ಕೆಜಿಎಫ್ 2 ಬಗ್ಗೆ ಟೀಕೆ ಮಾಡಿದವರಿಗೆ ಸರಿಯಾಗಿಯೇ ಟಾಂಗ್ ಕೊಟ್ಟ ಜೊತೆ ಜೊತೆಯಲಿ ಅನಿರುದ್, ಹೇಳಿದ್ದೇನು ಗೊತ್ತೇ?? ಅಷ್ಟಕ್ಕೂ ಟೀಕೆ ಮಾಡಿದವರು ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಜಾಗತಿಕವಾಗಿ ತಲೆಯೆತ್ತಿ ಓಡಾಡುವಂತೆ ಮಾಡಿದಂತಹ ಸಿನಿಮಾ ಎಂದರೆ ಅದು ನಮ್ಮೆಲ್ಲರ ನೆಚ್ಚಿನ ಕೆಜಿಎಫ್ ಚಾಪ್ಟರ್ 2 ಚಿತ್ರ ಎಂದರೆ ತಪ್ಪಾಗಲಾರದು. ಹೌದು ಗೆಳೆಯರ ಕೆಜಿಎಫ್ ಚಾಪ್ಟರ್ 2 ಚಿತ್ರ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಸೇರಿದಂತೆ ಜಾಗತಿಕವಾಗಿ ಕೂಡ ಹಲವಾರು ದಾಖಲೆಗಳನ್ನು ಮೆಟ್ಟಿನಿಂತು ಕನ್ನಡ ಚಿತ್ರರಂಗದ ಕಂಪನ್ನು ಎಲ್ಲೆಡೆ ಪಸರಿಸುವಂತೆ ಮಾಡಿದೆ. ಈ ಸಂದರ್ಭದಲ್ಲಿ ಈ ಚಿತ್ರವನ್ನು ವೀಕ್ಷಿಸಿ ಕೆಲವರು ಚಿತ್ರದ ಕುರಿತಂತೆ ಹೆಮ್ಮೆಯನ್ನು ವ್ಯಕ್ತಪಡಿಸಿದರೆ ಇನ್ನು ಕೆಲವರು ಚಿತ್ರದ ಕುರಿತಂತೆ ತಮ್ಮ ಅವ್ಯಕ್ತ ಹೊಟ್ಟೆಕಿಚ್ಚನ್ನು ವ್ಯಕ್ತಪಡಿಸುತ್ತಿದ್ದಾರಂತೆ.
ಹೌದು ಗೆಳೆಯರೇ ಕೆಜಿಎಫ್ ಚಾಪ್ಟರ್ 2 ಚಿತ್ರ ಕೇವಲ ಮಾಸ್ ಮಾತ್ರವಾಗಿರದೆ ಮದರ್ ಸೆಂಟಿಮೆಂಟ್ ಪ್ಯೂರ್ ಲವ್ ಹಾಗೂ ಹಲವಾರು ಟರ್ನ್ ಹಾಗೂ ಟ್ವಿಸ್ಟ್ ಗಳನ್ನು ಕೂಡ ಹೊಂದಿದ್ದು ಪ್ರೇಕ್ಷಕರು ಪದೇಪದೇ ಚಿತ್ರವನ್ನು ಚಿತ್ರಮಂದಿರಗಳಿಗೆ ಹೋಗಿ ನೋಡುತ್ತಿರುವುದೇ ಚಿತ್ರದ ಜನಪ್ರಿಯತೆಗೆ ಮತ್ತೊಂದು ಜೀವಂತ ಉದಾಹರಣೆಯಾಗಿದೆ ಎಂದರೆ ತಪ್ಪಾಗಲಾರದು. ಕೇವಲ ಪ್ರೇಕ್ಷಕರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಇಂದಿಗೂ ಹೋಗಿ ನೋಡುತ್ತಿದ್ದಾರೆ. ಅವುಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆಜೊತೆಯಲಿ ಧಾರವಾಹಿಯ ಹೀರೋ ಆಗಿರುವ ನಟ ಅನಿರುದ್ಧ್ ಕೂಡ ಒಬ್ಬರು ಎಂದು ಹೇಳಬಹುದಾಗಿದೆ.
ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ಹಿಂದಿರುಗಿ ನೋಡುವಂತೆ ಮಾಡಿದಂತಹ ಚಿತ್ರವೆಂದರೆ ಅದು ಕೆಜಿಎಫ್ ಚಾಪ್ಟರ್ 2. ಈಗ ಪ್ರತಿಯೊಂದು ಭಾಷೆಯ ಚಿತ್ರಗಳು ಕೂಡ ಬಿಡುಗಡೆಯಾದಾಗ ಅದನ್ನು ಕೆಜಿಎಫ್ ಸರಣಿ ಚಿತ್ರಗಳಿಗೆ ಹೋಲಿಸುತ್ತಿದ್ದಾರೆ ಎನ್ನುವುದೇ ನಿಜವಾದ ಕನ್ನಡಿಗರು ಹೆಮ್ಮೆ ಪಟ್ಟು ಕೊಳ್ಳಬೇಕಾಗಿರುವ ವಿಚಾರ. ಆದರೆ ತಮ್ಮ ಭಾಷೆಗಳ ಸಿನಿಮಾವನ್ನು ಹಿಂದಿಕ್ಕಿ ಮುಂದೆ ಹೋಗುತ್ತದೆ ಎನ್ನುವ ಕಾರಣಕ್ಕಾಗಿ ಪರಭಾಷೆಯ ಸೆಲೆಬ್ರಿಟಿಗಳಿಗೆ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ನೋಡಿ ಇರಿಸು ಮುರುಸಾಗುತ್ತಿತ್ತು ಎಂದರೆ ತಪ್ಪಾಗಲಾರದು.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾದ ಒಂದು ದಿನ ಮುಂಚೆ ತಮಿಳು ಚಿತ್ರರಂಗದ ಸ್ಟಾರ್ ನಟನಾಗಿರುವ ತಲಪತಿ ವಿಜಯ್ ರವರ ಬೀಸ್ಟ್ ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಬೀಸ್ಟ್ ಸಿನಿಮಾ ಕಲೆಕ್ಷನ್ ಮಾಡಿದ್ದು ಕೇವಲ 250 ಕೋಟಿ ರೂಪಾಯಿ. ಅದೇ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ನೋಡುವುದಾದರೆ ಬರೋಬ್ಬರಿ 1200 ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ನಿಜಕ್ಕೂ ಇದು ಖಂಡಿತವಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರ ಈ ವರ್ಷದಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ ಎನ್ನುವ ಖ್ಯಾತಿಗೆ ಪಾತ್ರವಾಗಿದೆ ಎಂದು ಹೇಳಬಹುದಾಗಿದೆ. ಆರ್ ಆರ್ ಆರ್ ಚಿತ್ರದ ದಾಖಲೆಯನ್ನು ಕೂಡ ಮುರಿಯಲು ಸಜ್ಜಾಗಿ ನಿಂತಿದೆ.
ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ವೀಕ್ಷಿಸಿರುವ ತಲಪತಿ ವಿಜಯ್ ಅವರ ತಂದೆ ವಿವಾ’ದಾತ್ಮಕ ಹೇಳಿಕೆ ಮೂಲಕ ಈಗ ಮತ್ತೊಮ್ಮೆ ಸಜ್ಜಾಗಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ವೀಕ್ಷಿಸಿರುವ ಅವರು ಚಿತ್ರದಲ್ಲಿ ಹಲವಾರು ದೋಷಗಳಿದ್ದರೂ ಕೂಡ ಜನರು ಅದನ್ನು ನಿರ್ಲಕ್ಷಿಸಿ ಚಿತ್ರವನ್ನು ಗೆಲ್ಲುವಂತೆ ಮಾಡಿದ್ದಾರೆ ಎಂದು ಚಿತ್ರದ ಕುರಿತಂತೆ ವಿವಾ’ದಾತ್ಮಕ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ವಿಜಯ್ ರವರ ತಂದೆಯನ್ನು ಹಿಗ್ಗಾಮುಗ್ಗ ಟೀಕಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿಯ ಸೂಪರ್ ಹಿಟ್ ಧಾರವಾಹಿ ಆಗಿರುವ ಜೊತೆ ಜೊತೆಯಲಿ ಧಾರವಾಹಿಯ ಎಲ್ಲರೂ ಕೂಡ ಅಂದರೆ ಮೇಘ ಶೆಟ್ಟಿ ಅನಿರುದ್ಧ್ ಸೇರಿದಂತೆ ಧಾರಾವಾಹಿಯ ಪ್ರಮುಖ ನಟ-ನಟಿಯರು ಎಲ್ಲರೂ ಸೇರಿ ಮಾಲ್ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ವೀಕ್ಷಿಸಿದ್ದಾರೆ. ಚಿತ್ರವನ್ನು ವೀಕ್ಷಿಸಿದ ನಂತರ ನಮ್ಮ ಕನ್ನಡದ ಹೆಮ್ಮೆಯ ಸಿನಿಮಾ ಕೆಜಿಎಫ್ ಚಾಪ್ಟರ್ 2 ಎನ್ನುವುದಾಗಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಕುರಿತಂತೆ ಮನಸ್ಸಿನಲ್ಲಿ ಸಂತೋಷವನ್ನು ತುಂಬಿಕೊಂಡು ನೋಡಿದರೆ ಚಿತ್ರ ಸಂಪೂರ್ಣ ಚಂದವಾಗಿ ಕಾಣಿಸುತ್ತದೆ. ಬೇರೆಯವರ ಹಾಗೆ ಮನಸ್ಸಿನಲ್ಲಿ ಲೋಪದೋಷ ಇಟ್ಟುಕೊಂಡು ಕಂಡರೆ ನಿಜಕ್ಕೂ ಕೂಡ ಲೋಪವೇ ಕಾಣುತ್ತದೆ ಎಂಬುದಾಗಿ ಮೂಲಕ ತಿಳಿದುಕೊಳ್ಳಬಹುದಾಗಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.