ಅದೇಗೆ ನೀನು ಇಷ್ಟೊಂದು ಕೆಟ್ಟ ಸಿನೆಮಾವನ್ನು ಮಾಡಿದೆ ಎಂದು ದ್ವಾರಕೀಶ್ ರವರನ್ನು ಪ್ರಶ್ನೆ ಮಾಡಿದ ವಿಷ್ಣುವರ್ಧನ್, ಯಾವ ಸಿನೆಮಾದ ಬಗ್ಗೆ ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಹಲವಾರು ನಟರ ನಡುವಿನ ಸ್ನೇಹ ಸಂಬಂಧ ಚಿರಪರಿಚಿತವಾಗಿದೆ. ಅದರಲ್ಲೂ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ರವರ ಸ್ನೇಹ ಸಂಬಂಧ ಎನ್ನುವುದು ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಅಜರಾಮರವಾಗಿದೆ. ವಿಷ್ಣುವರ್ಧನ್ ರವರು ಎಷ್ಟರಮಟ್ಟಿಗೆ ಸ್ನೇಹ ಜೀವಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸ್ನೇಹಕ್ಕಾಗಿ ಏನನ್ನು ಮಾಡಲು ಕೂಡ ವಿಷ್ಣುವರ್ಧನ್ ರವರ ಸಿದ್ಧರಾಗಿದ್ದರು. ಇನ್ನು ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ರವರ ಸ್ನೇಹ ಸಂಬಂಧದ ಕುರಿತಂತೆ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.

ಸಿನಿಮಾಗಿಂತ ಮೀರಿ ಇವರಿಬ್ಬರು ದೊಡ್ಡ ಮಟ್ಟದಲ್ಲಿ ಸ್ನೇಹ ಸಂಬಂಧವನ್ನು ಹೊಂದಿದ್ದರು. ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಆಗುತ್ತಿದ್ದವರು. ವಿಷ್ಣುವರ್ಧನ್ ರವರು ಅಂಬರೀಶ್ ರವರನ್ನು ಬಿಟ್ಟರೆ ಅಷ್ಟೊಂದು ಸ್ನೇಹಿತನಾಗಿ ಇಷ್ಟಪಡುತ್ತಿದ್ದ ದ್ದು ದ್ವಾರಕೀಶ್ ರವರನ್ನು ಎಂದು ಹೇಳಬಹುದಾಗಿದೆ. ಇನ್ನು ಇದರ ಮಧ್ಯದಲ್ಲಿ ಕೂಡ ವಿಷ್ಣುವರ್ಧನ್ ರವರು ದ್ವಾರಕೀಶ್ ರವರ ಮೇಲೆ ಸಿನಿಮಾ ಒಂದರ ಮೇಲೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅಷ್ಟಕ್ಕೂ ಇದರ ಹಿಂದಿನ ಕಾರಣ ಏನು ಯಾವ ಸಿನಿಮಾ ಎಂಬುದನ್ನು ತಿಳಿಯೋಣ ಬನ್ನಿ. ಒಬ್ಬ ನಿರ್ಮಾಪಕ ಬಂದು ದ್ವಾರಕೀಶ್ ರವರ ಬಳಿ ನನಗೊಂದು ಸಿನಿಮಾ ಮಾಡಿಕೊಡಿ ಎಂಬುದಾಗಿ ಕೇಳಿಕೊಳ್ಳುತ್ತಾರೆ.

ಆಗ ದ್ವಾರಕೀಶರವರು ತಲೆಯಲ್ಲಿ ಮೂಡಿಬಂದಿದ್ದೆ ಹೊಸ ಕಳ್ಳ ಹಳೆ ಕುಳ್ಳ ಕಥೆ. ಅದಾಗಲೇ ಅವರು ವಿಷ್ಣುವರ್ಧನ್ ಅವರ ಜೊತೆಗೆ ನಟಿಸಿ ಒಂಬತ್ತು ವರ್ಷಗಳೇ ಕಳೆದು ಹೋಗಿತ್ತು. ಹೀಗಾಗಿ ವಿಷ್ಣುವರ್ಧನರವರ ಜೊತೆಗೆ ಆ ಸಿನಿಮಾದಲ್ಲಿ ಅವರು ಕೂಡ ನಟಿಸುತ್ತಾರೆ. ವಿಷ್ಣುವರ್ಧನ್ ರವರು ಕೂಡ ಗೆಳೆಯನ ಕರೆಗೆ ಓಗೊಟ್ಟು ಕೂಡಲೇ ಅವರಿಗೆ ಕಾಲ್ಶೀಟ್ ಕೂಡ ನೀಡಿ ಸಿನಿಮಾ ಚಿತ್ರೀಕರಣ ಸಂಪೂರ್ಣವಾಗುತ್ತದೆ. ಸಿನಿಮಾ ನೋಡಿದ ನಂತರ ವಿಷ್ಣುವರ್ಧನ್ ಅವರು ಮನಬಿಚ್ಚಿ ಇದು ನೀನು ಅಂದುಕೊಂಡ ಹಾಗೆ ಬಂದಿಲ್ಲ ಸಿನಿಮಾ ಚೆನ್ನಾಗಿಲ್ಲ ಯಾಕೆ ಹೀಗೆ ಚಿತ್ರೀಕರಣ ಮಾಡಿದೆ ಎಂಬುದಾಗಿ ಹೇಳುತ್ತಾರೆ. ಸಿನಿಮಾ ಚೆನ್ನಾಗಿ ಬಂದಿರಲಿಲ್ಲ ಎನ್ನುವುದು ದ್ವಾರಕೀಶ್ ರವರಿಗೂ ಕೂಡ ಗೊತ್ತಿತ್ತು. ಆದರೆ 9 ವರ್ಷಗಳ ನಂತರ ಗೆಳೆಯನ ಜೊತೆಗೆ ನಟಿಸುತ್ತಿದ್ದೇನೆ ಎನ್ನುವ ಖುಷಿ ಅವರಲ್ಲಿತ್ತು. ಆ ಸಂದರ್ಭದಲ್ಲಿ ಕೂಡ ವಿಷ್ಣುವರ್ಧನ್ ಅವರು ಯಾವಾಗ ಬೇಕಾದರೂ ನನ್ನನ್ನು ಕರೆ ನಿನ್ನ ಜೊತೆ ನಟಿಸಲು ನಾನು ಸಿದ್ಧನಿದ್ದೇನೆ ಎಂಬುದಾಗಿ ಹೇಳಿದ್ದರಂತೆ.

Get real time updates directly on you device, subscribe now.