ಕೊನೆಗೂ ಸಿಕ್ತು ಆರ್ಸಿಬಿ ಗೆ ಆನೆ ಬಲ. ಪ್ಲೇ ಆಫ್ ನಲ್ಲಿ ಲಕ್ನೋ ತಂಡದ ಪಂದ್ಯಕ್ಕೂ ಮುನ್ನ ಸ್ಟಾರ್ ಆಟಗಾರ ವಾಪಾಸ್. ಇನ್ನು ಕಪ್ ನಮ್ದೇನಾ?
ನಮಸ್ಕಾರ ಸ್ನೇಹಿತರೇ ಕೊನೆಗೂ ಕೂಡ ನಮ್ಮೆಲ್ಲರ ನೆಚ್ಚಿನ ಆರ್ಸಿಬಿ ತಂಡ ಪ್ಲೇಆಫ್ ಹಂತಕ್ಕೆ ತೇರ್ಗಡೆ ಆಗಿರುವುದು ಪ್ರತಿಯೊಬ್ಬ ಅಭಿಮಾನಿಗಳಿಗೂ ಕೂಡ ನೆಮ್ಮದಿಯ ನಿಟ್ಟಿಸಿರು ಬಿಡುವಂತೆ ಮಾಡಿದೆ. ಪ್ಲೇಆಫ್ ಹಂತಕ್ಕೆ ಆರ್ಸಿಬಿ ತೇರ್ಗಡೆಯಾಗಲು ಪರೋಕ್ಷವಾಗಿ ಮುಂಬೈ ಇಂಡಿಯನ್ಸ್ ತಂಡವೇ ಕಾರಣ ಎಂದರೂ ಕೂಡ ತಪ್ಪಾಗಲಾರದು. ಈ ಕಾರಣದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೇ 25ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಲಕ್ನೋ ತಂಡದ ವಿರುದ್ಧ ಎಲಿಮಿನೇಟರ್ ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ ಗೆದ್ದರೆ ನಂತರ ಮೊದಲ ಹಾಗೂ ಎರಡನೇ ತಂಡಗಳ ನಡುವೆ ಸೋತಂತಹ ತಂಡವನ್ನು ಕ್ವಾಲಿಫೈಯರ್ 2ರಲ್ಲಿ ಆರ್ಸಿಬಿ ತಂಡ ಎದುರಿಸಲಿದೆ.
ನಂತರ ಈ ಪಂದ್ಯದಲ್ಲಿ ಗೆದ್ದ ಮೇಲೆ ಫೈನಲ್ ಅನ್ನು ತಲುಪಲಿದೆ. ಒಂದು ವೇಳೆ ಈ ಬಾರಿ ಫೈನಲ್ ತಲುಪಿದರೆ ಆರ್ಸಿಬಿ ತಂಡ ಆರು ವರ್ಷಗಳ ನಂತರ ಫೈನಲಿಗೆ ತಲುಪಿ ದಂತಾಗುತ್ತದೆ. ಯಾಕೆಂದರೆ ಕೊನೆಯಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2016 ರಲ್ಲಿ ಫೈನಲ್ ಅನ್ನು ತಲುಪಿತ್ತು. ಇನ್ನು ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ ಟೈಟನ್ಸ್ ತಂಡವನ್ನು ಎದುರಿಸಿತ್ತು. ಆದರೆ ಈ ಸಂದರ್ಭದಲ್ಲಿ ಆರ್ಸಿಬಿ ತಂಡದ ಒಬ್ಬ ಆಟಗಾರ ಇಂಜೂರಿಗೆ ಒಳಗಾಗಿದ್ದರು.
ಹೌದು ಗೆಳೆಯರೇ ಹರ್ಷಲ್ ಪಟೇಲ್ ರವರು ಫೀಲ್ಡಿಂಗ್ ಮಾಡಬೇಕಾದರೆ ಅವರ ಬಲಗೈಗೆ ಇಂಜುರಿ ಆಗಿತ್ತು ರ’ಕ್ತ ಕೂಡ ಸುರಿದಿತ್ತು. ಹೀಗಾಗಿ ಆ ಪಂದ್ಯದಲ್ಲಿ ಅವರು ಕೇವಲ ಒಂದು ಓವರ್ ಮಾತ್ರ ಬೌಲಿಂಗ್ ಮಾಡಲು ಸಾಧ್ಯವಾಗಿತ್ತು ನಂತರ ಮೈದಾನದಿಂದ ಹೊರ ಹೋಗಿದ್ದರು. ಆದರೆ ಈಗ ಬಂದಿರುವ ಲೇಟೆಸ್ಟ್ ಸುದ್ದಿಯ ಪ್ರಕಾರ ಹರ್ಷಲ್ ಪಟೇಲ್ ರವರ ಕೈಗೆ ಮೂರರಿಂದ ನಾಲ್ಕು ಹೊಲಿಗೆಗಳು ಹಾಕಲಾಗಿದ್ದು ಈಗಾಗಲೇ ಅವರು ಇಂಜುರಿ ಯಿಂದ ಗುಣಮುಖರಾಗಿದ್ದು ಪ್ರಾಕ್ಟೀಸ್ ನಲ್ಲಿ ಕೂಡ ಭಾಗವಹಿಸುತ್ತಿದ್ದಾರೆ ಎಂಬುದಾಗಿ ಅಧಿಕೃತವಾಗಿ ಆರ್ಸಿಬಿ ವೆಬ್ಸೈಟ್ನಲ್ಲಿ ತಿಳಿದುಬಂದಿದೆ. ಹೀಗಾಗಿ ಎಲಿಮಿನೇಟರ್ ನಲ್ಲಿ ಆರ್ಸಿಬಿ ತಂಡ ಬೌಲಿಂಗ್ ವಿಭಾಗದಲ್ಲಿ ಯಾವುದೇ ಚಿಂತೆಯಿಲ್ಲದೆ ಆಡಬಹುದಾಗಿದೆ.