ಮದುವೆಯಾಗಿ ಎರಡು ತಿಂಗಳಾಗಿತ್ತು, ಆದರೆ ಸೆಲ್ಫಿಯೇ ತೆಗೆದುಕೊಳ್ಳಲು ಹೋಗಿ ಏನು ಮಾಡಿಕೊಂಡಿದ್ದಾಳೆ ಗೊತ್ತೇ?? ಶಾಕ್ ಆದ ಮಾವ, ಗಂಡ.
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಯುವಜನತೆಗೆ ಮಾಡರ್ನ್ ಆಗಿ ಇರಬೇಕು ಎನ್ನುವ ಹುಚ್ಚು ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಅದಕ್ಕಾಗಿ ಅವರು ಪ್ರಮುಖವಾಗಿ ಅವಲಂಬಿಸುವ ವಸ್ತು ಎಂದರೆ ಅದು ಮೊಬೈಲ್. ಅದರಲ್ಲಿ ಮೊಬೈಲ್ ನಲ್ಲಿರುವ ಕ್ಯಾಮೆರಾವನ್ನು ಉಪಯೋಗಿಸಿಕೊಂಡು ಸೆಲ್ಫಿ ಎನ್ನುವ ಕಾಯಿಲೆಗೆ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಸೇರಿಸಿಯೇ ಹುಚ್ಚು ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಇನ್ನು ನಾವು ಮಾತನಾಡಲು ಹೊರಟಿರುವ ವಿಚಾರವೂ ಕೂಡ ಇದೇ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ.
ಸೆಲ್ಫಿಯ ಗೀಳಿನಿಂದಾಗಿ 26 ವರ್ಷದ ರಾಧಿಕಾ ಗುಪ್ತ ಮಾಡಿಕೊಂಡಿರುವ ಕಾರ್ಯಕ್ಕೆ ಈಗ ಆಕೆಯ ಕುಟುಂಬದ ಕಣ್ಣೀರು ಹಾಕುತ್ತಿದೆ. ಅಷ್ಟಕ್ಕೂ ನಡೆದಿದ್ದಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ. ಲಕ್ನೋ ಮೂಲದವರ ಆಗಿರುವ ರಾಧಿಕಾ ಗುಪ್ತಾ ರವರು ಕಳೆದ ವರ್ಷದ ಮೇ ತಿಂಗಳಿನಲ್ಲಿ ಆಕಾಶ್ ಎನ್ನುವವರನ್ನು ಮದುವೆಯಾಗಿದ್ದರು. ಇನ್ನು ರಾಧಿಕಾ ಗುಪ್ತಾರವರಿಗೆ ಮೊದಲಿನಿಂದಲೂ ಕೂಡ ಸೆಲ್ಫಿ ತೆಗೆದುಕೊಳ್ಳುವ ಹುಚ್ಚಿದೆ. ಇನ್ನು ತಮ್ಮ ಗಂಡನ ತಂದೆಯೆಂದರೆ ಮಾವನ ಬಳಿ ಗನ್ನಿದೆ ಎಂಬುದಾಗಿ ಹಾಕಿದೆ ತಿಳಿದುಬಂದಿದೆ. ಹೀಗಾಗಿ ತಮ್ಮ ಗಂಡ ಆಕಾಶ್ ಬಳಿ ಹೇಳಿ ಅದನ್ನು ಕೊಡುವಂತೆ ಕೇಳುತ್ತಾರೆ. ಆದರೆ ಅದು ಲೈಸೆನ್ಸ್ ಹೊಂದಿರುವ ಗ’ನ್ ಆಗಿದ್ದ ಕಾರಣದಿಂದಾಗಿ ಅದನ್ನು ಎಲೆಕ್ಷನ್ ಸಮಯದಲ್ಲಿ ಪೊಲೀಸ್ ಠಾಣೆಗೆ ನೀಡಲಾಗಿತ್ತು.
ಇಷ್ಟಿದ್ದರೂ ಕೂಡ ರಾಧಿಕಾ ಗುಪ್ತಾ ರವರು ಗನ್ನನ್ನು ಮನೆಗೆ ತರಲು ತಮ್ಮ ಗಂಡ ಆಕಾಶ ಬಳಿ ಹಠ ಮಾಡುತ್ತಾರೆ. ಹೆಂಡತಿಯರ ಗಳ ತಾಳಲಾರದೆ ಪೊಲೀಸ್ ಸ್ಟೇಷನ್ ಗೆ ಹೋಗಿ ಆಕಾಶ್ ಗನ್ನನ್ನು ಮನೆಗೆ ತಂದು ಹೆಂಡತಿಯ ಬಳಿ ನೀಡುತ್ತಾರೆ. ಇದು ನಡೆದಿದ್ದು ಕಳೆದ ತಿಂಗಳಷ್ಟೇ. ರಾಧಿಕಾ ಗುಪ್ತ ಗ’ನ್ ಮನೆಗೆ ಬಂದ ಮೇಲೆ ಹಲವಾರು ಫೋಟೋಗಳನ್ನು ಕೂಡ ತೆಗೆದುಕೊಂಡು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದರೆ ಇತ್ತೀಚಿಗಷ್ಟೇ ಸೆಲ್ಫಿ ತೆಗೆದು ಕೊಳ್ಳುವ ಭರದಲ್ಲಿ ಲೋಡ್ ಆಗಿದ್ದ ಗನ್ನಿನ ಟ್ರಿಗರ್ ಅನ್ನು ರಾಧಿಕಾ ಗುಪ್ತ ರವರು ಒತ್ತಿ ಬಿಟ್ಟಿದ್ದಾರೆ.
