ಈ ಚಿಕ್ಕ ಉದ್ಯಮ ಆರಂಭ ಮಾಡಿ, ತಿಂಗಳಿಗೆ ಬರೋಬ್ಬರಿ 10 ಲಕ್ಷದವರೆಗೂ ಹಣ ಗಳಿಸಿವುದು ಹೇಗೆ ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ತಮ್ಮ ಕೆಲಸದಿಂದ ಬೇಸರಗೊಂಡು ತಮ್ಮದೇ ಆದಂತಹ ಒಂದು ಉದ್ಯಮವನ್ನು ಪ್ರಾರಂಭಿಸಿ ಹಣಗಳಿಸುವ ಕುರಿತಂತೆ ಹಲವಾರು ಜನ ಯೋಚಿಸಿರುತ್ತಾರೆ ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ ಸಿಕ್ಕಿರುವುದಿಲ್ಲ. ಇಂದಿನ ಲೇಖನಿಯಲ್ಲಿ ನಾವು ಚಿಕ್ಕ ಉದ್ಯಮದಿಂದ ಸಾಕಷ್ಟು ಹಣ ಗಳಿಸುವ ಉದ್ಯಮದ ಕುರಿತು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ಹೌದು ಗೆಳೆಯರೇ ಇಂದು ನಾವು ಮಾತನಾಡುತ್ತಿರುವುದು ರಟ್ಟಿನ ಬಾಕ್ಸ್ ಮಾಡುವ ಕುರಿತಂತೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಸ್ತುವಿನಿಂದ ಪ್ರಾರಂಭವಾಗಿ ದೊಡ್ಡ ವಸ್ತುಗಳ ವರೆಗೂ ಪ್ಯಾಕ್ ಮಾಡುವುದಕ್ಕೆ ರಟ್ಟಿನ ಬಾಕ್ಸ್ ಗಳ ಅಗತ್ಯ ಹೆಚ್ಚಾಗಿದೆ. ಬೇರೆ ಉದ್ಯಮಗಳ ಹಾಗೆ ಇದಕ್ಕೆ ಅದೇ ಸಂದರ್ಭದಲ್ಲಿ ಬೇಡಿಕೆ ಇದೆ ಎನ್ನುವ ಯಾವುದೇ ಅಡೆತಡೆಗಳು.

ಹೌದು ಗೆಳೆಯರು ಯಾವುದೇ ಸಂದರ್ಭದಲ್ಲಿ ಇದನ್ನು ತಯಾರಿಸಿ ಲಾಭವನ್ನು ಪಡೆಯಬಹುದಾಗಿದೆ ಇನ್ನು ಇದರಲ್ಲಿ ನಷ್ಟವಾಗುವ ಸಾಧ್ಯತೆಗಳು ಕೂಡ ಬೇರೆ ಉದ್ಯಮಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಆಗಿರುತ್ತದೆ. ಅದರಲ್ಲೂ ಆನ್ಲೈನ್ ಸಂಸ್ಥೆಗಳು ಒಂದು ಚಿಕ್ಕ ವಸ್ತುವಿನಿಂದ ಹಿಡಿದು ದೊಡ್ಡ ವಸ್ತುವನ್ನು ಒಂದು ಜಾಗದಿಂದ ಬೇರೆ ಕಡೆಗೆ ಸಾಗಿಸುವಾಗ ಇಂತಹ ಸುರಕ್ಷಿತ ರಟ್ಟಿನ ಬಾಕ್ಸ್ ಗಳ ಕವರ್ ಎನ್ನುವುದು ಸಾಕಷ್ಟು ಅವಶ್ಯಕತೆ ಇರುತ್ತದೆ. ಹೀಗಾಗಿ ಇಂತಹ ಉದ್ಯಮಕ್ಕೆ ಸಾಕಷ್ಟು ಬೇಡಿಕೆ ಇದೆ ಎಂದು ಹೇಳಬಹುದಾಗಿದೆ. ಮೊದಲಿಗೆ ಈ ಉದ್ಯಮವನ್ನು ಪ್ರಾರಂಭಿಸಲು 5000 ಅಡಿ ಚದರ ಜಾಗ ಬೇಕಾಗುತ್ತೆ ಇನ್ನು ಇದಕ್ಕಾಗಿ ಸ್ಥಾವರಗಳನ್ನು ಕೂಡ ಏರ್ಪಡಿಸಬೇಕು. ಒಂದು ಅರೆ ಸ್ವಯಂ ಚಾಲಿತ ಯಂತ್ರ ಹಾಗೂ ಇನ್ನೊಂದು ಪೂರ್ಣ ಸ್ವಯಂ ಚಾಲಿತ ಯಂತ್ರ ಉದ್ಯಮಕ್ಕಾಗಿ ಬೇಕಾಗುತ್ತದೆ.

ಸಣ್ಣ ಉದ್ಯಮವನ್ನಾಗಿ ಕೂಡ ನೀವು ಇದನ್ನು ಪ್ರಾರಂಭಿಸಬಹುದಾಗಿದೆ ಆದರೆ ನೀವು ಒಂದು ವೇಳೆ ಅರೆ ಸ್ವಯಂಚಾಲಿತ ಯಂತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಪ್ರಾರಂಭಿಸಲು ಯತ್ನಿಸಿದರೆ 20 ಲಕ್ಷ ರೂಪಾಯಿ ಖರ್ಚಾಗುತ್ತದೆ ಹಾಗೂ ಪೂರ್ಣ ಸ್ವಯಂಚಾಲಿತ ಯಂತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಪ್ರಾರಂಭಿಸಲು ಯೋಚಿಸಿದರೆ 50 ಲಕ್ಷ ರೂಪಾಯಿ ಖರ್ಚಾಗುತ್ತದೆ. ಇನ್ನು ಸದ್ಯದ ಮಟ್ಟಿಗೆ ಇದು ಭಾರತ ಸೇರಿದಂತೆ ಬೇರೆ ದೇಶಗಳಲ್ಲಿ ಕೂಡ ಅತ್ಯಂತ ಉತ್ತಮವಾದ ಬೇಡಿಕೆಯನ್ನು ಹೊಂದಿರುವ ಕಾರಣದಿಂದಾಗಿ ಏನಿಲ್ಲವೆಂದರೂ ನೀವು ಕನಿಷ್ಠ 10 ಲಕ್ಷ ರೂಪಾಯಿ ಆದಾಯ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

Get real time updates directly on you device, subscribe now.