ಕನ್ನಡ ಚಿತ್ರರಂಗದಲ್ಲಿ ನಾಯಕನಟರಾಗಿ ಮೋಡಿ ಮಾಡುತ್ತಿರುವ ಸಹೋದರಿಯರ ಜೋಡಿ ಯಾರೆಲ್ಲಾ ಗೊತ್ತಾ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಎನ್ನುವುದು ಯಾವುದೇ ಭೇದಭಾವವಿಲ್ಲದೆ ಪ್ರತಿಭೆ ಇರುವವರಿಗೆ ಅವಕಾಶ ನೀಡಿದಂತಹ ಚಿತ್ರರಂಗ ಎಂದರೆ ತಪ್ಪಾಗಲಾರದು. ಇಲ್ಲಿಯವರೆಗೂ ಕನ್ನಡ ಚಿತ್ರರಂಗದಿಂದ ಹಲವಾರು ನಟ-ನಟಿಯರು ಪರಭಾಷೆಗಳಿಗೆ ಹೋಗಿ ಅಲ್ಲಿ ಕೂಡ ಯಶಸ್ಸನ್ನು ಕಂಡಿದ್ದಾರೆ. ನಮ್ಮ ಚಿತ್ರರಂಗದಲ್ಲಿ ಹಲವಾರು ನಟರಲ್ಲಿ ಸಹೋದರರ ಜೋಡಿಯನ್ನು ನೀವು ನೋಡಿರಬಹುದು. ಉದಾಹರಣೆಗೆ ಶಂಕರನಾಗ್ ಅನಂತನಾಗ್ ದರ್ಶನ್ ತೂಗುದೀಪ್ ಹಾಗೂ ದಿನಕರ್ ತೂಗುದೀಪ್ ಹೀಗೆ ಹತ್ತು ಹಲವಾರು ಜನರಿದ್ದಾರೆ.

ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿರುವಂತಹ ನಟಿಯರ ಕುರಿತಂತೆ. ಹೌದು ಗೆಳೆಯರೆ ನಟಿ ಸಹೋದರಿಯರ ಕುರಿತಂತೆ ಇಂದಿನ ಲೇಖನಿಯಲ್ಲಿ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ಹಾಗಿದ್ದರೆ ತಪ್ಪದೇ ಯಾರೆಲ್ಲ ಈ ಲಿಸ್ಟಿನಲ್ಲಿ ಇದ್ದಾರೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಶಾನ್ವಿ ಶ್ರೀವಾತ್ಸವ್ ಹಾಗೂ ವಿಧಿಶ ಶ್ರೀವಾತ್ಸವ್; ಶಾನ್ವಿ ಶ್ರೀವಾತ್ಸವ್ ರವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪರಭಾಷೆಯವರು ಆಗಿದ್ದರೂ ಕೂಡ ಕನ್ನಡವನ್ನು ಕಲಿತುಕೊಂಡು ಕನ್ನಡ ಚಿತ್ರರಂಗದಲ್ಲಿ ಕನ್ನಡಿಗರಂತೆ ನಟಿಸಿ ಕನ್ನಡಿಗರ ಮನೆ-ಮನವನ್ನು ಗೆದ್ದಂತಹ ನಟಿ. ಯಾವುದೇ ಪಾತ್ರವನ್ನಾದರೂ 100% ನ್ಯಾಯವನ್ನು ಸಲ್ಲಿಸಿ ನಟಿಸುವಂತಹ ನಟಿ ಶಾನ್ವಿ ಶ್ರೀವಾತ್ಸವ್. ಇನ್ನು ಅವರ ತಂಗಿ ವಿಧಿಶ ಶ್ರೀವಾತ್ಸವ್ ರವರ ಕುರಿತಂತೆ ಕನ್ನಡ ಪ್ರೇಕ್ಷಕರಿಗೆ ಗೊತ್ತಿರುವುದು ಕಡಿಮೆಯಾದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರಾಟ್ ಸಿನಿಮಾದಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಎನ್ನುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕು. ಒಟ್ಟಾರೆ ಸಹೋದರಿಯರಿಬ್ಬರು ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ ಎಂದು ಹೇಳಬಹುದಾಗಿದೆ.

