗರಿಕಾ ಘಾಟ್ಗೆ ರವರನ್ನು. ಸಾಗರಿಕ ರವರನ್ನು ಜಹೀರ್ ಖಾನ್ ರವರು ಮೊದಲು ನೋಡಿದ್ದು ಹರ್ಭಜನ್ ಸಿಂಗ್ ಅವರ ಮದುವೆಯಲ್ಲಿ. ಅದಾದ ನಂತರ ಬರೋಬ್ಬರಿ 9 ತಿಂಗಳುಗಳ ಕಾಲ ಇವರಿಬ್ಬರು ಪರಸ್ಪರ ಡೇಟಿಂಗ್ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ನಂತರವೇ ಇವರಿಬ್ಬರು 2017 ರಲ್ಲಿ ಮದುವೆಯಾಗಿದ್ದಾರೆ ಎನ್ನುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ ನಂತರ ಎಲ್ಲರಿಗೂ ತಿಳಿದುಬಂದಿದೆ.

ಹಾರ್ದಿಕ್ ಪಾಂಡ್ಯ – ನತಾಶ ಸ್ಟಾಂಕೋವಿಕ್; ಭಾರತೀಯ ಕ್ರಿಕೆಟ್ ತಂಡದ ಇತ್ತೀಚಿನ ದಿನಗಳಲ್ಲಿ ಕಂಡುಬಂದಂತಹ ಅತ್ಯಂತ ಯಶಸ್ವಿಯಾಗಿ ಹಾರ್ದಿಕ್ ಪಾಂಡ್ಯ ಅವರು ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನ ನಟಿಯಾಗಿರುವ ನತಾಶ ರವರನ್ನು ಕ್ಲಬ್ ಒಂದರಲ್ಲಿ ಭೇಟಿಯಾಗಿ ಕೂಡಲೇ ಅವರ ಕುರಿತಂತೆ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಇವರಿಬ್ಬರ ಸ್ನೇಹ ಸಂಬಂಧ ಎನ್ನುವುದು ಪ್ರೀತಿಗೆ ತಿರುಗಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸಾಕಷ್ಟು ವಿ’ವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾದ ನಂತರ ಹಾರ್ದಿಕ್ ಪಾಂಡ್ಯ ರವರ ಜೊತೆಗಿದ್ದಿದ್ದು ನತಾಶ. ಇವರು ನತಾಶ ರವರು ತಾಯಿಯಾದ ನಂತರವೇ ಮದುವೆಯಾಗಿದ್ದು. ಇವರಿಗೆ ಅಗಸ್ತ್ಯ ಎನ್ನುವ ಗಂಡು ಮಗನಿದ್ದಾನೆ.

ಮನ್ಸೂರ್ ಅಲಿ ಖಾನ್ ಪಟೌಡಿ – ಶರ್ಮಿಳಾ ಠಾಗೋರ್; ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಆಗಿರುವ ಮನ್ಸೂರ್ ಅಲಿ ಖಾನ್ ಪಟೌಡಿ ರವರು ಬಾಲಿವುಡ್ ಕುರಿತಂತೆ ಯಾವುದೇ ಐಡಿಯಾ ಹೊಂದಿರುವುದಿಲ್ಲ. ಇನ್ನು ಇತ್ತ ಶರ್ಮಿಳಾ ಟಾಗೋರ್ ಅವರಿಗೂ ಕೂಡ ಕ್ರಿಕೆಟ್ ಎಂದರೆ ಏನು ಎಂಬುದು ತಿಳಿದಿರಲಿಲ್ಲ. ಆದರೂ ಕೂಡ ಮನ್ಸೂರ್ ಆಲಿ ಖಾನ್ ಪಟೌಡಿ ರವರ ಶರ್ಮಿಳಾ ಟಾಗೋರ್ ಅವರ ಮೇಲಿನ ಪ್ರೀತಿಯನ್ನು ಇವರಿಬ್ಬರನ್ನು ಒಂದು ಮಾಡುತ್ತದೆ. ಪಟೌಡಿ ರವರು ಶರ್ಮಿಲ ರವರಿಗೆ ಪ್ಯಾರಿಸ್ನಲ್ಲಿ ಪ್ರಪೋಸ್ ಮಾಡುತ್ತಾರೆ. 2011 ರಲ್ಲಿ ಮನ್ಸೂರ್ ಆಲಿ ಖಾನ್ ಪಟೌಡಿ ರವರು ಮರಣವನ್ನು ಹೊಂದಿದ್ದರೂ ಕೂಡ ಇವರಿಬ್ಬರ ಪ್ರೇಮ ಕಹಾನಿ ಎನ್ನುವುದು ಇನ್ನೂ ಕೂಡ ಜನರ ಮನಸ್ಸಿನಲ್ಲಿ ಜೀವಂತವಾಗಿದೆ.

ಮೊಹಮ್ಮದ್ ಅಜರುದ್ದಿನ್ – ಸಂಗೀತ ಬಿಜ್ಲನಿ; ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಮೊಹಮ್ಮದ್ ಅಜರುದ್ದೀನ್ ರವರು ನಟಿ ಸಂಗೀತಾ ಬಿಜ್ಲಾನಿ ರವರನ್ನು ಜಾಹೀರಾತಿನ ಚಿತ್ರೀಕರಣ ಸಂದರ್ಭದಲ್ಲಿ ಭೇಟಿಯಾಗುತ್ತಾರೆ. ನಂತರ ಇವರಿಬ್ಬರ ನಡುವೆ ಪ್ರೀತಿಯೆನ್ನುವುದು ಬೆಳೆದು ನಿಲ್ಲುತ್ತದೆ. ಆದರೆ ಅದಾಗಲೇ ಮೊಮ್ಮದ್ ಅಜರುದ್ದಿನ್ ರವರು ನೌರೀನ್ ರವರನ್ನು ಮದುವೆಯಾಗಿರುತ್ತಾರೆ. ನಂತರ ತಮ್ಮ ಮೊದಲ ಪತ್ನಿಗೆ ಮೊಹಮ್ಮದ್ ಅಜರುದ್ದಿನ್ ರವರು 1996 ರಲ್ಲಿ ಡಿವೋರ್ಸ್ ನೀಡಿ ಸಂಗೀತ ಬಿಜ್ಲನಿ ರವರನ್ನು ಮದುವೆಯಾಗುತ್ತಾರೆ. ಆದರೆ ಈ ನಡುವೆ ನಡೆದಂತಹ ಹಲವಾರು ವಿವಾದಾತ್ಮಕ ಘಟನೆಗಳ ಕಾರಣದಿಂದಾಗಿ ಇವರಿಬ್ಬರು ಡಿವೋರ್ಸ್ ಪಡೆದುಕೊಳ್ಳುತ್ತಾರೆ. ಇವರೇ ಬಾಲಿವುಡ್ ನಟಿಯರನ್ನು ಮದುವೆಯಾಗಿರುವ ಕ್ರಿಕೆಟಿಗರು. ಇವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Get real time updates directly on you device, subscribe now.