ಅಂದು ಅಣ್ಣಾವ್ರು ಮಾಡಬೇಕಾಗಿದ್ದ ಕರುಣಾಮಯಿ ಸಿನಿಮಾ ವಿಷ್ಣುವರ್ಧನ್ ರವರ ಪಾಲಾಗಿದ್ದು ಯಾಕೆ ಗೊತ್ತೇ?? ತೆರೆ ಹಿಂದೆ ನಡೆದ ಕಥೆಯೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡಚಿತ್ರರಂಗ ಎಂದು ಬಂದಾಗ ಕೇಳಿ ಬರುವಂತಹ ಮೊದಲ ಎರಡು ಹೆಸರುಗಳೆಂದರೆ ಅದು ಅಭಿನಯ ಭಾರ್ಗವ ವಿಷ್ಣುವರ್ಧನ್ ಹಾಗೂ ನಟ ಸಾರ್ವಭೌಮ ಡಾ ರಾಜಕುಮಾರ್. ಹೌದು ಗೆಳೆಯರೇ ಅಣ್ಣಾವ್ರು ಹಾಗೂ ದಾದಾ ಇಬ್ಬರನ್ನು ಕೂಡ ಕನ್ನಡ ಚಿತ್ರರಂಗದ ಎರಡು ಕಣ್ಣುಗಳು ಎನ್ನುವಂತೆ ಪ್ರತಿಬಿಂಬಿಸಲಾಗುತ್ತದೆ. ಇವರಿಬ್ಬರ ಕುರಿತಂತೆ ಕೆಲ ಕಿಡಿಗೇಡಿಗಳು ಬೇಡದ ಸುದ್ದಿಗಳನ್ನು ಹಬ್ಬಿಸಬಹುದು.
ಆದರೆ ಇವರಿಬ್ಬರು ನಿಜಕ್ಕೂ ಕೂಡ ಕೊನೆಯವರೆಗೂ ಭ್ರಾತೃತ್ವದ ಸಂಬಂಧವನ್ನು ಹೊಂದಿದ್ದರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇವರಿಬ್ಬರ ಕುರಿತಂತೆ ಹೇಳುವುದಕ್ಕೆ ಸಾಕಷ್ಟಿದೆ ಯಾಕೆಂದರೆ ಕನ್ನಡ ಚಿತ್ರರಂಗದ ಉನ್ನತಿಯ ಹರಿಕಾರರು ಎಂದರು ಕೂಡ ತಪ್ಪಾಗಲಾರದು. ಎಷ್ಟು ಬಾರಿ ಪರಸ್ಪರ ಒಬ್ಬರು ಮಾಡಬೇಕಿದ್ದ ಸಿನಿಮಾವನ್ನು ಇನ್ನೊಬ್ಬರು ಮಾಡಿದಂತಹ ಉದಾಹರಣೆಗಳು ಕೂಡ ಸಾಕಷ್ಟಿವೆ. ಅದರಲ್ಲೂ ಇನ್ನು ನಾವು ಒಂದು ಸಿನಿಮಾದ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರೇ ಕರುಣಾಮಯಿ ಅನ್ನುವ ಸಿನಿಮಾದ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ.
ಹೌದು ಗೆಳೆಯರೆ ಕರುಣಾಮಯಿ ಸಿನಿಮಾವನ್ನು ಮೊದಲು ಚಿ ಉದಯಶಂಕರ್ ರವರು ಅಣ್ಣಾವ್ರಿಗಾಗಿ ಬರೆದಿದ್ದರು. ಆದರೆ ಅಣ್ಣಾವ್ರು ಈ ಕಥೆಯನ್ನು ಒಪ್ಪಿಕೊಂಡಿರಲಿಲ್ಲ ಹೀಗಾಗಿ ಅದು ಹಾಗೆಯೇ ಇತ್ತು. ನಂತರ ನಿರ್ದೇಶಕ ಭಾರ್ಗವ ರವರ ಮೂಲಕ ಚಿ ಉದಯ್ ಶಂಕರ್ ರವರು ಕೆಸರು ಮೊಸರು ಎನ್ನುವ ಕಾದಂಬರಿ ಆಧಾರದ ಮೇಲೆ ಬರೆದಿರುವ ಕರುಣಾಮಯಿ ಚಿತ್ರದ ಕಥೆಯನ್ನು ವಿಷ್ಣುವರ್ಧನ ಹಲವರು ಕೇಳುತ್ತಾರೆ ಇಷ್ಟ ಕೂಡ ಆಗುತ್ತದೆ. ಆದರೆ ಮೊದಲಿಗೆ ಇದು ಅಣ್ಣಾವ್ರಿಗೆ ಬರೆದಿರುವ ಕಥೆ ಎಂಬುದು ತಿಳಿದು ಬೇಡ ಎಂಬುದಾಗಿ ಹೇಳುತ್ತಾರೆ. ನಂತರ ಅಣ್ಣಾವ್ರೇ ಯಾರು ಬೇಕಾದರೂ ಮಾಡಬಹುದು ಎನ್ನುವುದಾಗಿ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಕೊಂಡ ಮೇಲೆ ವಿಷ್ಣುವರ್ಧನ್ ರವರು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಳ್ಳುತ್ತಾರೆ. ನಿಮ್ಮಲ್ಲಿ ಎಷ್ಟು ಜನ ಕರುಣಾಮಯಿ ಸಿನಿಮಾವನ್ನು ನೋಡಿದ್ದೀರಿ ಎಂಬುದನ್ನು ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.