ಮುಂಬೈ ವಿರುದ್ದದ ಸೋಲಿಗೆ ನಿಜವಾದ ಕಾರಣಗಳೇನು ಎಂಬುದನ್ನು ಬಹಿರಂಗವಾಗಿ ಹೊರಹಾಕಿದ ರಿಷಬ್ ಪಂತ್. ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ನಿನ್ನೆಯ ಲೀಗ್ ಪಂದ್ಯದಲ್ಲಿ ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಇದ್ದಂತಹ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಕೊನೆಯ ಪಂದ್ಯದಲ್ಲಿ ಪಾಯಿಂಟ್ಸ್ ಟೇಬಲ್ ನಲ್ಲಿ ಕೊನೆಯ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸೋಲನ್ನು ಒಪ್ಪಿಕೊಂಡು ಪ್ಲೇಆಫ್ ಹಂತದಿಂದ ಹೊರಗೆ ಬಿದ್ದಿದೆ. ಈ ಮೂಲಕ ನಮ್ಮೆಲ್ಲರ ನೆಚ್ಚಿನ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಫ್ ಹಂತಕ್ಕೆ ನಾಲ್ಕನೇ ಸ್ಥಾನದಲ್ಲಿ ತೇರ್ಗಡೆಯಾಗಲು ಯಶಸ್ವಿಯಾಗಿದೆ.
ಪರೋಕ್ಷವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಮುಂಬೈ ಇಂಡಿಯನ್ಸ್ ತಂಡ ಸಹಕಾರಿಯಾಗಿದೆ ಎಂದರೆ ತಪ್ಪಾಗಲಾರದು. ಜಸ್ಪ್ರೀತ್ ಬುಮ್ರಾ ರವರ ಅದ್ಭುತ ಬೌಲಿಂಗ್ ಪ್ರದರ್ಶನ ಇಶಾನ್ ಕಿಶನ್ ರವರ ಆರಂಭಿಕ ಆಟ ಹಾಗೂ ಟಿಮ್ ಡೇವಿಡ್ ರವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮುಂಬೈ ಇಂಡಿಯನ್ಸ್ ತಂಡದ ಗೆಲುವಿಗೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸೋಲಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಕೆಲ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡಕ್ಕೆ ಗೆಲ್ಲುವ ಅವಕಾಶ ಇದ್ದರೂ ಕೂಡ ತಂಡ ತನ್ನ ಅವಕಾಶವನ್ನು ತನ್ನ ಕೈಯಾರೆ ಚೆಲ್ಲಿತ್ತು ಎಂದರೆ ತಪ್ಪಾಗಲಾರದು. ಪಂದ್ಯ ಮುಗಿದ ನಂತರ ತಮ್ಮ ಸೋಲಿಗೆ ನಿಜವಾದ ಕಾರಣ ಏನು ಎಂಬುದನ್ನು ತಂಡದ ನಾಯಕ ಆಗಿರುವ ರಿಷಬ್ ಪಂತ್ ಹೇಳಿಕೊಂಡಿದ್ದಾರೆ.
ಮುಂಬೈ ವಿರುದ್ಧ 5 ವಿಕೆಟ್ ಸೋಲಿನ ನಂತರ ರಿಷಬ್ ಪಂತ್ ರವರು ನಾವು ಉತ್ತಮವಾಗಿ ಆಡಿದ್ದೇವೆ ಆದರೆ ಕೆಲವೊಂದು ತಪ್ಪುಗಳಿಂದಾಗಿ ನಾವು ಸೋಲನ್ನು ಅನುಭವಿಸುವಂತಾಯಿತು. ಉತ್ತಮ ಯೋಜನೆಗಳನ್ನು ರೂಪಿಸಿ ಅದನ್ನು ಕಾರ್ಯತಂತ್ರಕ್ಕೆ ತರುವಲ್ಲಿ ನಾವು ವಿಫಲರಾಗಿದ್ದೇವೆ ಮುಂದಿನ ಸೀಸನ್ನಲ್ಲಿ ನಾವು ಬಲಿಷ್ಠವಾಗಿ ಕಂಬ್ಯಾಕ್ ಮಾಡುತ್ತೇವೆ ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಮುಂಬೈ ವಿರುದ್ಧ ರಿಷಬ್ ಪಂತ್ ರವರ ಡಿ ಆರ್ ಎಸ್ ತೆಗೆದುಕೊಳ್ಳಲು ಇರುವಂತಹ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದು ಹಾಗೂ ಡೆಲ್ಲಿ ತಂಡದ ಹಲವಾರು ಕಳಪೆ ಬಿಲ್ಡಿಂಗ್ ಪ್ರದರ್ಶನವು ಕೂಡ ತಂಡದ ಸೋಲಿಗೆ ಕಾರಣವಾಗಿದೆ. ನಿನಗೆ ಪಂದ್ಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.