ಸಲ್ಮಾನ್ ಖಾನ್ ಅವರ ಜೊತೆಗೆ ಕಿರಿಕ್ ಮಾಡಿಕೊಂಡು ನಟನೆ ಜೀವನ ಬಹುತೇಕ ಅಂತ್ಯ ಮಾಡಿಕೊಂಡ ಕಲಾವಿದರು ಯಾರ್ಯಾರು ಗೊತ್ತೇ?? ಯಾರೆಲ್ಲ ಇದ್ದಾರೆ ಗೊತ್ತೇ?

76

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಎನ್ನುವುದಾಗಿ ಸಲ್ಮಾನ್ ಖಾನ್ ರವರನ್ನು ಕರೆಯುತ್ತಾರೆ. ಕೇವಲ ಒಬ್ಬ ಬಾಲಿವುಡ್ ಚಿತ್ರರಂಗದ ಬರಹಗಾರನ ಮಗನಾಗಿ ಚಿತ್ರರಂಗಕ್ಕೆ ಕಾಲಿಟ್ಟು ಇಂದು ಎಲ್ಲರ ನೆಚ್ಚಿನ ಭಾಯಿಜಾನ್ ಆಗಿದ್ದಾರೆ. ಸಲ್ಮಾನ್ ಖಾನ್ ರವರು ತಮ್ಮ ಬಿಯಿಂಗ್ ಹ್ಯೂಮನ್ ಟ್ರಸ್ಟ್ ಮೂಲಕ ತಮ್ಮ ಆದಾಯದಲ್ಲಿ 65% ಅಧಿಕ ಹಣವನ್ನು ಒಳ್ಳೆಯ ಕೆಲಸಗಳಿಗಾಗಿ ಉಪಯೋಗಿಸುತ್ತಿದ್ದರು ಹಾಗೂ ಸಮಾಜ ಸೇವೆಗೆ ಅದನ್ನು ವಿನಿಯೋಗಿಸುತ್ತಿದ್ದರು. ಇನ್ನು ಸಲ್ಮಾನ್ ಖಾನ್ ರವರು ಎಷ್ಟು ಒಳ್ಳೆಯವರೋ ಅವರ ವಿಷಯಕ್ಕೆ ಬಂದರೆ ಅವರು ಅಷ್ಟೇ ಬ್ಯಾಡ್ ಬಾಯ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ ಇಂದಿನ ವಿಚಾರದಲ್ಲಿ ಸಲ್ಮಾನ್ ಖಾನ್ ಅವರ ಜೊತೆಗೆ ಜಗಳ ಮಾಡಿಕೊಂಡು ಕರಿಯರ್ ಖತಮ್ ಮಾಡಿಕೊಂಡ ಸೆಲೆಬ್ರೆಟಿಗಳ ಕುರಿತಂತೆ ತಿಳಿಯೋಣ ಬನ್ನಿ.

ವಿವೇಕ್ ಒಬೆರಾಯ್; ನಿಮಗೆಲ್ಲರಿಗೂ ತಿಳಿದಿರುವಂತೆ ಭುವನಸುಂದರಿ ಆಗಿರುವ ಐಶ್ವರ್ಯ ರೈ ರವರ ಮೊದಲ ಬಾಯ್ ಫ್ರೆಂಡಾಗಿ ಕಾಣಿಸಿಕೊಂಡವರು ಸಲ್ಮಾನ್ ಖಾನ್. 2000 ಇಸವಿಯ ಆಸುಪಾಸಿನಲ್ಲಿ ಇವರಿಬ್ಬರ ಬ್ರೇಕಪ್ ಆಗುತ್ತದೆ. ಈ ಸಂದರ್ಭದಲ್ಲಿ ಐಶ್ವರ್ಯ ರೈ ರವರು ವಿವೇಕ್ ಒಬೆರಾಯ್ ಅವರ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದಕ್ಕಾಗಿ ಸಲ್ಮಾನ್ ಖಾನ್ ರವರು ವಿವೇಕ ರವರಿಗೆ ಧಮ್ಕಿ ಕೂಡ ನೀಡಿದ್ದರಂತೆ. ಇದಾದ ನಂತರ ವಿವೇಕ್ ಒಬೆರಾಯ್ ಪ್ರೆಸ್ ಮೀಡಿಯಾವನ್ನು ಕರೆಸಿ ಸಲ್ಮಾನ್ ಖಾನ್ ರವರು ನನಗೆ ಹೀಗೆ ಒತ್ತಡವನ್ನು ಹಾಕುತ್ತಿದ್ದಾರೆ. ನಾನು ಅವರ ವಿರುದ್ಧ ಫೈ’ಟ್ ಮಾಡಲು ಸಿದ್ಧನಿದ್ದೇನೆ ಎಂಬುದಾಗಿ ಹೇಳಿಕೆ ನೀಡಿದ್ದರು. ಆದರೆ ಇದಾದ ನಂತರ ಮತ್ತೆ ವಿವೇಕ್ ಒಬೆರಾಯ್ ರವರು ಬಾಲಿವುಡ್ನಲ್ಲಿ ಪ್ರಮುಖ ಭಾಗವಾಗಿ ಕಾಣಿಸಿಕೊಳ್ಳಲಿಲ್ಲ. ಇದರಲ್ಲಿ ಸಲ್ಮಾನ್ ಬಾಯ್ ಕೈವಾಡ ಹೆಚ್ಚಿದೆ ಎಂಬುದಾಗಿ ಹೇಳಲಾಗುತ್ತಿದೆ.

