ಹುಡುಗ ಎಷ್ಟೇ ಒಳ್ಳೆಯವನು, ಶ್ರೀಮಂತರಾಗಿದ್ದರು ಕೂಡ ಈ ಊರಿನ ಗಂಡಸರಿಗೆ ಹೆಣ್ಣು ಕೊಟ್ಟು ಮದುವೆ ಮಾಡುವುದಿಲ್ಲ, ಯಾಕೆ ಗೊತ್ತೇ?? ಮದುವೆಯಾದರೂ ಗಂಡ ಮುಖ್ಯ ಅಲ್ಲ.
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಾವು ಸಾಕಷ್ಟು ವಿಚಾರಗಳ ಕುರಿತಂತೆ ಕೇಳಿ ತಿಳಿದಿದ್ದೇವೆ ಅದರಲ್ಲಿ ಕೆಲವು ವಿಚಿತ್ರ ಸುದ್ದಿಗಳು ಕೂಡ ಶಾಮೀಲಾಗಿವೆ. ಇಂದಿನ ದಿನಗಳಲ್ಲಿ ಹೀಗೂ ಕೂಡ ನಡೆಯುತ್ತಿದೆ ಎನ್ನುವ ಆಶ್ಚರ್ಯವನ್ನು ಕೂಡ ಆ ಸುದ್ದಿಗಳು ನೀಡಿವೆ. ಇನ್ನು ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಬುಂದೇಲ್ ಖಂಡದ ವಿಚಿತ್ರ ಸುದ್ದಿಯ ಕುರಿತಂತೆ. ಇಲ್ಲಿ ಸ್ವಾತಂತ್ರ್ಯ ಸಿಕ್ಕಿ ಇಪ್ಪತ್ತೈದು ವರ್ಷಗಳೇ ಆದರೂ ಕೂಡ ಕುಡಿಯುವ ನೀರಿಗೆ ಎಲ್ಲಿ ಪ್ರತಿಯೊಬ್ಬರು ಕೂಡ ಒದ್ದಾಡುತ್ತಾರೆ.
ಇಲ್ಲಿರುವ ಗ್ರಾಮದ ಈ ನೀರಿನ ಸಮಸ್ಯೆ ಎನ್ನುವುದು ಎಷ್ಟರ ಮಟ್ಟಿಗೆ ಪ್ರಾಬ್ಲಮ್ ಆಗಿದೆ ಎಂದರೆ ಬೇರೆ ಹಳ್ಳಿಯವರು ಇಲ್ಲಿನ ಹುಡುಗಿಯರಿಗೆ ಮದುವೆಯಾಗಲು ತಮ್ಮ ಊರಿನ ಹುಡುಗಿಯರನ್ನು ನೀಡುತ್ತಿಲ್ಲ. ಬುಂದೇಲ್ ಖಂಡದ ಮಾಣಿಕ್ ಪುರ ಪ್ರಾಂತದಲ್ಲಿರುವ ಹತ್ತಾರು ಹಳ್ಳಿಗಳಲ್ಲಿ ಮೊದಲಿನಿಂದಲೂ ಕೂಡ ನೀರಿನ ಸಮಸ್ಯೆ ಕೆಟ್ಟದಾಗಿ ಜನರನ್ನು ಕಾಡುತ್ತಿದೆ. ಇಲ್ಲಿಯವರೆಗೆ ಹಲವಾರು ಸರ್ಕಾರಗಳು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದರು ಕೂಡ ಬೇಸಿಗೆ ಬಂತೆಂದರೆ ಸಾಕು ಇಲ್ಲಿ ಇರುವಂತಹ ನದಿ ಕಟ್ಟೆಗಳಲ್ಲಿ ನೀರು ಸಂಪೂರ್ಣವಾಗಿ ಒಣಗಿ ಬಿಡುತ್ತದೆ.
ಇಲ್ಲಿನ ಜನರು ನೀರಿಗಾಗಿ ಹಾಹಾಕಾರ ಮಾಡುತ್ತಾರೆ. ಬೇಸಿಗೆಯ ಸಂದರ್ಭದಲ್ಲಿ ಜನರು ಕುಡಿಯುವ ನೀರಿಗಾಗಿ ಹಾಹಾಕಾರ ಮಾಡುತ್ತಾರೆ. ಅಷ್ಟೊಂದು ಕಷ್ಟದ ಪರಿಸ್ಥಿತಿಯನ್ನು ಈ ಊರಿನ ಜನರು ಬೇಸಿಗೆ ಸಂದರ್ಭದಲ್ಲಿ ಕಾಣಬೇಕಾಗುತ್ತದೆ. ಇದಕ್ಕಾಗಿ ಸರಕಾರಗಳು ಎಷ್ಟೇ ಖರ್ಚನ್ನು ಮಾಡಿದರು ಕೂಡ ಇದು ಅದೇ ಹಂತದಲ್ಲಿಯೇ ನಿಂತಿದೆ. ಏಪ್ರಿಲ್ ಮೇ ತಿಂಗಳು ಬರುತ್ತಿದ್ದಂತೆ ಇಲ್ಲಿನ ನೀರಿನ ಮೂಲಗಳ ಆಗಿರುವ ಎಲ್ಲ ಜಲ ಮೂಲಗಳು ಬತ್ತಿ ಹೋಗುತ್ತವೆ ಹಾಗೂ ಇಲ್ಲಿನ ಮಹಿಳೆಯರು ದೊಡ್ಡ ದೊಡ್ಡ ಪಾತ್ರೆಯನ್ನು ತಲೆಯಮೇಲೆ ಇಟ್ಟುಕೊಂಡು ಮೈಲುಗಟ್ಟಲೆ ದೂರ ಹೋಗಿ ಕುಡಿಯುವ ನೀರನ್ನು ತರುತ್ತಾರೆ.
