ದರ್ಶನ ಇದೀಗ ದಿನಕ್ಕೆ ಎಷ್ಟು ಗಂಟೆ ವರ್ಕೌಟ್ ಮಾಡುತ್ತಾರೆ ಗೊತ್ತೆ?? ದಿನಚರಿ, ಡಯಟ್ ಹೇಗಿರುತ್ತೆ ಗೊತ್ತೇ?? ಡಿ ಬಾಸ್ ಚಾನೆಲ್ ನಲ್ಲಿ ತೋರಿಸಿದ್ದು ಏನು ಗೊತ್ತೇ?

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಇಂದಿನ ಜನರೇಶನ್ ನಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ತಮ್ಮ ಅಭಿಮಾನಿಗಳನ್ನು ಪ್ರೀತಿಯಿಂದ ಸೆಲೆಬ್ರಿಟಿಗಳು ಎನ್ನುವುದಾಗಿ ಕರೆಯುವುದರಲ್ಲಿ ಗೊತ್ತಾಗುತ್ತದೆ ದರ್ಶನ್ ರವರು ತಮ್ಮ ಅಭಿಮಾನಿಗಳನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವುದು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತೂಗುದೀಪ ಶ್ರೀನಿವಾಸ್ ರವರ ಮಗನಾಗಿದ್ದರೂ ಕೂಡ ಚಿತ್ರರಂಗದಲ್ಲಿ ತಮ್ಮ ತಂದೆಯ ಹೆಸರನ್ನು ಬಳಸಿಕೊಳ್ಳಲು ತಮ್ಮ ಸ್ವಂತ ಪ್ರತಿಭೆ ಪರಿಶ್ರಮ ಹಾಗೂ ತಾಳ್ಮೆ ಇಂದಾಗಿ ಇಂದು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ಆಗಿ ಗುರುತಿಸಿಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರೊಂದಿಗೆ ಸಿನಿಮಾ ಮಾಡಿದರೆ ಕಂಡಿತವಾಗಿ ಲಾಭವನ್ನು ಗಳಿಸುತ್ತೇವೆ ಎನ್ನುವ ನಂಬಿಕೆ ನಿರ್ಮಾಪಕರಲ್ಲಿ ಇದೆ.

ಇನ್ನು ತಮ್ಮ ಬಳಿಗೆ ಕಷ್ಟ ಎಂದು ಬಂದವರಿಗೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಹಿಂದೆ ಮುಂದೆ ನೋಡದೆ ಸಹಾಯವನ್ನು ಮಾಡಿಬಿಡುತ್ತಾರೆ. ಕೇವಲ ತೆರೆಯ ಮೇಲೆ ಮಾತ್ರ ಅಲ್ಲ ನಿಜ ಜೀವನದಲ್ಲಿ ಕೂಡ ಹೀರೋ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇನ್ನು ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕ್ರಾಂತಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸೆಲೆಬ್ರಿಟಿಗಳ ಜೀವನದಲ್ಲಿ ಫಿಟ್ ಆಗಿ ಇರುವುದು ಪ್ರಮುಖವಾಗಿರುತ್ತದೆ ಯಾಕೆಂದರೆ ಅವರು ಕುರಿತಂತೆ ಎಷ್ಟು ಜಾಗ್ರತೆ ವಹಿಸುತ್ತಾರೆಯೋ ಅಷ್ಟರಮಟ್ಟಿಗೆ ಚಿತ್ರರಂಗದಲ್ಲಿ ಅವರು ಚಾಲ್ತಿಯಲ್ಲಿ ಇರುತ್ತಾರೆ ಎಂದು ಹೇಳಬಹುದಾಗಿದೆ. ಇಂದಿನ ಲೇಖನಿಯಲ್ಲಿ ನಾವು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ದಿನಚರಿ ಹೇಗಿರುತ್ತದೆ ಅವರ ವ್ಯಾಯಾಮದ ಕುರಿತಂತೆ ಹಾಗೂ ಡಯಟ್ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಫಿಟ್ನೆಸ್ ಪ್ರಿಯ ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರವಾಗಿದೆ. ಡಿ ಬಾಸ್ ರವರು ಸಾಮಾನ್ಯವಾಗಿ ಮನೆಯಲ್ಲಿದ್ದಾಗ ಬೆಳಿಗ್ಗೆ 5:00 ಗಂಟೆಗೆ ಜಿಮ್ ಗೆ ವರ್ಕೌಟ್ ಮಾಡಲು ಹೋದರೆ ಬರೋಬ್ಬರಿ ಮೂರರಿಂದ ನಾಲ್ಕು ಗಂಟೆಗಳ ಕಾಲ ಬೆವರನ್ನು ಹರಿಸುತ್ತಾರೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಸಂಜೆ ಸಂದರ್ಭದಲ್ಲಿ ಕೂಡ ಜಿಮ್ ಗೆ ವರ್ಕೌಟ್ ಮಾಡಲು ಡಿ ಬಾಸ್ ಹೋಗುತ್ತಾರೆ ಎಂಬುದಾಗಿ ತಿಳಿದುಬಂದಿದೆ.