ಅನುರಾಗ್ ಕಶ್ಯಪ್; ಹುಚ್ಚ ಚಿತ್ರದ ರಿಮೇಕ್ ಆಗಿರುವ ತೇರೆ ನಾಮ್ ಚಿತ್ರದಲ್ಲಿ ರಾಧೆ ಪಾತ್ರಕ್ಕಾಗಿ ಸಲ್ಮಾನ್ ಖಾನ್ ಅವರನ್ನು ಕಾಸ್ಟ್ ಮಾಡಲು ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಹಿಂದೇಟು ಹಾಕಿದ್ದರಂತೆ. ಇದೇ ಕಾರಣಕ್ಕಾಗಿ ಅನುರಾಗ್ ಕಶ್ಯಪ್ ಹಾಗೂ ಸಲ್ಮಾನ್ ಖಾನ್ ರವರ ನಡುವೆ ದೊಡ್ಡ ದುಷ್ಮನಿ ಬೆಳೆಯಿತು ಎಂಬುದಾಗಿ ಹೇಳಲಾಗುತ್ತದೆ.

ಅರಿಜಿತ್ ಸಿಂಗ್; ಸಲ್ಮಾನ್ ಖಾನ್ ರವರು ಹೋಸ್ಟ್ ಮಾಡುತ್ತಿದ್ದ ಅವಾರ್ಡ್ ಕಾರ್ಯಕ್ರಮದಲ್ಲಿ ಅರಿಜಿತ್ ಸಿಂಗ್ ರವರು ಬೆಸ್ಟ್ ಪ್ಲೇಬ್ಯಾಕ್ ಸಿಂಗರ್ ಅವಾರ್ಡ್ ಅನ್ನು ಗೆದ್ದಿದ್ದರು. ಆದರೆ ಆ ಸಂದರ್ಭದಲ್ಲಿ ಅವರು ಅವರ ಹೆಸರನ್ನು ಕರೆಯುವಾಗ ಮಲಗಿದ್ದರು. ಈ ಸಂದರ್ಭದಲ್ಲಿ ಸ್ಟೇಜ್ ಮೇಲೆ ಕೂಡ ಕೊಂಚ ಮಟ್ಟಿಗೆ ಪರೋಕ್ಷ ಮಾತಿನ ಚಕಮಕಿ ಕೂಡ ನಡೆಯಿತು. ಇದಾದನಂತರ ಗಾಯಕ ಅರಿಜಿತ್ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಅಪೋಲಜಿ ಲೆಟರ್ ಅನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಆದರೆ ತಮ್ಮ ಸಿನಿಮಾಗಳಲ್ಲಿ ಸಲ್ಮಾನ್ ಖಾನ್ ರವರು ಅರಿಜಿತ್ ಸಿಂಗ್ ರವರ ಹಾಡುವ ಅವಕಾಶವನ್ನು ಕಸಿದುಕೊಂಡಿದ್ದರು ಎಂಬುದಾಗಿ ಕೂಡ ಸುದ್ದಿ.

ರೇಣುಕಾ ಸಹಾನೆ; ಜಿಂಕೆಯ ಕೇಸ್ನಲ್ಲಿ ಸಲ್ಮಾನ್ ಖಾನ್ ರವರ ಕುರಿತಂತೆ ಇಡೀ ಬಾಲಿವುಡ್ ಮೌನವನ್ನು ವಹಿಸಿರುವ ಕಾರಣದಿಂದಾಗಿ ಸಲ್ಮಾನ್ ಖಾನ್ ಹಾಗೂ ಬಾಲಿವುಡ್ ವಿರುದ್ಧವಾಗಿ ರೇಣುಕಾ ದೊಡ್ಡಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಸಲ್ಮಾನ್ ಖಾನ್ ರವರೊಂದಿಗೆ ಸಂಬಂಧವನ್ನು ಹಳಸುವಂತೆ ಮಾಡಿದ್ದರು.