ಇದಕ್ಕಾಗಿಯೇ ಇಲ್ಲಿನ ಮಹಿಳೆಯರಿಗೆ ಕಟ್ಟಿಕೊಂಡಿರುವ ಗಂಡನಿಗಿಂತ ಕುಡಿಯುವ ನೀರು ಹೆಚ್ಚಾಗಿರುತ್ತದೆ ಎಂಬುದಾಗಿ ಹೇಳಬಹುದಾಗಿದೆ. ಪ್ರತಿಯೊಂದು ಹನಿ ನೀರಿಗೂ ಕೂಡ ಇಲ್ಲಿ ಹಾಹಾಕಾರ ಇರುತ್ತದೆ. ನಿಜಕ್ಕೂ ಕೂಡ ಬೇಸಿಗೆ ಕಾಲದ ಸಂದರ್ಭದಲ್ಲಿ ಇಲ್ಲಿನ ಜನ ವ್ಯವಸ್ಥೆ ಹಾಗೂ ಇಲ್ಲಿನ ಜನಜೀವನ ಎನ್ನುವುದು ಅಸ್ತವ್ಯಸ್ತವಾಗಿರುತ್ತದೆ ಎಂದರೆ ನಂಬಲೇ ಬೇಕಾದಂತಹ ಸತ್ಯ. ನಮ್ಮ ಭಾರತದಲ್ಲಿ ಇಂದಿಗೂ ಕೂಡ ಇಂತಹ ಪ್ರದೇಶಗಳು ಇವೆ ಎಂದರೆ ನಾವು ನಂಬಲೇಬೇಕಾಗುತ್ತದೆ.
ಇಲ್ಲಿನ ನೀರಿನ ಅಭಾವದಿಂದಾಗಿ ಜನರು ಕಷ್ಟಪಡುವ ರೀತಿಯನ್ನು ಹತ್ತಿರದಿಂದ ನೋಡಿರುವ ಬೇರೆ ಹಳ್ಳಿಯವರು ಮಾಣಿಕ್ ಪುರ ಪ್ರಾಂತದ ಹುಡುಗರಿಗೆ ಮದುವೆಯಾಗಲು ತಮ್ಮ ಹುಡುಗಿಯರನ್ನು ಖಂಡಿತವಾಗಿ ನೀಡುವುದಿಲ್ಲ. ಅದಕ್ಕೆ ಬೇರೆ ಯಾವುದೂ ಕಾರಣವಲ್ಲ ಇದೇ ನೀರಿನ ಕಾರಣ ಎಂದು ಹೇಳಬಹುದಾಗಿದೆ. ಇಲ್ಲಿನ ಗ್ರಾಮಸ್ಥರು ತಡರಾತ್ರಿಯ ಎದ್ದು ನಸುಕಿನ ಮುಂಜಾನೆಗೂ ಮುನ್ನವೇ ಮೈಲುಗಟ್ಟಲೆ ದೂರ ಸಾಗಿ ಮಲೆನಾಡಿನ ಅಶುದ್ಧ ನೀರನ್ನು ಕುಡಿಯುವುದಕ್ಕಾಗಿ ಮನೆಗೆ ತರುತ್ತಾರೆ. ಇದು ನಿಜಕ್ಕೂ ಕೂಡ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಆದರೆ ಇದಕ್ಕಿಂತ ಉತ್ತಮವಾದ ಹಾದಿ ಇನ್ನೊಂದಿಲ್ಲ ಎಂದು ಹೇಳಬಹುದಾಗಿದೆ. ಇದರಿಂದಲೇ ಅವರ ಕುಟುಂಬದ ವ್ಯಕ್ತಿ ಅವರ ಕುಟುಂಬದ ದಾಹವನ್ನು ತೀರಿಸುತ್ತಾನೆ.
ಇಲ್ಲಿನ ಜನರು ಬೇಸಿಗೆ ಸಂದರ್ಭದಲ್ಲಿ ನೀರಿನ ವಿಷಯದಲ್ಲಿ ಪ್ರತಿಯೊಬ್ಬರೂ ಕೂಡ ಸಂಕಟವನ್ನು ಅನುಭವಿಸುತ್ತಾರೆ. ಇದೇ ಕಾರಣಕ್ಕಾಗಿ ಈ ಊರಿನ ಹುಡುಗರಿಗೆ ಕೊಟ್ಟು ತಮ್ಮ ಮಗಳನ್ನು ಮದುವೆ ಮಾಡಿ ಕೊಡುವುದಕ್ಕೆ ಯಾರೂ ಕೂಡ ಹೊರಗಿನ ಗ್ರಾಮದವರು ಒಪ್ಪಿಕೊಳ್ಳುವುದಿಲ್ಲ. ಇದಕ್ಕಾಗಿಯೇ ಊರಿನ ಹುಡುಗರು ದೊಡ್ಡ ಸಂಖ್ಯೆಯಲ್ಲಿ ಒಂಟಿಯಾಗಿ ಕಾಲಕಳೆಯುತ್ತಿದ್ದಾರೆ. ಈ ಕುರಿತಂತೆ ಗಮನಾರ್ಹ ಕೆಲಸವನ್ನು ಯಾವುದೇ ಅಧಿಕಾರಿಗಳು ಇದುವರೆಗೂ ಮಾಡಿಲ್ಲ. ಈ ಸಮಸ್ಯೆ ಕುರಿತಂತೆ ಸಮಗ್ರವಾಗಿ ತಿಳಿಯಲು ನೋಡಲ್ ಅಧಿಕಾರಿಯನ್ನು ನೇಮಿಸಿದೆ ಆದರೂ ಕೂಡ ಈಗಾಗಲೇ ಮೇ ತಿಂಗಳು ಕಳೆಯುತ್ತಾ ಬಂದಿದೆ ಹೀಗಾಗಿ ಈ ವರ್ಷವೂ ಕೂಡ ಸರಿಯಾದ ಪರಿಹಾರ ದೊರಕುವುದು ಅನುಮಾನವೇ ಸರಿಯಾಗಿದೆ.
ಆದರೆ ಸದ್ಯಕ್ಕೆ ಇದಕ್ಕಾಗಿಯೇ ವಾಟ್ಸಾಪ್ ಗ್ರೂಪ್ ಮಾಡಲಾಗಿದ್ದು ಯಾವುದೇ ಊರಲ್ಲಿ ಇಂತಹ ಸಮಸ್ಯೆಗಳು ಬಂದಾಗ ಈ ಗ್ರಾಮದ ಗ್ರಾಮಸ್ಥರಿಗೆ ಟ್ಯಾಂಕರ್ ಮೂಲಕ ನೀರನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದ್ದರೂ ಕೂಡ ಇದು ಸಂಪೂರ್ಣವಾಗಿ ನೀರಿನ ಬರವನ್ನು ಕಡಿಮೆ ಮಾಡುತ್ತಿಲ್ಲ. ಹರ್ ಘರ್ ನಲ್ ಹರ್ ಘರ್ ಜಲ್ ಕಾರ್ಯಕ್ರಮಕ್ಕೆ ಸರ್ಕಾರ ಪ್ರಾರಂಭವನ್ನು ನೀಡಿದ್ದರೂ ಕೂಡ ಇದು ಸಂಪೂರ್ಣವಾಗಿ ನೆಲಕಚ್ಚಿದೆ ಎಂದು ಹೇಳಬಹುದಾಗಿದೆ.
ಒಂದು ವೇಳೆ ಯೋಜನೆ ಸಫಲವಾದರೆ ಇಲ್ಲಿ ನೀರಿನ ಸಮಸ್ಯೆ ಖಂಡಿತವಾಗಿ ಸಂಪೂರ್ಣವಾಗಿ ಕಡಿಮೆಯಾಗಲಿದೆ ಎಂದು ಹೇಳಬಹುದು. ಅಲ್ಲಿವರೆಗೂ ಕಷ್ಟವಾದರೂ ಕೂಡ ನಗರದಿಂದ ಇಲ್ಲಿಗೆ ಟ್ಯಾಂಕರ್ ವ್ಯವಸ್ಥೆ ಮೂಲಕ ನೀರನ್ನು ಸರಬರಾಜು ಮಾಡಬೇಕಾಗಿದೆ. ಖಂಡಿತವಾಗಿ ಯಾರೊಬ್ಬರು ಕೂಡ ಇಂತಹ ಗ್ರಾಮದಲ್ಲಿ ಒಂದು ದಿನ ಇರುವುದಕ್ಕೂ ಕೂಡ ಇಷ್ಟಪಡುವುದಿಲ್ಲ. ಈ ಗ್ರಾಮದ ಗ್ರಾಮಸ್ಥರು ಪಡುವಂತಹ ಕಷ್ಟದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.