ಓರ್ಮಸ್ ಸ್ಟಾರ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ಅತ್ಯಂತ ಜನಪ್ರಿಯ ಟಾಪ್ 10 ನಟರು ಯಾರ್ಯಾರು ಗೊತ್ತೇ?? ಎಷ್ಟು ಕನ್ನಡಿಗರಿಗೆ ಯಾವ ಸ್ಥಾನ ಸಿಕ್ಕಿದೆ ಗೊತ್ತೇ??

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಬಾರಿ ನಿಮಗೆಲ್ಲ ತಿಳಿದಿರುವಂತೆ ಸಾಕಷ್ಟು ಸಿನಿಮಾಗಳು ಬಂದು ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ ಎನ್ನಬಹುದಾಗಿದೆ. ಇನ್ನು ಆರ್ಮ್ಯಾಕ್ಸ್ ಮೀಡಿಯಾ ಎನ್ನುವ ಮೀಡಿಯಾ ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ ಏಪ್ರಿಲ್ ತಿಂಗಳಿನಲ್ಲಿ ಅತ್ಯಂತ ಜನಪ್ರಿಯರಾಗಿರುವ ಭಾರತೀಯ ನಟರ ಲಿಸ್ಟನ್ನು ಬಹಿರಂಗಪಡಿಸಿವೆ. ಇದರಲ್ಲಿ ಯಾವ ನಟರು ಯಾವ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಹತ್ತನೇ ಸ್ಥಾನದಲ್ಲಿ ಮಹೇಶ್ ಬಾಬು ರವರು ಕಾಣಸಿಗುತ್ತಾರೆ. ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಮಹೇಶ್ ಬಾಬು ರವರು ಸದ್ಯದ ಮಟ್ಟಿಗೆ ತೆಲುಗು ಚಿತ್ರರಂಗದ ಟಾಪ್ ಸ್ಟಾರ್ ನಟರಲ್ಲಿ ಒಬ್ಬರಾಗಿ ಕಾಣಿಸುತ್ತಾರೆ. ಇವರ ನಟನೆಯ ಸರ್ಕಾರಿ ವಾರು ಪಾಠ ಸಿನಿಮಾ ಬಿಡುಗಡೆಯಾಗಿ ಈಗಾಗಲೇ ಭರ್ಜರಿ ಕಲೆಕ್ಷನ್ ಅನ್ನು ಮಾಡುತ್ತಿದೆ.

9ನೇ ಸ್ಥಾನದಲ್ಲಿ ತಮಿಳು ನಟ ಸೂರ್ಯ ರವರು ಕಾಣಿಸುತ್ತಾರೆ. ಸೂರ್ಯ ರವರು ಈಗಾಗಲೇ ಮಹಾನ್ ಸಿನಿಮಾದಲ್ಲಿ ಇತ್ತೀಚಿಗೆ ಅದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದಾರೆ ಎಂದು ಹೇಳಬಹುದಾಗಿದೆ.

8ನೇ ಸ್ಥಾನದಲ್ಲಿ ರಾಮಚರಣ್ ರವರು ಕಾಣಸಿಗುತ್ತಾರೆ. ರಾಮ್ ಚರಣ್ ನಟನೆಯ ಆರ್ ಆರ್ ಆರ್ ಚಿತ್ರ ಈಗಾಗಲೇ ಭಾರತೀಯ ಬಾಕ್ಸಾಫೀಸ್ ನಲ್ಲಿ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವುದು ನಿಮಗೆಲ್ಲ ತಿಳಿದಿದೆ. ಇನ್ನು ಇಷ್ಟು ಮಾತ್ರವಲ್ಲದೆ ಇವರು ಈ ವರ್ಷ ತಮ್ಮ ತಂದೆ ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆಗೆ ಆಚಾರ್ಯ ಎನ್ನುವ ಸಿನಿಮಾದಲ್ಲಿ ಕೂಡ ನಟಿಸಿದ್ದು ಈ ಚಿತ್ರ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

7ನೇ ಸ್ಥಾನದಲ್ಲಿ ನಮ್ಮ ಕನ್ನಡದ ಹೆಮ್ಮೆಯ ನಟ ಆಗಿರುವ ರಾಕಿಂಗ್ ಸ್ಟಾರ್ ಯಶ್ ರವರು ಕಾಣಸಿಗುತ್ತಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಯಶಸ್ಸು ಎನ್ನುವುದು ಅವರ ಹೆಸರನ್ನು ಪ್ರತಿಯೊಂದು ರಾಜ್ಯದಲ್ಲಿ ಕೂಡ ದೊಡ್ಡ ಸ್ಟಾರ್ ನಟನ ಜನಪ್ರಿಯತೆಯನ್ನು ಮ್ಯಾಚ್ ಮಾಡುವ ರೀತಿಯಲ್ಲಿ ಹೆಚ್ಚಿಸಿದೆ.

6ನೇ ಸ್ಥಾನದಲ್ಲಿ ಅಜಿತ್ ಕುಮಾರ್. ತಮಿಳು ಚಿತ್ರರಂಗದ ಸ್ಟಾರ್ ನಟ ಆಗಿರುವ ಅಜಿತ್ ಕುಮಾರ್ ನಟನೆಯ ವಾಲಿಮೈ ಸಿನಿಮಾ ಬಿಡುಗಡೆಯಾಗಿ ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿ ತಲಾ ಅಜಿತ್ ಕುಮಾರ್ ರವರ ಖ್ಯಾತಿಯನ್ನು ಪರಭಾಷೆಗಳಿಗೆ ಪಸರಿಸುವಂತೆ ಕೂಡ ಮಾಡಿದೆ.

5ನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್. ಈ ಜನಪ್ರಿಯ ನಟರ ಲಿಸ್ಟಿನಲ್ಲಿ ಕಾಣಸಿಗುವಂತಹ ಏಕೈಕ ಬಾಲಿವುಡ್ ನಟ ಇವರೇ ಎಂದು ಹೇಳಬಹುದಾಗಿದೆ. ಈಗಾಗಲೇ ಇವರ ನಟನೆಯ ಬಚ್ಚನ್ ಮಾಡಿದೆ ಸಿನಿಮಾ ಈಗಾಗಲೇ ಈ ವರ್ಷ ಬಿಡುಗಡೆಯಾಗಿದ್ದು ಕೊಂಚ ಮಟ್ಟಿಗೆ ಯಶಸ್ಸನ್ನು ಕಂಡಿದೆ ಎಂದು ಹೇಳಬಹುದಾಗಿದೆ. ಇನ್ನು ಇವರ ನಟನೆಯ ಐತಿಹಾಸಿಕ ಚಿತ್ರವಾಗಿರುವ ಪ್ರಥ್ವಿರಾಜ್ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ನಾಲ್ಕನೇ ಸ್ಥಾನದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ರವರು ಕಾಣಸಿಗುತ್ತಾರೆ. ಹೌದು ಗೆಳೆಯರೆ ಪುಷ್ಪ ಚಿತ್ರದ ನಂತರ ಅಲ್ಲುಅರ್ಜುನ್ ರವರ ಜನಪ್ರಿಯತೆ ಎನ್ನುವುದು ಭಾರತದ ಮೂಲೆಮೂಲೆಯಲ್ಲಿ ಕೂಡ ವ್ಯಾಪಿಸಿದ್ದು ಪುಷ್ಪರಾಜ್ ನ ಝಲಕ್ ಎನ್ನುವುದು ಪ್ರತಿಯೊಬ್ಬರ ಮುಖದಲ್ಲಿ ಮಿಂಚುತ್ತಿದೆ ಎಂದು ಹೇಳಬಹುದಾಗಿದೆ.

ಮೂರನೇ ಸ್ಥಾನದಲ್ಲಿ ಪ್ರಭಾಸ್ ರವರು ಕಾಣಸಿಗುತ್ತಾರೆ. ಪ್ಯಾನ್ ಇಂಡಿಯಾ ಸಾರ್ ಎಂದೇ ಖ್ಯಾತರಾಗಿರುವ ಪ್ರಭಾಸ್ ರವರು ರಾಧೇಶ್ಯಾಮ್ ಚಿತ್ರದ ಮೂಲಕ ಈ ವರ್ಷ ಮಿಂಚಿದ್ದರು. ಚಿತ್ರವನ್ನು ದೊಡ್ಡಮಟ್ಟದಲ್ಲಿ ಸೂಪರ್ ಹಿಟ್ ಆಗದಿದ್ದರೂ ಕೂಡ ಪ್ರಭಾಕರ್ ಅವರ ಜನಪ್ರಿಯತೆಯನ್ನುವುದು ಹೆಚ್ಚಾಗಿದೆ.

ಎರಡನೇ ಸ್ಥಾನದಲ್ಲಿ ಜೂನಿಯರ್ ಎನ್ಟಿಆರ್ ರವರು ಕಾಣಸಿಗುತ್ತಾರೆ. ಈಗಾಗಲೇ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ದೊಡ್ಡಮಟ್ಟದ ಜನಪ್ರಿಯತೆಯನ್ನು ಪರಭಾಷೆಗಳಲ್ಲಿ ಕೂಡ ಪಡೆದುಕೊಂಡಿರುವ ಜೂನಿಯರ್ ಎನ್ಟಿಆರ್ ಅವರು ಕೊರಟಾಲ ಶಿವ ಹಾಗೂ ಪ್ರಶಾಂತ್ ನೀಲ್ ಅವರ ಜೊತೆಗಿನ ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡುವ ಮೂಲಕ ಇನ್ನಷ್ಟು ಟ್ರೆಂಡಿಂಗ್ ಟಾಪಿಕ್ ಆಗಿದ್ದಾರೆ.

ಮೊದಲನೇ ತಾಣದಲ್ಲಿ ತಮಿಳು ಚಿತ್ರರಂಗದ ಟಾಪ್ ಸ್ಟಾರ್ ಆಗಿರುವ ತಲಪತಿ ವಿಜಯ್ ರವರು ಕಾಣಸಿಗುತ್ತಾರೆ. ವಿಜಯ್ ನಟನೆಯ ಬೀಸ್ಟ್ ಸಿನಿಮಾ ಕೆಜಿಎಫ್ ಚಾಪ್ಟರ್ 2 ಚಿತ್ರದ ಕ್ಲಾಷ್ ನಡುವೆಯೂ ಕೂಡ ಉತ್ತಮ ಮಟ್ಟಿಗೆ ಪ್ರದರ್ಶನವನ್ನು ನೀಡುವ ಮೂಲಕ ವಿಜಯ್ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದ ಹೀಗಾಗಿ ಅವರು ನಂಬರ್1 ಸ್ಥಾನದಲ್ಲಿದ್ದಾರೆ. ಇವರಲ್ಲಿ ನಿಮ್ಮ ನೆಚ್ಚಿನ ನಟ ಯಾರು ಎಂಬುದರ ಕಾಮೆಂಟ್ ಮೂಲಕ ತಿಳಿಸುವುದನ್ನು ಮಾತ್ರ ಮರೆಯಬೇಡಿ.

Get real time updates directly on you device, subscribe now.