ಈ ಬಾರಿ ಆರ್ಸಿಬಿ ತಂಡ ಫೈನಲ್ ಗೆ ಹೋಗೋದು ಪಕ್ಕನಾ?? ಯಾಕೆ ಗೊತ್ತೇ? ಅಭಿಮಾನಿಗಳ ಹೊಸ ಲೆಕ್ಕಾಚಾರ ಏನು ಗೊತ್ತೇ?
ನಮಸ್ಕಾರ ಸ್ನೇಹಿತರೇ ಈ ಬಾರಿ ಮೊದಲಾರ್ಧದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತವಾಗಿ ಗೆಲುವುಗಳನ್ನು ದಾಖಲಿಸಿತ್ತು. ಆದರೆ ಟೂರ್ನಿಯ ದ್ವಿತೀಯಾರ್ಧದಲ್ಲಿ ಸತತವಾಗಿ ಸೋಲನ್ನು ಕೂಡ ಅನುಭವಿಸಿತ್ತು. ಆದರೆ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಮತ್ತೊಮ್ಮೆ ಗೆಲುವಿನ ಟ್ರ್ಯಾಕಿಗೆ ಮರಳಿದೆ. ಹೌದು ಗೆಳೆಯರೇ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಬಲಿಷ್ಠ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 67 ರನ್ನುಗಳಿಂದ ಸೋಲಿಸಿದೆ. ಹೌದು ಗೆಳೆಯರೆ ಈ ಹಿಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೈದರಾಬಾದ್ ತಂಡದ ಎದುರು 68 ರನ್ನುಗಳಿಗೆ ಆಲೌಟ್ ಆಗುವ ಮೂಲಕ ದೊಡ್ಡಮಟ್ಟದ ಮುಖಭಂಗವನ್ನು ಅನುಭವಿಸಿತ್ತು.
ಆದರೆ ಈಗ ಅದೇ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 67 ರನ್ನುಗಳಿಂದ ಸೋಲಿಸುವ ಮೂಲಕ ತನ್ನನ್ನು ತೀರಿಸಿಕೊಂಡಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೆ 3 ವಿಕೆಟಿಗೆ 193 ರನ್ನುಗಳ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ನೀಡಿತ್ತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಅ’ಟ್ಯಾಕ್ ಗೆ ನಲುಗಿದ ಸನ್ರೈಸರ್ಸ್ ಹೈದರಾಬಾದ್ ತಂಡ 125 ರನ್ನಿಗೆ ಸಂಪೂರ್ಣ ಆಲೌಟ್ ಆಗಿದೆ. ಅದರಲ್ಲೂ ವನಿಂದು ಹಸರಂಗ ರವರು ಐದು ವಿಕೆಟ್ ಪಡೆಯುವ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸಂಪೂರ್ಣವಾಗಿ ಕಟ್ಟಿಹಾಕಿದರು. ಇನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಲೆಕ್ಕಾಚಾರದ ಪ್ರಕಾರ ಈ ಬಾರಿ ಖಂಡಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಆಡಲಿದೆ ಎಂಬುದಾಗಿ ಹೇಳುತ್ತಿದ್ದಾರೆ.
ಹೌದು ಗೆಳೆಯರು ಸಾಮಾನ್ಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಸಿರು ಜರ್ಸಿ ಧರಿಸಿದಾಗ ಲೆಲ್ಲ ಸೋತಿದ್ದು ಹೆಚ್ಚು. ಆದರೆ ಗೆದ್ದಾಗೆಲ್ಲಾ ಫೈನಲ್ ತಲುಪಿದೆ ಎಂಬುದಾಗಿ ಅಂಕಿ-ಅಂಶಗಳು ಹೇಳುತ್ತವೆ. ಹೌದು ಗೆಳೆಯರೇ ಇದುವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಸಿರು ಜೆರ್ಸಿಯಲ್ಲಿ ಮೂರು ಬಾರಿ ಗೆದ್ದಿದೆ. 2011 2016 ಹಾಗೂ ಇಂದಿನ ವರ್ಷ. 2011 ಹಾಗೂ 2016 2ರಲ್ಲಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲಿಗೆ ತಲುಪಿದೆ. ಹೀಗಾಗಿ ಈ ಬಾರಿ ಕೂಡ ಫೈನಲ್ ತಲುಪಲಿದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.