ಕಲ್ಯಾಣಮಂಟಪಕ್ಕೆ ಸರಿಯಾದ ಸಮಯಕ್ಕೆ ಫೋಟೋ ತೆಗೆಯುವವ ಬಂದಿಲ್ಲ ಎಂದು ವಧು ತೆಗೆದುಕೊಂಡ ನಿರ್ಧಾರವೇನು ಗೊತ್ತೆ?? ಹೀಗೂ ಇರ್ತಾರ ಎಂದ ನೆಟ್ಟಿಗರು.

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಮದುವೆಯನ್ನು ಪ್ರತಿಯೊಬ್ಬರ ಜೀವನದಲ್ಲಿ ಕೂಡ ನಡೆಯಬೇಕಾಗಿರುವ ಘಟನೆ ಹೀಗಾಗಿ ಅದರ ಕುರಿತಂತೆ ಸಾಕಷ್ಟು ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇತ್ತೀಚಿನ ಡಿಜಿಟಲ್ ಜಗತ್ತಿನಲ್ಲಿ ಜನರು ಸಂಪೂರ್ಣವಾಗಿ ಸೋಶಿಯಲ್ ಮೀಡಿಯಾ ಗೆ ಮಾರುಹೋಗಿದ್ದಾರೆ.

ಹೌದು ಗೆಳೆಯರೇ ಉತ್ತರಪ್ರದೇಶದಲ್ಲಿ ನಡೆದಿರುವ ಒಂದು ಮದುವೆಯಲ್ಲಿ ನಡೆದ ದೃಷ್ಟಾಂತದ ನಂತರ ಈಗ ನಾವು ಹೇಳಿರುವ ಮಾತು ಸತ್ಯವಾಗುತ್ತದೆ ಎಂಬುದಾಗಿ ಒಂದು ಕೊಳ್ಳಬಹುದಾಗಿದೆ. ಹೌದು ಗೆಳೆಯರೇ ಕಾನ್ಪುರದಲ್ಲಿ ನಡೆದಿರುವ ಈ ಮದುವೆ ಸಮಾರಂಭ ಪೂರ್ಣಗೊಳ್ಳುವುದು ರಲ್ಲಿ ವಿಫಲವಾಗಿದೆ. ಇದಕ್ಕೆ ತಕರಾರು ಎತ್ತಿ ಮದುವೆ ನಿಲ್ಲುವಂತೆ ಮಾಡಿರುವುದು ಮದುಮಗಳು ಎಂಬುದಾಗಿ ತಿಳಿದುಬಂದಿದೆ. ಹೌದು ಗೆಳೆಯರೆ ದಿಬ್ಬಣ ಹೊರಟು ಪರಸ್ಪರ ಇಬ್ಬರೂ ಕೂಡ ವರಮಾಲೆಯನ್ನು ಬದಲಾಯಿಸಿಕೊಳ್ಳ ಬೇಕಾಗಿತ್ತು. ಆದರೆ ಈ ಸಂದರ್ಭದಲ್ಲಿ ಮದುಮಗಳು ಫೋಟೋಗ್ರಾಫರ್ ಇಲ್ಲದಿರುವುದನ್ನು ಗಮನಿಸಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಫೋಟೋ ಮೇಲಿರುವ ಹುಚ್ಚು ಸಾಕಷ್ಟು ವಿಪರೀತವಾಗಿ ಹರಡಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಫೋಟೋಗ್ರಾಫರ್ ಇಲ್ಲದಿರುವುದನ್ನು ಕಂಡು ಮದುಮಗಳು ನಾನು ಈ ಮದುವೆ ಮಾಡಿಕೊಳ್ಳುವುದಿಲ್ಲ ಎಂಬುದಾಗಿ ವೇದಿಕೆಯಿಂದ ಹೊರನಡೆದಿದ್ದಾಳೆ.

ಮನೆಯವರು ಎಷ್ಟೇ ಸಮಾಧಾನಪಡಿಸಲು ಪ್ರಯತ್ನ ಪಟ್ಟರೂ ಕೂಡ ಮದುವೆ ದಿನವೇ ಫೋಟೋಗ್ರಾಫರ್ ನನ್ನ ತರಲು ಸಾಧ್ಯವಾಗದ ಈತನು ನನ್ನನ್ನು ಮುಂದೆ ಹೇಗೆ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬುದಾಗಿ ಮನೆಗೆ ನಡೆದಿದ್ದಾಳೆ. ನಂತರ ಎರಡು ಕಡೆಯವರು ಕೂಡ ಪೊಲೀಸ್ ಠಾಣೆಗೆ ಹೋಗಿ ಈ ಕುರಿತಂತೆ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ನಂತರ ಪೊಲೀಸ್ ಠಾಣೆಯಲ್ಲಿ ಪರಸ್ಪರ ಇಬ್ಬರೂ ಕೂಡ ಬದಲಾಯಿಸಿಕೊಂಡಿದ್ದ ದುಬಾರಿ ಬೆಲೆಯ ವಸ್ತುಗಳನ್ನು ಅವರವರಿಗೆ ನೀಡುವ ಮೂಲಕ ಮದುವೆಯನ್ನು ಅರ್ಧದಲ್ಲಿಯೇ ಮುರಿದುಕೊಂಡಿದ್ದಾರೆ. ನಿಜಕ್ಕೂ ಕೂಡ ಈ ಕಾಲದಲ್ಲಿ ಒಂದು ಫೋಟೋ ಗೋಸ್ಕರ ಮದುವೆ ಸಂಬಂಧಗಳು ನಿಂತು ಹೋಗುತ್ತದೆ ಎಂಬುದನ್ನು ಊಹಿಸಲು ಕೂಡ ಸಾಧ್ಯವಿಲ್ಲ ಎಂದು ಹೇಳಬಹುದಾಗಿದೆ.

Get real time updates directly on you device, subscribe now.