ಒಂದು ರುಪಾಯಿಗೆ ಇಡ್ಲಿ ಮಾಡಿ ಜನರ ಹಸಿವು ನೀಗಿಸುತ್ತಿದ್ದ ಅಜ್ಜಿಗೆ ಆನಂದ್ ಮಹಿಂದ್ರಾ ಕೊಟ್ಟ ಉಡುಗೊರೆಯೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಾವು ಇತ್ತೀಚಿನ ದಿನಗಳಲ್ಲಿ ಹಲವಾರು ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ನಕ್ಕಿದ್ದೇವೆ ಅತ್ತಿದ್ದೇವೆ ಭಾವನಾತ್ಮಕವಾಗಿ ಕನೆಕ್ಟ್ ಕೂಡ ಆಗಿದ್ದೇವೆ. ಅದೇ ರೀತಿಯ ಒಂದು ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಹೌದು ಗೆಳೆಯರೇ ನಾವು ಇಂದು ಮಾತನಾಡಲು ಹೊರಟಿರುವುದು ಒಂದು ರೂಪಾಯಿಯಲ್ಲಿ ಇಡ್ಲಿಯನ್ನು ಮಾರುತ್ತಿರುವ ತಮಿಳುನಾಡಿನ ಅಮ್ಮ ರವರ ಕುರಿತಂತೆ.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮಹಿಂದ್ರ ಸಂಸ್ಥೆಯ ಮುಖ್ಯಸ್ಥರಾಗಿರುವ ಆನಂದ್ ಮಹಿಂದ್ರ ರವರು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಯಾರಿಗಾದರೂ ಸಹಾಯ ಬೇಕಾಗಿದ್ದರೆ ಅಥವಾ ಯಾವುದಾದರೂ ಒಂದು ಒಳ್ಳೆಯ ಕೆಲಸವನ್ನು ನೋಡಿದಾಗ ಅದಕ್ಕೆ ಪ್ರೋತ್ಸಾಹಿಸುವಂತಹ ಕೆಲಸ ಮಾಡುತ್ತಲೇ ಇರುತ್ತಾರೆ.
ಇನ್ನು ಕಳೆದ ವರ್ಷವಷ್ಟೇ 1 ರೂಪಾಯಿ ಇಡ್ಲಿಯನ್ನು ಮಾಡುತ್ತಿರುವ ಈ ಅಮ್ಮನವರ ಕುರಿತಂತೆ ತಿಳಿದು ಇಳಿವಯಸ್ಸಿನಲ್ಲಿ ಕೂಡ ಅವರು ಮಾಡುತ್ತಿರುವಂತಹ ಪರಿಶ್ರಮಕ್ಕೆ ಸಲಾಂ ಸೂಚಿಸಿ ಅತಿ ಶೀಘ್ರದಲ್ಲಿ ನಿಮಗೆ ಒಂದು ಮನೆಯನ್ನು ಕಟ್ಟಿಸಿ ಕೊಡುತ್ತೇನೆ ಎನ್ನುವುದಾಗಿ ಹೇಳಿದ್ದರು. ಹೇಳಿದ ಮಾತಿನಂತೆಯೇ ಆನಂದ್ ಮಹಿಂದ್ರ ರವರು ಈಗ ಇಡ್ಲಿ ಅಮ್ಮ ಎಂದು ಕರೆಯಲ್ಪಡುವ ತಮಿಳುನಾಡಿನ ಕಮಲಾ ತಾಲ್ ರವರಿಗೆ ಅಮ್ಮಂದಿರ ದಿನಾಚರಣೆಯ ಪ್ರಯುಕ್ತ ವಾಗಿ ಹೊಸ ಮನೆಯನ್ನು ಉದ್ಘಾಟಿಸಿ ನೀಡಿದ್ದಾರೆ.
ಈ ಕುರಿತಂತೆ ವಿಡಿಯೋವನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 37 ವರ್ಷಗಳಿಂದ 1 ರೂಪಾಯಿಗೆ ಇಡ್ಲಿ ಸಾಂಬಾರ್ ಹಾಗೂ ಚಟ್ನಿಯನ್ನು ಮಾರಿಕೊಂಡು ಬರುತ್ತಿರುವ ಇಡ್ಲಿ ಅಮ್ಮನವರಿಗಾಗಿ ಆನಂದ ಮಹಿಂದ್ರಾ ರವರು ಸ್ವಂತ ಮನೆಯನ್ನು ಕಟ್ಟಿಸಿ ಕೊಟ್ಟಿರುವುದು ಈಗ ಎಲ್ಲರ ಹೃದಯವನ್ನು ಗೆದ್ದಿದೆ. ಈ ಮೂಲಕ ಇಂದಿಗೂ ಕೂಡ ಪರರ ಕಷ್ಟಗಳಿಗೆ ಮಿಡಿಯುವಂತಹ ಮನಸ್ಸುಗಳು ನಮ್ಮ ನಡುವೆ ಇದೆ ಎಂಬುದಾಗಿ ಮತ್ತೊಮ್ಮೆ ಆನಂದ್ ಮಹಿಂದ್ರ ಸಾಬೀತುಪಡಿಸಿದ್ದಾರೆ.