ನಾಗಿಣಿ 2 ಅನ್ನು ಪ್ರತಿ ದಿನ ನೋಡುತ್ತಿದ್ದ ರವರಿಗೆ ಷಾಕಿಂಗ್ ಸುದ್ದಿ, ಬಹಳ ಬೇಗ ನಿರ್ಧಾರ ತೆಗೆದುಕೊಂಡು ಧಾರವಾಹಿ ತಂಡ ಮಾಡುತ್ತಿರುವುದಾದರೂ ಏನು ಗೊತ್ತೆ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ಕೆಲವು ವರ್ಷಗಳ ಸಮಯದಲ್ಲಿ ಸಿನಿಮಾರಂಗದ ಧಾರವಾಹಿ ಕ್ಷೇತ್ರವು ಕೂಡ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಸಿನಿಮಾಗಳಂತೆ ದೊಡ್ಡ ದೊಡ್ಡ ಬಜೆಟ್ ನಲ್ಲಿ ಧಾರಾವಾಹಿಗಳನ್ನು ಕೂಡ ಕ್ವಾಲಿಟಿ ಆಧಾರದಲ್ಲಿ ನಿರ್ಮಿಸುತ್ತಿದ್ದಾರೆ. ಕಥೆಗಳು ಕೂಡ ಪ್ರೇಕ್ಷಕರು ಇಷ್ಟಪಡುವಂತೆ ಅದ್ಭುತವಾಗಿ ಪೋಣಿಸುತ್ತಿದ್ದಾರೆ. ಅದರಲ್ಲೂ ಇಂದು ನಾವು ಮಾತನಾಡಲು ಹೊರಟಿರುವುದು ನಾಗಿಣಿ2 ಧಾರವಾಹಿಯ ಕುರಿತಂತೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹಿಂದಿ ದಾರವಾಹಿ ಕ್ಷೇತ್ರದಲ್ಲಿ ನಾಗಿಣಿ ಧಾರಾವಾಹಿ ಗಳ ಸರಣಿಯೇ ಆರಂಭವಾಗಿತ್ತು.

ಈ ಸಂದರ್ಭದಲ್ಲಿ ಕನ್ನಡ ಕಿರುತೆರೆ ವಾಹಿನಿಯಲ್ಲಿ ಕೂಡ ನಾಗಿಣಿ ಧಾರಾವಾಹಿ ಪ್ರಾರಂಭವಾಗಿತ್ತು. ಮೊದಲನೇ ನಾಗಿಣಿ ಧಾರಾವಾಹಿ ಯಲ್ಲಿ ಕಾಣಿಸಿಕೊಂಡವರು ಬಿಗ್ ಬಾಸ್ ಖ್ಯಾತಿಯ ದೀಪಿಕ ದಾಸ್. ದೀಪಿಕಾ ದಾಸ್ ರವರು ನಾಗಿಣಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸುತ್ತಾರೆ. ಇದಾದ ನಂತರ ಎರಡನೇ ನಾಗಿಣಿ ಭಾಗವನ್ನು ರಾಮ್ ಜಿ ರವರು ಹಿಂದಿ ಧಾರವಾಹಿ ಗಳಂತೆ ಅದ್ದೂರಿಯಾಗಿ ನಿರ್ಮಿಸುತ್ತಾರೆ. ಕನ್ನಡ ಕಿರುತೆರೆಯಲ್ಲಿ ಇದು ಕೂಡ ಈಗಾಗಲೇ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಕಂಡಿದೆ.

ಈಗಾಗಲೇ ಈ ಧಾರವಾಹಿಯಲ್ಲಿ ನಮೃತಾ ಗೌಡರವರ ಜೊತೆಗೆ ಜೆಕೆ ಹಾಗೂ ಅತಿಥಿ ಪಾತ್ರದಲ್ಲಿ ದೀಪಿಕಾ ದಾಸ್ ರವರು ಕೂಡ ಕಾಣಿಸಿಕೊಂಡಿದ್ದರು. ಇಷ್ಟು ಮಾತ್ರವಲ್ಲದೆ ಹಿರಿಯ ಸಿನಿಮಾ ನಟ ಆಗಿರುವ ಮೋಹನ್ ರವರು ಕೂಡ ಕಾಣಿಸಿಕೊಂಡಿದ್ದರು. ಒಟ್ಟಾರೆಯಾಗಿ ಇಷ್ಟೊಂದು ಜನಪ್ರಿಯ ಧಾರವಾಹಿಯಾಗಿ ಪ್ರಸಾರ ಕಾಣುತ್ತಿದ್ದ ನಾಗಿಣಿ 2 ದಾರವಾಹಿ ಹಿಂದಿಯಲ್ಲಿ ಕೂಡ ರೀಮೇಕ್ ಆಗಿದೆ. ಆದರೆ ನಾಗಿಣಿ2 ಧಾರವಾಹಿ ಅಭಿಮಾನಿಗಳಿಗೆ ಈಗ ಕಹಿ ಸುದ್ದಿಯೊಂದು ಕೇಳಿಬರುತ್ತಿದೆ. ಹೌದು ಗೆಳೆಯರೇ ನಾಗಿಣಿ 2 ಧಾರವಾಹಿ ಅತಿಶೀಘ್ರದಲ್ಲೇ ತನ್ನ ಪ್ರಸಾರವನ್ನು ನಿಲ್ಲಿಸಲಿದೆ. ಇದರ ಹಿಂದಿನ ಕಾರಣ ಏನು ಎಂಬುದು ಇನ್ನು ಕೂಡ ತಿಳಿದುಬಂದಿಲ್ಲ ಆದರೂ ಕೂಡ ಅತಿ ಶೀಘ್ರದಲ್ಲಿ ನಾಗಿಣಿ ನಮ್ಮನ್ನೆಲ್ಲ ಬಿಟ್ಟು ಹೋಗಲಿದ್ದಾರೆ ಎನ್ನುವುದಂತೂ ಸತ್ಯ. ಖಂಡಿತವಾಗಿ ಇದು ದೈನಂದಿನ ವಾಗಿ ನಾಗಿಣಿ 2 ಧಾರವಾಹಿಯನ್ನು ನೋಡುತ್ತಿದ್ದ ಅಭಿಮಾನಿಗಳಿಗೆ ಖಂಡಿತವಾಗಿ ಬೇಸರದ ಸುದ್ದಿಯಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Get real time updates directly on you device, subscribe now.