ಇನ್ನೇನು ಪ್ಲೇ ಆಫ್ ಗೆ ಏರುತ್ತೇವೆ ಎನ್ನುವಷ್ಟರಲ್ಲಿ RR ತಂಡಕ್ಕೆ ಮತ್ತೊಂದು ಶಾಕ್, ತಂಡ ಬಿಟ್ಟ ಆಟಗಾರ. ಆರ್ಸಿಬಿಗೆ ಫುಲ್ ಕುಶ್ ಆಗಿದ್ದು ಯಾಕೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಈಗಾಗಲೇ ಈ ಬಾರಿಯ ಐಪಿಎಲ್ 2022 ಮುಕ್ಕಾಲುಭಾಗ ಮುಗಿದಿದ್ದು ಕೊನೆಯ ಹಂತಕ್ಕೆ ಇನ್ನೇನು ಅಡಿಯಿಡುತ್ತಿದೆ. ಇಷ್ಟು ವರ್ಷದವರೆಗೆ ಉತ್ತಮ ಪ್ರದರ್ಶನ ನೀಡುತ್ತಿದ್ದ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಕ್ಕೆ ಬಿದ್ದಿದೆ ಹಾಗೂ ಇಷ್ಟು ವರ್ಷ ಕಳಪೆ ಪ್ರದರ್ಶನ ನೀಡುತ್ತಿದ್ದು ತಂಡಗಳು ಈಗಾಗಲೇ ಈ ಬಾರಿಯ ಪ್ಲೇಆಫ್ ರೇಸ್ ನಲ್ಲಿ ಮುಂಚೂಣಿಯಲ್ಲಿವೆ. ಉದಾಹರಣೆಗೆ ನಾವು ಮಾತನಾಡಲು ಹೊರಟಿರುವುದು ರಾಜಸ್ತಾನ ರಾಯಲ್ಸ್ ತಂಡದ ಕುರಿತಂತೆ. ಹೌದು ಗೆಳೆಯರೇ ರಾಜಸ್ಥಾನ ರಾಯಲ್ಸ್ ತಂಡ ಮೊದಲ ಸೀಸನ್ ನ ಐಪಿಎಲ್ ನಲ್ಲಿ ಚಾಂಪಿಯನ್ ಆಗಿದ್ದು ಬಿಟ್ಟರೆ ಮತ್ತೆಲ್ಲಾ ಐಪಿಎಲ್ ಸೀಸನ್ ಗಳಲ್ಲಿ ಕಳೆದು ಪ್ರದರ್ಶನವನ್ನು ನೀಡಿಕೊಂಡು ಬಂದಿತ್ತು.
ಆದರೆ ಈ ಬಾರಿಯ ಐಪಿಎಲ್ ನಲ್ಲಿ ಈಗಾಗಲೇ ಆಡಿರುವ 11 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ನಾಲ್ಕರಲ್ಲಿ ಸೋತು ಬರೋಬ್ಬರಿ 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ ಪಾಯಿಂಟ್ಸ್ ಟೇಬಲ್ ನಲ್ಲಿ ಮಿಂಚುತ್ತಿದೆ. ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಜಾಸ್ ಬಟ್ಲರ್ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿ ಪ್ರಮುಖ ಬ್ಯಾಟ್ಸ್ಮನ್ ಆಗಿ ರನ್ ಹೊಳೆಯನ್ನೇ ಹರಿಸುತ್ತಿದ್ದಾರೆ. ಇನ್ನೇನು ಪ್ಲೇಆಫ್ ಹಂತಕ್ಕೆ ರಾಜಸ್ಥಾನ ರಾಯಲ್ಸ್ ತೇರ್ಗಡೆ ಆಗೆಬಿಡ್ತು ಎನ್ನುವ ಹೊತ್ತಿಗೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಒಬ್ಬ ಆಟಗಾರನಿಂದ ಶಾ’ಕಿಂಗ್ ನ್ಯೂಸ್ ಈಗ ಹೊರಬಂದಿದೆ. ಹೌದು ಗೆಳೆಯರೇ ಈಗ ತಂಡದಿಂದ ವೆಸ್ಟ್ ಇಂಡೀಸ್ ಮೂಲದ ಕ್ರಿಕೆಟಿಗ ಹೋಗಿದ್ದಾರೆ. ಹಾಗಿದ್ದರೆ ಅದು ಯಾರು ಹಾಗೂ ಯಾವ ಕಾರಣಕ್ಕಾಗಿ ಹೊರಹೋಗಿದ್ದಾರೆ ಮೊದಲು ತಿಳಿದುಕೊಳ್ಳೋಣ ಬನ್ನಿ.
ಹೌದು ಗೆಳೆಯರೇ ಆಟಗಾರ ಇನ್ಯಾರೂ ಅಲ್ಲ ಶಿಮ್ರೋನ್ ಹೆಟ್ಮೈಯರ್. ಹೌದು ಗೆಳೆಯರೆ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಜಾಸ್ ಬಟ್ಲರ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ಹೊರತುಪಡಿಸಿದರೆ ಮೂರನೇ ಅತ್ಯಂತ ಹೆಚ್ಚು ರನ್ ಗಳಿಸಿರುವ ಆಟಗಾರ ಎಂದರೆ ಅದು ಶಿಮ್ರೋನ್ ಹೆಟ್ಮೈಯರ್. ಅವರು ತಂಡದಿಂದ ಹೊರಕ್ಕೆ ಹೋಗುತ್ತಿರುವ ರೀತಿಗೂ ಕೂಡ ಒಂದು ಕಾರಣ ಇದೆ. ಅದೇನೆಂದರೆ ಶಿಮ್ರೋನ್ ಹೆಟ್ಮೈಯರ್ ರವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಇದಕ್ಕಾಗಿಯೇ ತಮ್ಮ ಹೆಂಡತಿಯ ಬಳಿಗೆ ಹೋಗಿದ್ದಾರೆ. ಈ ಕಾರ್ಯ ಮುಗಿದ ನಂತರ ಅತಿ ಶೀಘ್ರದಲ್ಲಿ ತಂಡವನ್ನು ಮತ್ತೆ ಸೇರಿಕೊಳ್ಳಲಿದ್ದಾರೆ ಎಂಬುದಾಗಿದೆ ಮ್ಯಾನೇಜ್ಮೆಂಟ್ ತಿಳಿಸಿದೆ. ಆದರೆ ಕೆಲವು ಪಂದ್ಯಗಳನ್ನು ಶಿಮ್ರೋನ್ ಹೆಟ್ಮೈಯರ್ ಇಲ್ಲದೆ ರಾಜಸ್ಥಾನ ರಾಯಲ್ಸ್ ತಂಡ ಆಡಬೇಕಾಗಿದೆ ಹೀಗಾಗಿ ಕೊಂಚ ಮಟ್ಟಿಗೆ ಅವರ ಅನುಪಸ್ಥಿತಿ ಇಲ್ಲಿ ಕಾಡಲಿದೆ ಎಂಬುದಾಗಿ ಎಲ್ಲರೂ ಹೇಳುತ್ತಿದ್ದಾರೆ. ಇದೆ ಸಮಯದಲ್ಲಿ ಆರ್ಸಿಬಿ ಗೆ ಪೈಪೋಟಿ ನೀಡುತ್ತಿರುವ RR ತಂಡ ಮುಂದಿನ ಪಂದ್ಯಗಳನ್ನು ಸೋತರೆ ಆರ್ಸಿಬಿ ಮತ್ತಷ್ಟು ಸುಲಭವಾಗಿ ಪ್ಲೇ ಆಫ್ ತಲುಪಲಿದೆ.