ಜುಬೇರ್ ಖಾನ್; ಹಿಂದಿ ಬಿಗ್ ಬಾಸ್ ಸೀಸನ್ 11 ರಲ್ಲಿ ಹಲವಾರು ವಿ’ವಾದತ್ಮಕ ಕಾರಣಗಳಿಂದಾಗಿ ಸಲ್ಮಾನ್ ಖಾನ್ ಹಾಗೂ ಜುಬೇರ್ ಖಾನ್ ಅವರ ನಡುವೆ ಜಗಳ ನಡೆದಿತ್ತು ಇದೇ ಕಾರಣಕ್ಕಾಗಿ ಯೂಬೇರ್ ಖಾನ ರವರ ಕೆಟ್ಟ ನಡವಳಿಕೆಗಳಲ್ಲಿ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಲಾಗಿತ್ತು. ಆ ಸಂದರ್ಭದಲ್ಲಿ ಜುಬೇರ್ ಖಾನ್ ರವರು ಪಬ್ಲಿಕಲ್ಲಿ ನಾನೇನು ಹೆದರಿ ಕೊಳ್ಳುವುದಕ್ಕೆ ವಿವೇಕ್ ಒಬೆರಾಯ್ ಅಲ್ಲ ಎನ್ನುವುದಾಗಿ ಪರೋಕ್ಷವಾಗಿ ಸಲ್ಮಾನ್ ಖಾನ್ ಅವರ ವಿರುದ್ಧ ಎಫ್ಐಆರ್ ದಾಖಲಿಸುತ್ತೇನೆ ಎಂಬುದಾಗಿ ಕೂಡ ಹೇಳಿದರು. ಆದರೆ ಇದುವರೆಗೂ ಆ ಕೆಲಸ ನಡೆದಿಲ್ಲ.

ರಣಬೀರ್ ಕಪೂರ್; ಒಂದು ಕಾಲದಲ್ಲಿ ರಣಬೀರ್ ಕಪೂರ್ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಕೂಡ ಆತ್ಮೀಯ ಸ್ನೇಹಿತರಾಗಿದ್ದರು ಆದರೆ ಕತ್ರಿನಾ ಕೈಫ್ ರವರ ಕಾರಣದಿಂದಾಗಿ ಇವರಿಬ್ಬರನ್ನು ಸ್ನೇಹದ ನಡುವೆ ಬಿರುಕು ಮೂಡಿತ್ತು ಎಂಬುದಾಗಿ ಕೇಳಿಬಂದಿದೆ. ಅಂದಿನಿಂದ ಇಂದಿನವರೆಗೂ ಇಬ್ಬರೂ ಕೂಡ ಒಬ್ಬರ ಮುಖ ನೋಡಿದರೆ ಒಬ್ಬರಿಗೆ ಆಗುವುದಿಲ್ಲ ಎನ್ನುವಷ್ಟರಮಟ್ಟಿಗೆ ದೂರವಿದ್ದಾರೆ.

ಸೋನಾ ಮಹಾಪಾತ್ರ; ಸಲ್ಮಾನ್ ಖಾನ್ ರವರ ಮನೋಭಾವದ ಕುರಿತಂತೆ ಸೋನಾ ಮಹಾಪಾತ್ರ ರವರು ಸಾಕಷ್ಟು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ಸುಲ್ತಾನ್ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಕುಸ್ತಿಪಟು ಆಗಿರುವುದು ಯಾವ ಭಾವನೆ ನೀಡುತ್ತದೆ ಎಂಬುದಾಗಿ ಸಂದರ್ಶಕರು ಕೇಳಿದ ಪ್ರಶ್ನೆಗೆ ಸಲ್ಮಾನ್ ಖಾನ್ ರವರು ರೇ’ಪ್ ಗೆ ಒಳಗಾಗಿರುವ ಹುಡುಗಿಯ ಅನುಭವವಾಗುತ್ತದೆ ಎಂಬುದಾಗಿ ಹೇಳಿದಾಗ ಸೋನಾ ಮಹಾಪಾತ್ರ ರವರು ಕಠಿಣವಾಗಿ ಟೀಕಿಸಿದ್ದರು ಎಂಬುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಈ ಎಲ್ಲಾ ಸೆಲೆಬ್ರಿಟಿಗಳು ಹಾಗೂ ಇವರು ಹಾಗೂ ಸಲ್ಮಾನ್ ಖಾನ್ ಅವರ ನಡುವೆ ನಡೆದಂತಹ ಘಟನೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Get real time updates directly on you device, subscribe now.