ಪ್ರೀತಿಸಿ ಮದುವೆಯಾದಳು ಎಂಬ ಒಂದೇ ಒಂದು ಕಾರಣಕ್ಕೆ ಹೆತ್ತ ಪೋಷಕರ ಮಗಳನ್ನು ಏನು ಮಾಡಿದ್ದಾರೆ ಗೊತ್ತೆ??
ನಮಸ್ಕಾರ ಸ್ನೇಹಿತರೆ ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎನ್ನುವುದಾಗಿ ಕೇವಲ ಸಿನಿಮಾಗಳಲ್ಲಷ್ಟೇ ಮಾತ್ರ ನೋಡಲು ಹಾಗೂ ಕೇಳಲು ಚಂದ. ನಿಜಜೀವನದಲ್ಲಿ ಹೆತ್ತ ಪೋಷಕರೇ ತಮ್ಮ ಮರ್ಯಾದೆಗಾಗಿ ಏನು ಮಾಡಲು ಕೂಡ ಸಿದ್ಧರಾಗಿರುತ್ತಾರೆ ಎಂಬುದು ನಾವು ಒಪ್ಪಿಕೊಳ್ಳಲೇಬೇಕು.
ಹೌದು ಗೆಳೆಯರೇ ವಾಸ್ತವ ಎನ್ನುವುದು ಸಿನಿಮಾದ ಜಗತ್ತಿಗಿಂತ ತುಂಬಾನೇ ವಿಭಿನ್ನ ಹಾಗೂ ಕಷ್ಟಕರವಾಗಿದೆ ಎನ್ನುವುದನ್ನು ಕೂಡ ಒಪ್ಪಿಕೊಳ್ಳಲೇಬೇಕು. ಅದರಲ್ಲೂ ಬೆಂಗಳೂರಿನಲ್ಲಿ ಇತ್ತೀಚಿಗಷ್ಟೇ ಪ್ರೀತಿಸಿ ಮದುವೆಯಾದ ಜೋಡಿಗಳ ಜೀವನದಲ್ಲಿ ನಡೆದಿರುವ ಘಟನೆಯನ್ನು ಕೇಳಿದರೆ ಕಡಿತವಾಗಿದೆ ನಿಜ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೇ ಮೇ 25ರಂದು ಜಲಜ ಎನ್ನುವ ಹುಡುಗಿ ಗಂಗಾಧರನನ್ನು ಪ್ರೀತಿಸಿ ಮದುವೆಯಾಗಿ ರಿಜಿಸ್ಟರ್ ಆಫೀಸ್ ನಲ್ಲಿ ಕೂಡ ರಿಜಿಸ್ಟರ್ ಮಾಡಿಕೊಂಡಿದ್ದರು. ಜಲಜ ಹಾಗೂ ಗಂಗಾಧರ ಇಬ್ಬರೂ ಕೂಡ ನೆಲಮಂಗಲ ತಾಲೂಕಿನ ನಿವಾಸಿಗಳು. ಇವರಿಬ್ಬರು ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದರು ಹಾಗೂ ಮದುವೆಗಾಗಿ ಪೋಷಕರನ್ನು ಕೂಡ ಒಪ್ಪಿಸಲು ಹೋಗಿದ್ದರು ಆದರೆ ಹುಡುಗಿಯ ಮನೆಯಲ್ಲಿ ಪೋಷಕರು ಇದಕ್ಕೆ ವಿರೋಧವನ್ನು ವ್ಯಕ್ತ ಪಡಿಸಿದ್ದರು ಹೀಗಾಗಿ ಮನೆಯವರ ವಿರೋಧದ ನಡುವೆಯೂ ಕೂಡ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು.

ಮದುವೆ ಆದ ನಂತರ ಗಂಗಾಧರ್ ಜಲಜಾ ಜೊತೆಗೆ ತಮ್ಮ ಅಕ್ಕನ ಮನೆಯಲ್ಲಿ ಅಂದರೆ ಬ್ಯಾಡರಹಳ್ಳಿ ಯ ವಿದ್ಯಾಮಾನ್ಯ ದಲ್ಲಿ ವಾಸವಾಗಿದ್ದರು. ಇದೇ ಸಂದರ್ಭದಲ್ಲಿ ಪೊಲೀಸರ ಹೆಸರನ್ನು ಹೇಳಿಕೊಂಡು 20 ಜನರ ಗ್ಯಾಂಗ್ ಅವರ ಮನೆಗೆ ನುಗ್ಗಿ ಎಲ್ಲರ ಮೇಲೆ ಕೂಡ ಹ’ಲ್ಲೆ ಮಾಡಿ ಜಲಜಾ ಳನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಇದು ಖಂಡಿತವಾಗಿ ಹುಡುಗಿ ಮನೆಯವರೆ ಮಾಡಿದ್ದಾರೆ ಎಂಬುದಾಗಿ ಎಲ್ಲರ ಅಭಿಪ್ರಾಯವಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಡ ಈ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯಬೇಕಾಗಿದೆ.