ಐಪಿಎಲ್ ನಲ್ಲಿ ಯಾರು ಯಾವೆಲ್ಲ ವಿಭಾಗದಲ್ಲಿ ಗೆದ್ದಿದ್ದಾರೆ ಗೊತ್ತೇ? ಎಮರ್ಜಿಂಗ್ ಪ್ಲೇಯರ್, ಸೂಪರ್ ಸ್ಟ್ರೈಕರ್ ಯಾರು ಗೊತ್ತೇ?? ಆರ್ಸಿಬಿ ಪ್ಲೇಯರ್ಸ್ ಗೆ ಎಷ್ಟು ಪ್ರಶಸ್ತಿ ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಭಾನುವಾರ ನಡೆದ ಈ ಬಾರಿಯ ಐಪಿಎಲ್ ನ ಫೈನಲ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಸುಲಭವಾಗಿ ಶರಣಾಯಿತು ಎಂದು ಹೇಳಬಹುದಾಗಿದೆ. ಆದರೂ ಕೂಡ ಈ ಪಂದ್ಯವನ್ನು ನೋಡಲು ನರೇಂದ್ರಮೋದಿ ಸ್ಟೇಡಿಯಂನಲ್ಲಿ ಲಕ್ಷಕ್ಕೂ ಅಧಿಕ ಜನ ವೀಕ್ಷಕರಾಗಿ ಈ ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಇನ್ನು ಈ ಫೈನಲ್ ಪಂದ್ಯದಲ್ಲಿ ಗೆದ್ದಿರುವ ಹಾಗೂ ಸೋಲುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ಎರಡು ತಂಡಗಳು ಕೂಡ ನಗದು ಬಹುಮಾನವನ್ನು ದೊಡ್ಡಮಟ್ಟದಲ್ಲಿ ಪಡೆದುಕೊಂಡಿವೆ.

ಹೌದು ಗೆಳೆಯರೇ ಗೆದ್ದಿರುವ ಗುಜರಾತ್ ಟೈಟಾನ್ಸ್ ತಂಡ ಬರೋಬ್ಬರಿ 20 ಕೋಟಿ ರೂಪಾಯಿ ಪ್ರಥಮ ನಗದು ಬಹುಮಾನವನ್ನು ಪಡೆದುಕೊಂಡಿದೆ. ಇನ್ನು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರು ವ ರಾಜಸ್ಥಾನ ರಾಯಲ್ಸ್ ತಂಡ ಎರಡನೇ ಸ್ಥಾನದ ನಗದು ಬಹುಮಾನ ಆಗಿರುವ 12.5 ಕೋಟಿ ರೂಪಾಯಿ ನಗದು ಬಹುಮಾನ ತೃಪ್ತಿಪಟ್ಟುಕೊಂಡಿದೆ. ಕೇವಲ ಪ್ರಥಮ ಹಾಗೂ ದ್ವಿತೀಯ ಬಹುಮಾನಗಳು ಮಾತ್ರವಲ್ಲದೆ ಹಲವಾರು ವಿಭಾಗಗಳಲ್ಲಿ ಹಲವಾರು ತಂಡಗಳಿಗೆ ಹಾಗೂ ಆಟಗಾರರಿಗೆ ನಗದು ಬಹುಮಾನ ಗಳು ಕೂಡ ದೊರಕಿದ ಅದರ ಕುರಿತಂತೆ ಸಂಪೂರ್ಣ ವಿವರವಾಗಿ ಯಾರ್ಯಾರಿಗೆ ಯಾವ ಹಾಗೂ ಎಷ್ಟು ಬಹುಮಾನಗಳು ದೊರಕಿವೆ ಎಂಬುದಾಗಿ ತಿಳಿಯೋಣ ಬನ್ನಿ.

ಈ ಬಾರಿ ಐಪಿಎಲ್ ನ ಉದ್ದಕ್ಕೂ ಕೂಡ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ನೀಡುವ ಮೂಲಕ 17 ಪಂದ್ಯಗಳಿಂದ 863 ರನ್ನುಗಳನ್ನು ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿರುವ ಜಾಸ್ ಬಟ್ಲರ್ ರವರು 10 ಲಕ್ಷ ರೂಪಾಯಿ ಬಹುಮಾನವನ್ನು ಗೆದ್ದಿದ್ದಾರೆ. ಇನ್ನು ಇದೆ ರಾಜಸ್ಥಾನ ರಾಯಲ್ಸ್ ತಂಡದ ಯಜುವೇಂದ್ರ ಚಹಾಲ್ ರವರು 17 ಪಂದ್ಯಗಳಿಂದ 27 ವಿಕೆಟ್ ಗಳನ್ನು ಕಿತ್ತಿರುವುದಕ್ಕಾಗಿ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿ 10 ಲಕ್ಷ ರೂಪಾಯಿ ಬಹುಮಾನವನ್ನು ಗೆದ್ದಿದ್ದಾರೆ.