ಆಗ ಗನ್ನಿನಿಂದ ಹಾರಿದ ಗುಂಡು ಎನ್ನುವುದು ಕುತ್ತಿಗೆ ಮೂಲಕ ಹೊರಹೋಗಿದೆ. ಕೂಡಲೇ ರಾಧಿಕಾ ಗುಪ್ತ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡಲಾಯಿತಾದರೂ ಕೂಡ ಅದಾಗಲೇ ಮಾರ್ಗಮಧ್ಯದಲ್ಲಿ ರಾಧಿಕಾ ಗುಪ್ತ ರವರು ತಮ್ಮ ಕೊನೆಯ ಉಸಿರನ್ನು ಎಳೆದುಬಿಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮನೆಯವರು ಕಳೆದ ಬಾರಿ ಚುನಾವಣೆ ಕಾರಣದಿಂದಾಗಿ ಗನ್ನನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇಡಲಾಗಿತ್ತು ಆದರೆ ರಾಧಿಕ ಹಟ ಮಾಡಿದಳು ಎನ್ನುವ ಕಾರಣಕ್ಕಾಗಿ ಅದನ್ನು ಮತ್ತೆ ಮನೆಗೆ ತಂದು ಮಹಡಿಯ ಮೇಲೆ ಇರಿಸಲಾಗಿತ್ತು.
ಇದನ್ನು ಹಿಡಿದುಕೊಂಡು ಸಾಕಷ್ಟು ಬಾರಿ ರಾಧಿಕಾ ಸೆಲ್ಫಿ ಅನ್ನು ಕೂಡ ತೆಗೆದುಕೊಂಡಿದ್ದಾಳೆ. ಆದರೆ ಮತ್ತೆ ಇತ್ತೀಚಿಗೆ ಸೆಲ್ಫಿ ತೆಗೆದುಕೊಳ್ಳುವ ಹೊತ್ತಿನಲ್ಲಿ ಅಚಾತುರ್ಯದಿಂದ ಈ ಘಟನೆ ನಡೆದಿದೆ ಎನ್ನುವುದಾಗಿ ರಾಧಿಕಾ ಗುಪ್ತಾಳ ಗಂಡ ಆಕಾಶ್ ಸೇರಿದಂತೆ ಎಲ್ಲರೂ ಕೂಡ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಸಾಮಾನ್ಯವಾಗಿ ನಾವು ಈ ರೀತಿ ಕಥೆ ಓದಬೇಕಾದರೆ ಇದನ್ನು ಅವಳೇ ಮಾಡಿಕೊಂಡಿದ್ದಾಳೆ ಎಂಬುದಾಗಿ ಒಂದು ಕೊಳ್ಳಬಹುದಾಗಿದೆ.
ಆದರೆ ಪೊಲೀಸ್ ಒಂದೇ ದೃಷ್ಟಿಯಲ್ಲಿದ್ದರೆ ತನಿಖೆ ಮಾಡುವುದಿಲ್ಲ ಬದಲಾಗಿ ಇದನ್ನು ಆಕೆಯೇ ಮಾಡಿಕೊಂಡಿದ್ದಾಳೆಯೇ ಅಥವಾ ಇಲ್ಲಿ ಏನಾದರೂ ನಡೆದಿದೆಯೇ ಎನ್ನುವ ದೃಷ್ಟಿಯಲ್ಲಿ ಕೂಡ ತನಿಖೆಯನ್ನು ನಡೆಸುತ್ತಿದ್ದಾರೆ. ಇದು ತನಿಖೆ ಪೂರ್ಣಗೊಂಡ ಮೇಲೆ ಮುಂದಿನ ದಿನಗಳಲ್ಲಿ ತಿಳಿದುಬರಬೇಕಾಗಿದೆ. ಆದರೆ ಈಗ ನಮಗೆ ತಿಳಿದಿರುವಂತಹ ಕಥೆಯ ಪ್ರಕಾರ ರಾಧಿಕಾ ಗುಪ್ತ ಕೇವಲ ಸೆಲ್ಫಿ ಹುಚ್ಚಿ ಗಾಗಿ ಬಹಳಷ್ಟು ವರ್ಷಗಳ ಕಾಲ ಬಾಳ ಬೇಕಾಗಿದ್ದ ಆಕೆ ಅಕಾಲಿಕವಾಗಿ ತನ್ನ ಕಾರಣದಿಂದಾಗಿ ತಾನು ಮರಣ ಹೊಂದಿದ್ದಾಳೆ ಎಂಬುದಾಗಿ ಹೇಳಬಹುದು. ನಿಜಕ್ಕೂ ಕೂಡ ಇದು ವಿಷಾದನೀಯ ವಿಚಾರವಾಗಿದ್ದು ಸೆಲ್ಫಿ ಹುಚ್ಚ್ ಇರುವವರು ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿ ತಮ್ಮನ್ನು ತಾವು ಕಂಟ್ರೋಲ್ನಲ್ಲಿ ಇಟ್ಟುಕೊಳ್ಳಬೇಕಾಗಿರುವುದು ಅಗತ್ಯವಾಗಿದೆ ಎಂದು ಹೇಳಬಹುದಾಗಿದೆ.