ಕುಳಿತಲ್ಲಿಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಬಿಸಿನೆಸ್ ಆರಂಭ ಮಾಡಿ, ಉತ್ತಮ ಆದಾಯ ಗಳಿಸುವುದು ಹೇಗೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಉದ್ಯೋಗದ ಜೊತೆಗೆ ಬೇರೆ ಆದಾಯವೂ ಕೂಡ ನಿಮಗೆ ಸಿಗಲಿ ಎನ್ನುವುದಾಗಿ ನೀವು ನಿರೀಕ್ಷಿಸುತ್ತಲೇ ಇರುತ್ತೀರಿ. ಅಂತವರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಒಂದು ಉತ್ತಮ ಅವಕಾಶವನ್ನು ನೀಡಲು ಹೊರಟಿದೆ ಹಾಗಿದ್ದರೆ ಅದೇನು ಎಂಬುದನ್ನು ತಿಳಿಯೋಣ ಬನ್ನಿ. ಇದು ಅತ್ಯಂತ ಸುರಕ್ಷಿತವೂ ಕೂಡ ಆಗಿರುವುದು ಮತ್ತೊಂದು ವಿಶೇಷವಾಗಿದೆ. ನಿಮಗೆ ಒಂದು ವಿಷಯ ಗೊತ್ತಾ ಗೆಳೆಯರೇ ಬ್ಯಾಂಕುಗಳು ಯಾವತ್ತೂ ಕೂಡ ಎಟಿಎಂ ಅನ್ನು ಸ್ಥಾಪಿಸುವುದು ಇಲ್ಲ ಅದಕ್ಕಾಗಿ ಪ್ರತ್ಯೇಕವಾಗಿ ಸಂಸ್ಥೆಗಳು ಇರುತ್ತದೆ. ಎಟಿಎಂ ಸ್ಥಾಪಿಸಲು ಬ್ಯಾಂಕುಗಳು ಕಾಂಟ್ರಾಕ್ಟ್ ನೀಡುತ್ತದೆ.
ಹಾಗಿದ್ದರೆ ಎಟಿಎಂ ಫ್ರಾಂಚೈಸಿ ಪಡೆಯುವುದು ಹೇಗೆ ಎನ್ನುವುದನ್ನು ತಿಳಿಯೋಣ ಬನ್ನಿ. ಮೊದಲನೇದಾಗಿ ನೀವು 50 ರಿಂದ 80 ಚದುರ ಅಡಿ ಜಾಗವನ್ನು ಹೊಂದಿರಬೇಕು. ಬೇರೆ ಎಟಿಎಂ ಗಳಿಂದ ಕನಿಷ್ಠಪಕ್ಷ 100 ಮೀಟರ್ ದೂರದಲ್ಲಿರಬೇಕು. 24 ಗಂಟೆಗಳ ಕಾಲ ಎಟಿಎಂನಲ್ಲಿ ವಿದ್ಯುತ್ ಇರಲೇಬೇಕು. ಒಂದು ಕಿಲೋ ವ್ಯಾಟ್ ಎಲೆಕ್ಟ್ರಿಕಲ್ ಕನೆಕ್ಷನ್ ಇರಲೇಬೇಕು. ದಿನಕ್ಕೆ ಕನಿಷ್ಠ ಪಕ್ಷ ಮುನ್ನೂರು ಟ್ರಾನ್ಸಾಕ್ಷನ್ ಗಳು ನಡೆಯುವ ಸಾಮರ್ಥ್ಯವನ್ನು ಹೊಂದಿರಬೇಕು. ಈ ಜಾಗಕ್ಕೆ ಕಾಂಕ್ರೀಟ್ ಚಾವಣಿ ಬೇಕೇ ಬೇಕು. ಪ್ರಮುಖವಾಗಿ ಪ್ರಾಧಿಕಾರದಿಂದ ನಿರೀಕ್ಷೆಪಣಾ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು.
ಇನ್ನು ಇದಕ್ಕೆ ಬೇಕಾಗಿರುವ ಅಗತ್ಯ ದಾಖಲೆಗಳು ಈ ಕೆಳಗಿನಂತಿವೆ, ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ವೋಟರ್ ಐಡಿ. ರೇಷನ್ ಕಾರ್ಡ್ ಹಾಗೂ ವಿದ್ಯುತ್ ಬಿಲ್. ಬ್ಯಾಂಕ್ ಅಕೌಂಟ್ ಹಾಗೂ ಪಾಸ್ ಬುಕ್. ಫೋಟೋ ಇಮೇಲ್ ಐಡಿ ಹಾಗೂ ಫೋನ್ ನಂಬರ್ ಹಾಗೂ ಜಿಎಸ್ಟಿ ಸಂಖ್ಯೆ ಮತ್ತು ಹಣಕಾಸಿನ ಕೆಲವೊಂದು ಪ್ರಮುಖ ದಾಖಲೆಗಳು. ಒಂದು ವೇಳೆ ನೀವು ಎಸ್ ಬಿ ಐ ಬ್ಯಾಂಕಿನ ಎಟಿಎಂ ಫ್ರಾಂಚೈಸಿಯನ್ನು ಪಡೆದುಕೊಳ್ಳಲು ನಿರ್ಧರಿಸಿದ್ದರೆ ಫ್ರಾಂಚೈಸ್ ಅನ್ನು ಒದಗಿಸುವ ಅಧಿಕೃತ ಸಂಸ್ಥೆಗಳಾಗಿರುವ ಟಾಟಾ ಇಂಡಿಕ್ಯಾಶ್ ಮುತ್ತೂಟ್ ಎಟಿಎಂ ಹಾಗೂ ಇಂಡಿಯಾ ವನ್ ಎಟಿಎಂಗಳ ಅಧಿಕೃತ ವೆಬ್ ಸೈಟ್ ಗೆ ಹೋಗಿ ಈಗ ಕೇಳಿರುವ ಮಾಹಿತಿಗಳನ್ನು ಅಲ್ಲಿ ಸಲ್ಲಿಸಿ ಅರ್ಜಿ ಹಾಕಬಹುದಾಗಿದೆ.
ಇನ್ನು ನೀವು ಫ್ರಾಂಚೈಸಿ ಹೊಂದಿರುವ ಎಸ್ಬಿಐ ಎಟಿಎಂನಲ್ಲಿ ದಿನಕ್ಕೆ ಉದಾಹರಣೆಗೆ 250 ಟ್ರಾನ್ಸಾಕ್ಷನ್ ನಡೆದರೆ ಅದರಲ್ಲಿ ಶೇಕಡಾ 65ರಷ್ಟು ನಗದು ಹಾಗೂ 35% ನಗದುರಹಿತ ಟ್ರಾನ್ಸಾಕ್ಷನ್ ನಡೆದಿದ್ದರೆ ತಿಂಗಳಿಗೆ 45 ಸಾವಿರ ರೂಪಾಯಿವರೆಗೆ ನೀವು ಗಳಿಕೆಯನ್ನು ಕಾಣಬಹುದಾಗಿದೆ. ಒಂದು ವೇಳೆ ಆ ಎಟಿಎಂನಲ್ಲಿ 500 ಟ್ರಾನ್ಸಾಕ್ಷನ್ ನಡೆದರೆ ಏನಿಲ್ಲವೆಂದರೂ 88 ರಿಂದ 90 ಸಾವಿರ ರೂಪಾಯಿವರೆಗೂ ಕಮಿಷನ್ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಹಣಗಳಿಸಲು ಇದೊಂದು ಉತ್ತಮ ಆಯ್ಕೆಯಾಗಿದೆ.