ಇನ್ನು ಚಿತ್ರೀಕರಣ ಸಂದರ್ಭದಲ್ಲಿ ಬೇರೆ ಪ್ರದೇಶಕ್ಕೆ ಹೋದಾಗ ಕೂಡ ಆಗಾಗ ಡಿ ಬಾಸ್ ರವರು ಕೊಂಚಮಟ್ಟಿಗೆ ವರ್ಕೌಟ್ ಮಾಡುತ್ತಾರೆ. ಇನ್ನು ವರ್ಕೌಟ್ ಮಾಡುತ್ತಾರೆ ಎಂದರೆ ಅವರ ಡಯೆಟ್ ಕೂಡ ತುಂಬಾ ಮುಖ್ಯವಾಗಿರುತ್ತದೆ. ಡಯಟ್ ವಿಚಾರಕ್ಕೆ ಬಂದರೆ ಅವರ ತರಬೇತುದಾರ ಹೇಳುವಂತೆ ಪ್ರತಿ ಊಟದಲ್ಲಿ ಕೂಡ ಚಿಕನ್ ಇರಲೇ ಬೇಕಂತೆ. ಬೆಳಿಗ್ಗೆ ಬೇಗ ಐದು ಮೊಟ್ಟೆಯನ್ನು ದಚ್ಚು ಡೈಲಿ ತಿನ್ನುತ್ತಾರೆ.

ಊಟದಲ್ಲಿ ಅನ್ನವನ್ನು ಇಷ್ಟಪಡುವ ದರ್ಶನ್ ರವರು ಫಿಟ್ನೆಸ್ ಗಾಗಿ ಅದನ್ನು ಕೂಡ ಬಿಟ್ಟಿದ್ದಾರಂತೆ. ಇನ್ನು ರಾತ್ರಿಯ ಸಂದರ್ಭದಲ್ಲಿ ದರ್ಶನ್ ರವರು ಯಾವುದೇ ಊಟವನ್ನು ಮಾಡುವುದಿಲ್ಲ ಕೇವಲ ಹಣ್ಣನ್ನು ಮಾತ್ರ ತಿನ್ನುತ್ತಾರೆ. ಇದಿಷ್ಟು ದರ್ಶನ್ ರವರ ದಿನಚರಿ ಹಾಗೂ ಫಿಟ್ನೆಸ್ ಕುರಿತಂತೆ ಇರುವಂತಹ ವಿಚಾರಗಳು. ದರ್ಶನ್ ರವರ ಕುರಿತಂತೆ ನಿಮಗೆ ಇಷ್ಟ ಆಗುವಂತಹ ವಿಚಾರಗಳು ಯಾವುದು ಎಂಬುದನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಹಾಗೂ ದರ್ಶನ್ ರವರು ಯಾವ ಸಿನಿಮಾಗಾಗಿ ನೀವು ಕಾಯುತ್ತಿದ್ದೀರ ಎಂಬುದನ್ನು ಕೂಡ ತಿಳಿಸಿ.

Get real time updates directly on you device, subscribe now.