ಟೂರ್ನಿ ಆರಂಭದಿಂದಲೂ ಕೂಡ ತಮ್ಮ ವೇಗದ ಬೌಲಿಂಗ್ ಗೆ ಹೆಸರುವಾಸಿಯಾಗಿರುವ ಜಮ್ಮು ಮೂಲದ ವೇಗಿ ಉಮ್ರಾನ್ ಮಲ್ಲಿಕ್ ರವರು ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿಗೆ ಭಾಜನರಾಗಿದ್ದು 14 ಪಂದ್ಯಗಳಿಂದ 22 ವಿಕೆಟ್ಗಳನ್ನು ಕಿತ್ತಿರುವ ಇವರು 10 ಲಕ್ಷ ರೂಪಾಯಿ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಈ ಬಾರಿಯ ಸೂಪರ್ ಸ್ಟ್ರೈಕರ್ ಪ್ರಶಸ್ತಿಗೆ ಭಾಜನರಾಗಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ್ಫೆಕ್ಟ್ ಫಿನಿಶರ್ ದಿನೇಶ್ ಕಾರ್ತಿಕ್ ರವರು. ಇದಕ್ಕಾಗಿ ಇವರಿಗೆ ಟಾಟಾ ಪಂಚ್ ಕಾರು ಬಹುಮಾನವಾಗಿ ದೊರೆತಿದೆ. ಕೇವಲ ಇಷ್ಟು ಮಾತ್ರವಲ್ಲದೆ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡದ ಎವಿನ್ ಲೇವಿಸ್ ರವರು ಹಿಡಿದಿರುವ ಕ್ಯಾಚ್ ಅನ್ನು ಕ್ಯಾಚ್ ಆಫ್ ದಿ ಸೀಸನ್ ಪ್ರಶಸ್ತಿಗೆ ಗುರುತಿಸಲಾಗಿದ್ದು ಇದಕ್ಕಾಗಿ ಅವರು ಹತ್ತು ಲಕ್ಷ ರೂಪಾಯಿ ನಗದು ಬಹುಮಾನವನ್ನು ಗೆದ್ದಿದ್ದಾರೆ.

ಉತ್ತಮ ಸ್ಪರ್ಧಾತ್ಮಕ ಮನೋಭಾವದಿಂದ ಇಡೀ ಐಪಿಎಲ್ ಅನ್ನು ಆಡಿರುವ ಗುಜರಾತ್ ದೇಟೇಲ್ಸ್ ಹಾಗೂ ರಾಜಸ್ಥಾನ ತಂಡಗಳು ಈ ಬಾರಿಯ ಫೇರ್ ಪ್ಲೇ ಪ್ರಶಸ್ತಿಯನ್ನು ದ್ವಿಮುಖವಾಗಿ ಹಂಚಿಕೊಂಡಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಇನ್ನೂ ಕೆಲವು ವೈಯಕ್ತಿಕ ವಿಭಾಗಗಳಲ್ಲಿಯೂ ಕೂಡ ಕೆಲ ಆಟಗಾರರು ಅತ್ಯಂತ ದೊಡ್ಡ ಮಟ್ಟದಲ್ಲಿ ನಗದು ಬಹುಮಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು ಹಾಗಿದ್ದರೆ ಅವುಗಳು ಯಾವುವು ಹಾಗೂ ಅದನ್ನು ಗೆದ್ದಿರುವ ಆಟಗಾರರು ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಅತ್ಯಂತ ಹೆಚ್ಚು ಸಿಕ್ಸರ್ ಬಾರಿಸಿರುವುದು ಕ್ಕಾಗಿ ಪ್ರಶಸ್ತಿ ಡ್ರೀಮ್ ಇಲವೆನ್ ಗೇಮ್ ಚೇಂಜರ್ ಪ್ರಶಸ್ತಿ ಪವರ್ ಪ್ಲೇ ನಲ್ಲಿ ಅತ್ಯಂತ ಹೆಚ್ಚು ರನ್ ಬಾರಿಸಿರುವ ಪ್ರಶಸ್ತಿ ಅತ್ಯಂತ ಹೆಚ್ಚು ಬೌಂಡರಿ ಬಾರಿಸುವುದಕ್ಕಾಗಿ ಹಾಗೂ ಈ ಸೀಸನ್ ನ ಅತ್ಯಂತ ವ್ಯಾಲ್ಯೂಯೇಬಲ್ ಪ್ರಶಸ್ತಿ ಸೇರಿದಂತೆ ಒಟ್ಟು ಜಾಸ್ ಬಟ್ಲರ್ ರವರು 50 ಲಕ್ಷ ರೂಪಾಯಿ ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ. ಅತ್ಯಂತ ವೇಗದ 153.7 ಕಿಲೋಮೀಟರ್ ಪ್ರತಿ ಗಂಟೆಗೆ ವೇಗದಲ್ಲಿ ಬೌಲಿಂಗ್ ಎಸೆದಿರುವ ದಕ್ಕಾಗಿ ಲಾಕಿ ಫರ್ಗ್ಯೂಸನ್ ರವರಿಗೆ ಫಾಸ್ಟೆಸ್ಟ್ ಡೆಲಿವರಿ ಆಫ್ ದಿ ಸೀಸನ್ ಪ್ರಶಸ್ತಿಯ ವಿಭಾಗದಲ್ಲಿ 10 ಲಕ್ಷ ರೂಪಾಯಿ ದೊರಕಿದೆ.

ಒಟ್ಟಾರೆಯಾಗಿ ಇಷ್ಟು ವಿಭಾಗದಲ್ಲಿ ಬೇರೆಬೇರೆ ಆಟಗಾರರು ದೊಡ್ಡ ಮಟ್ಟದಲ್ಲಿ ನಗದು ಬಹುಮಾನವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಐಪಿಎಲ್ ಎನ್ನುವುದು ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎನ್ನುವುದರಲ್ಲಿ ಇದನ್ನು ನೋಡಿದ ಮೇಲೆ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳುವುದನ್ನು ಮರೆಯಬೇಡಿ.

Get real time updates directly on you device, subscribe now.