OTT ಯಲ್ಲಿ ಬಿಡುಗಡೆಯಾದ ಮೊದಲನೇ ನಿಮಿಷದಲ್ಲಿಯೇ RRR ಪಡೆದುಕೊಂಡ ವ್ಯೂಸ್ ಎಷ್ಟು ಗೊತ್ತೇ?? ಯಪ್ಪಾ ಈ ದಾಖಲೆ ಮುರಿಯಲು ಸಾಧ್ಯವಿಲ್ಲ

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ದಕ್ಷಿಣ ಭಾರತ ಚಿತ್ರಗಳ ಪ್ರಾಬಲ್ಯ ಗಣನೀಯವಾಗಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಮೊದಲಿಗೆ ಬಾಹುಬಲಿ ಸರಣಿ ಚಿತ್ರಗಳು ನಂತರ ಕೆಜಿಎಫ್ ಸರಣಿ ಚಿತ್ರದ ನಂತರ ಈಗ ರಾಜಮೌಳಿಯವರ ಆರ್ ಆರ್ ಆರ್ ಚಿತ್ರವು ಕೂಡ ಸಾಕಷ್ಟು ದೊಡ್ಡಮಟ್ಟದ ದಾಖಲೆಯನ್ನು ಭಾರತೀಯ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ದಾಖಲಿಸಿದೆ.

ಮಾರ್ಚ್ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ರಾಜಮೌಳಿ ನಿರ್ದೇಶನದ ಹಾಗೂ ಜೂನಿಯರ್ ಎನ್ಟಿಆರ್ ಮತ್ತು ರಾಮಚರಣ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಆರ್ ಆರ್ ಆರ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಸಾವಿರ ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡುವ ಮೂಲಕ ಲಾಕ್ಡೌನ್ ನಂತರ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಮೊದಲ ಚಿತ್ರವಾಗಿ ಕಾಣಿಸಿಕೊಂಡಿತ್ತು. ರಾಜಮೌಳಿ ನಿರ್ದೇಶನದ ಈ ದೃಶ್ಯವೈಭವವನ್ನು ಪಂಚ ಭಾಷೆಗಳಲ್ಲಿಯೂ ಕೂಡ ಪ್ರೇಕ್ಷಕರು ಮನಮೆಚ್ಚಿ ವೀಕ್ಷಿಸಿದರು. ನಿಮಗೆಲ್ಲ ಗೊತ್ತಿರುವ ಹಾಗೆ ಇತ್ತೀಚಿಗಷ್ಟೇ ಅಂದರೆ ಮೇ 20ರಂದು ಜೂನಿಯರ್ ಎನ್ಟಿಆರ್ ರವರ ಜನ್ಮ ದಿನದ ವಿಶೇಷವಾಗಿ ಡಿಜಿಟಲ್ ಪ್ಲಾಟ್ಫಾರ್ಮ್ ಆಗಿರುವ ಜೀ5 ರಲ್ಲಿ ಬಿಡುಗಡೆಗೊಂಡಿತ್ತು.

ಬಿಡುಗಡೆ ಆಗಿರುವ ಮೊದಲ ನಿಮಿಷದಲ್ಲಿಯೇ ಆರ್ ಆರ್ ಆರ್ ಚಿತ್ರ ದೊಡ್ಡ ಮಟ್ಟದ ದಾಖಲೆಯನ್ನು ನಿರ್ಮಿಸಿದೆ ಎಂದು ಹೇಳಬಹುದಾಗಿದೆ. ಮೊದಲನೇ ನಿಮಿಷದಲ್ಲಿಯೇ ದೊಡ್ಡ ದಾಖಲೆಯನ್ನು ನಿರ್ಮಿಸಿದೆ ಎಂದು ನಿಜಕ್ಕೂ ಕೂಡ ಪ್ರತಿಯೊಬ್ಬರು ಗೊಂದಲಕ್ಕೆ ಬಿದ್ದೆ ಬಿದ್ದಿರುತ್ತಾರೆ. ಹಾಗಿದ್ದರೆ ಆ ಗೊಂದಲವನ್ನು ಪರಿಹರಿಸಿಕೊಳ್ಳುವ ಬನ್ನಿ. ಹೌದು ಗೆಳೆಯರೇ ಜೀ5 ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾದ ಮೊದಲನೆ ನಿಮಿಷದಲ್ಲಿಯೇ 1000 ಮಿಲಿಯನ್ಸ್ ಸ್ಟ್ರೀಮಿಂಗ್ ಅನ್ನು ಪಡೆದುಕೊಂಡಿದೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಕೂಡ ಈ ದಾಖಲೆಯನ್ನು ದಾಖಲಿಸಿರುವ ಆರ್ ಆರ್ ಆರ್ ಚಿತ್ರ ದಕ್ಷಿಣ ಭಾರತದ ಕನ್ನಡ ತಮಿಳು ತೆಲುಗು ಮಲಯಾಳಂ ಭಾಷೆಗಳಲ್ಲಿ ಟ್ರೆಂಡಿಂಗ್ ನಲ್ಲಿ ಕೂಡ ಇದೆ. ಬಾಕ್ಸಾಫೀಸ್ ನಲ್ಲಿ ಗಳಿಸಿರುವ ದಾಖಲೆಯ ನಂತರ ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿಯೂ ಕೂಡ ರಾಜಮೌಳಿ ನಿರ್ದೇಶನದ ಈ ಮಹೋನ್ನತ ಚಿತ್ರ ದಾಖಲೆಗಳ ಮೇಲೆ ದಾಖಲೆಯನ್ನು ನಿರ್ಮಿಸುತ್ತಿದೆ.

Get real time updates directly on you device, subscribe now.