ಸಂಜನಾ ಗಲ್ರಾನಿ ನಿಕಿತ ಗಲ್ರಾನಿ; ನಟಿ ಸಂಜನಾ ಗಲ್ರಾನಿ ರವರ ಕುರಿತಂತೆ ನಿಮಗೆಲ್ಲರಿಗೂ ಗೊತ್ತೇ ಇದೆ. ಗಂಡ-ಹೆಂಡತಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಟಿಸಲು ಆರಂಭಿಸಿದ ಸಂಜನಾ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅವರ ಸಹೋದರಿ ಯಾಗಿರುವ ನಿಕಿತ ಗಲ್ರಾನಿ ಜಂಬುಸವಾರಿ ಅಜಿತ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಂಜನಾ ರವರು ಕೇವಲ ಸಿನಿಮಾ ವಿಚಾರದಲ್ಲಿ ಮಾತ್ರವಲ್ಲದೆ ಬೇಡದ ವಿಚಾರಗಳಿಗಾಗಿ ಕೂಡ ಸಾಕಷ್ಟು ಬಾರಿ ಇತ್ತೀಚಿನ ದಿನಗಳ ಹೆಸರಾಗಿದ್ದಾರೆ ಎನ್ನುವುದರ ನಾವಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಆಶಿಕ ರಂಗನಾಥ್ ಹಾಗೂ ಅನುಷಾ ರಂಗನಾಥ್; ನಟಿ ಆಶಿಕ ರಂಗನಾಥ್ ಅವರನ್ನು ಕರ್ನಾಟಕದ ಸ್ಟೇಟ್ ಕೃಷ್ ಎನ್ನುವುದಾಗಿ ಕರೆಯುತ್ತಾರೆ. ಇಂದಿಗೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬಹುಬೇಡಿಕೆ ನಟಿಯರಾಗಿ ಇವರು ಕಾಣಿಸಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಸ್ಟಾರ್ ನಟಿಯಾಗಿ ಕಾಣಿಸಿಕೊಳ್ಳುವ ಅಂತಹ ಎಲ್ಲಾ ಸಾಧ್ಯತೆಗಳು ಕೂಡ ಇವೆ. ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ನಟಿಸಿದ್ದರು ಕೂಡ ಬಹು ಬೇಡಿಕೆ ನಟಿ ಎಂಬ ಪಟ್ಟವನು ಹೊಂದಿರುವುದು ಆಶಿಕಾ ರಂಗನಾಥ್ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಆಶಿಕ ರಂಗನಾಥ್ ರವರ ಸಹೋದರಿ ಯಾಗಿರುವ ಅನುಷಾ ರಂಗನಾಥ್ ರವರು ಕೂಡ ಸೋಡಾಬುಡ್ಡಿ ಹಾಗೂ ಒನ್ಸ್ ಮೋರ್ ಕೌರವ ಎನ್ನುವಂತಹ ಕನ್ನಡ ಸಿನಿಮಾಗಳಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದಾರೆ.

ಅಶ್ವಿತಿ ಶೆಟ್ಟಿ ಹಾಗೂ ಅದ್ವಿತಿ ಶೆಟ್ಟಿ; ಕನ್ನಡ ಚಿತ್ರರಂಗದ ಅವಳಿ ಜವಳಿ ಸಹೋದರಿಯರ ಆಗಿರುವ ಅಶ್ವಿತಿ ಶೆಟ್ಟಿ ಹಾಗೂ ಅದ್ವಿತಿ ಶೆಟ್ಟಿ ಇಬ್ಬರು ಕೂಡ ಮೊದಲು ಪ್ರಮುಖವಾಗಿ ಜನಪ್ರಿಯ ತನ್ನ ಪಡೆದುಕೊಂಡಿದ್ದು ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ರವರು ಜೊತೆಯಾಗಿ ಕಾಣಿಸಿಕೊಂಡಿರುವ ಸೂಪರ್ ಹಿಟ್ ಸಿನಿಮಾ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಸಿನಿಮಾದಲ್ಲಿ. ಇದಾದ ನಂತರ ಇಬ್ಬರೂ ಕೂಡ ಹಲವಾರು ಸಿನಿಮಾಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ ಹಾಗೂ ಪ್ರತ್ಯೇಕವಾಗಿ ಕೂಡ ನಾಯಕನಟರಾಗಿ ಕಾಣಿಸಿಕೊಂಡಿದ್ದಾರೆ. ಇವಿಷ್ಟು ನಾಯಕನಟಿಯರಲ್ಲಿ ನಿಮ್ಮ ನೆಚ್ಚಿನ ಸಹೋದರಿಯರ ಜೋಡಿ ಯಾವುದು ಎಂಬುದನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Get real time updates directly on you device, subscribe now.